ಸುರಕ್ಷಿತ ಹಣ ಹೂಡಿಕೆ ಮಾರ್ಗವನ್ನು ಹುಡುಕ್ತಿದ್ದೀರಾ? : ಇಲ್ಲಿದೆ ವಿವಿಧ ಬ್ಯಾಂಕ್ ಗಳಲ್ಲಿ ಲಭ್ಯವಿರುವ Top-5 FD ಯೋಜನೆಗಳು

0
(Representative Image Used)

ಪುತ್ತೂರು: ಸುರಕ್ಷಿತ ರೀತಿಯಲ್ಲಿ ಹಣವನ್ನು ಹೂಡಿಕೆ ಮಾಡಲು ನೀವು ಪ್ಲ್ಯಾನ್ ಮಾಡುತ್ತಿದ್ದಲ್ಲಿ ದೇಶದ ಪ್ರಮುಖ ರಾಷ್ಟ್ರೀಕೃತ ಮತ್ತು ಸಾರ್ವಜನಿಕ ರಂಗದ ಬ್ಯಾಂಕುಗಳು ಆಕರ್ಷಕ ಬಡ್ಡಿದರದಲ್ಲಿ ಅಲ್ಪಾವಧಿ (ಶಾರ್ಟ್ ಟರ್ಮ್) ಹೂಡಿಕೆ ಅವಕಾಶಗಳನ್ನು ಪರಿಚಯಿಸಿದ್ದು, ಅವುಗಳ ವಿವರ ಇಲ್ಲಿದೆ:

SBI ಅಮೃತ್ ವೃಷ್ಟಿ ಯೋಜನೆ (SBI Amrit Vrishti scheme)

ಈ ವರ್ಷದ ಜುಲೈ ತಿಂಗಳಿನಲ್ಲಿ ಈ ಎಫ್.ಡಿ. ಯೋಜನೆಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪರಿಚಯಿಸಿದ್ದು, ಅಮೃತ್ ವೃಷ್ಟಿ ಹೆಸರಿನ ಈ ಹೂಡಿಕೆ ಯೋಜನೆಯಲ್ಲಿ ಗ್ರಾಹಕರು 444 ದಿನಗಳ ಕಾಲ ತಮ್ಮ ಹಣವನ್ನು ಹೂಡಿಕೆ ಮಾಡಬೆಕಾಗಿದ್ದು ಇದಕ್ಕೆ 7.25% ಬಡ್ಡಿಯನ್ನು ನೀಡಲಾಗುತ್ತದೆ. ಆದರೆ ಹಿರಿಯ ನಾಗರಿಕರಿಗೆ 7.75% ಬಡ್ಡಿ ಸಿಗುತ್ತದೆ. ಜುಲೈ 15ರಂದು ಪರಿಚಯಗೊಂಡ ಈ ಹೂಡಿಕೆ ಯೋಜನೆ 2025ರ ಮಾರ್ಚ್ 31ರವರೆಗೆ ಚಾಲ್ತಿಯಲ್ಲಿರುತ್ತದೆ.

ಬ್ಯಾಂಕ್ ಆಫ್ ಬರೋಡಾದ ಮಾನ್ಸೂನ್ ಧಮಾಕಾ (Monsoon Dhamaka Scheme) ಯೋಜನೆ

ಬ್ಯಾಂಕ್ ಆಫ್ ಬರೋಡಾವು ಈ ವರ್ಷದ ಜುಲೈ ತಿಂಗಳಿನಲ್ಲಿ ಮಾನ್ಸೂನ್ ಧಮಾಕಾ ಎಂಬ ಎಫ್.ಡಿ. ಯೋಜನೆಯನ್ನು ಗ್ರಾಹಕರಿಗೆ ಪರಿಚಯಿಸಿದ್ದು, ಈ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡುವವರಿಗೆ 333 ದಿನಗಳಿಗೆ 7.15% ಬಡ್ಡಿ ಸಿಗುತ್ತದೆ, ಮತ್ತು ಹಿರಿಯ ನಾಗರಿಕರಿಗೆ ಈ ಎಫ್.ಡಿ. ಯೋಜನೆಯಲ್ಲಿ 7.65% ಬಡ್ಡಿ ಸಿಗಲಿದೆ. ಇದೇ ಯೋಜನೆಯ ಇನ್ನೊಂದು ಅವಕಾಶವಿದ್ದು 399 ದಿನಗಳ ಕಾಲ ಹೂಡಿಕೆ ಮಾಡಿದಲ್ಲಿ ಸಾಮಾನ್ಯ ಹೂಡಿಕೆದಾರರಿಗೆ 7.25% ಹಾಗೂ ಹಿರಿಯ ನಾಗರಿಕರಿಗೆ 7.75% ಬಡ್ಡಿ ಸಿಗಲಿದೆ.

