ಆಭರಣ ಪ್ರಿಯರಿಗೆ ಸಿಗಲಿದೆ ಉಚಿತ ಚಿನ್ನದ ನಾಣ್ಯ ಉಡುಗೊರೆ…
ಆಭರಣ ಪ್ರದರ್ಶನಕ್ಕೆ ಅದ್ದೂರಿ ಚಾಲನೆ ನೀಡಿದ ಮಾಜಿ ಶಾಸಕ ಮಠಂದೂರು
ಪುತ್ತೂರು : ಅಂತರಾಷ್ಟ್ರೀಯ ಮಟ್ಟದಲ್ಲಿ 160 ಮಳಿಗೆ ಹೊಂದಿರುವಂತ , ಭಾರತವೊಂದರಲ್ಲೇ ನೂರಕ್ಕೂ ಮಿಕ್ಕಿ ಮಳಿಗೆ ಹೊಂದಿ, ರಾಜ್ಯದಲ್ಲೇ 18 ಮಳಿಗೆ ಹೊಂದಿರುವ ಹೆಸರಾಂತ ಚಿನ್ನಾಭರಣ ಹಾಗೂ ವಜ್ರಾಭರಣಗಳ ಮಾರಾಟ, ಸೇವಾ ಮಳಿಗೆ