ಇಂಡ್ ಸೂಪರ್ 400 ದಿನಗಳು (IND Super 400 Days)

ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕುಗಳಲ್ಲಿ ಒಂದಾಗಿರುವ ಚೆನ್ನೈ ಮೂಲದ ಇಂಡಿಯನ್ ಬ್ಯಾಂಕ್ 300 ರಿಂದ 400 ದಿನಗಳ ಅವಧಿಗೆ ಅಂತ್ಯಗೊಳ್ಳುವ ಎಫ್.ಡಿ. ಯೋಜನೆಯೊಂದನ್ನು ಗ್ರಾಹಕರಿಗೆ ಪರಿಚಯಿಸಿದ್ದು, ಇದಕ್ಕೆ ‘ಇಂಡ್ ಸೂಪರ್ 400 ದಿನಗಳು’ ಹಾಗೂ ‘ಇಂಡ್ ಸೂಪರ್ 300 ದಿನಗಳು’ ಎಂದು ಹೆಸರಿಡಲಾಗಿದೆ. ‘ಇಂಡ್ ಸೂಪರ್ 400’ ಹೆಸರಿನ ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಸಾಮಾನ್ಯ ಹೂಡಿಕೆದಾರರಿಗೆ 400 ದಿನಗಳಿಗೆ 7.25% ಹಾಗೂ ಹಿರಿಯ ನಾಗರಿಕರಿಗೆ 7.75% ಬಡ್ಡಿ ಸಿಗಲಿದೆ. ಇನ್ನು, ಇಂಡ್ ಸುಪ್ರೀಂ 300 ದಿನಗಳ ಎಫ್.ಡಿ. ಯೋಜನೆಯಲ್ಲಿ, ಹಿರಿಯ ನಾಗರಿಕರಿಗೆ 7.55% ಮತ್ತು ಸಾಮಾನ್ಯ ಹೂಡಿಕೆದಾರರಿಗೆ 7.05% ಬಡ್ಡಿ 300 ದಿನಗಳ ಹೂಡಿಕೆಗೆ ಸಿಗಲಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಸೆಪ್ಟೆಂಬರ್ 30 ಅಂತಿಮ ದಿನಾಂಕವಾಗಿರುತ್ತದೆ.

IDBI ಬ್ಯಾಂಕ್ ಎಫ್.ಡಿ. ಯೋಜನೆ

ಐಡಿಬಿಐ ಬ್ಯಾಂಕ್ ಅಮೃತ ಮಹೋತ್ಸವ ಹೆಸರಿನ ಎಫ್.ಡಿ. ಯೋಜನೆಯಲ್ಲಿ 375 ಮತ್ತು 445 ದಿನಗಳಿಗೆ ಹೂಡಿಕೆ ಮಾಡಬಹುದಾಗಿದ್ದು, 300 ದಿನಗಳ ಹೂಡಿಕೆಗೆ ಸಾಮಾನ್ಯ ಹೂಡಿಕೆದಾರರಿಗೆ 7.05% ಮತ್ತು ಹಿರಿಯ ನಾಗರಿಕರಿಗೆ 7.55% ಬಡ್ಡಿ ಲಭಿಸಲಿದೆ.  ಇನ್ನು, ಈ ಯೋಜನೆಯಲ್ಲಿ 375 ದಿನಗಳವರೆಗೆ ಹೂಡಿಕೆ ಮಾಡಿದಲ್ಲಿ ಸಾಮಾನ್ಯ ಹೂಡಿಕೆದಾರರಿಗೆ 7.25% ಮತ್ತು ಹಿರಿಯ ನಾಗರಿಕರಿಗೆ 7.75% ಬಡ್ಡಿ ಸಿಗಲಿದೆ. ಅದೇ ಈ ಯೋಜನೆಯಲ್ಲಿ 444 ದಿನಗಳಿಗೆ ಹೂಡಿಕೆ ಮಾಡುವವ ಸಾಮಾನ್ಯ ಹೂಡಿಕೆದಾರರಿಗೆ 7.35% ಮತ್ತು ಹಿರಿಯ ನಾಗರಿಕರಿಗೆ 7.85% ಬಡ್ಡಿ ಪಡೆದುಕೊಳ್ಳಲು ಅವಕಾಶವಿದೆ.

RBL ಬ್ಯಾಂಕಿನ ವಿಜಯ್ ಎಫ್.ಡಿ. ಯೋಜನೆ

ಈ ಬಾರಿಯ ಸ್ವಾತಂತ್ರ್ಯ ದಿನದಂದು ಆರ್.ಎಲ್.ಬಿ ಬ್ಯಾಂಕ್ 500 ದಿನಗಳ ಅವಧಿಯ ವಿಜಯ್ ಎಫ್.ಡಿ. ಯೋಜನೆಯನ್ನು ಪರಿಚಯಿಸಿದ್ದು, ಇದರಲ್ಲಿ ಹೂಡಿಕೆ ಮಾಡುವ ಗ್ರಾಹಕರಿಗೆ 8.6% ಬಡ್ಡಿ ಸಿಗಲಿದೆ. ಇನ್ನು ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಹಿರಿಯ ನಾಗರಿಕರಿಗೆ 8.6% ಬಡ್ಡಿ ಸಿಗಲಿದೆ.

ದೇಶಾದ್ಯಂತ ಬ್ಯಾಂಕುಗಳಲ್ಲಿ ಹೂಡಿಕೆ ಪ್ರಮಾಣವನ್ನು ಉತ್ತೇಜಿಸಲು ಕಳೆದೆರಡು ತಿಂಗಳುಗಳಲ್ಲಿ ಈ ಮೇಲಿನ ಬ್ಯಾಂಕುಗಳು ಆಕರ್ಷಕ ಹೂಡಿಕೆ ಸ್ಕೀಂಗಳನ್ನು ತಮ್ಮ ಗ್ರಾಹಕರಿಗಾಗಿ ಜಾರಿಗೊಳಿಸಿವೆ.

(ಮಾಹಿತಿ ಮೂಲ: ಲೈವ್ ಮಿಂಟ್.ಕಾಮ್)

LEAVE A REPLY

Please enter your comment!
Please enter your name here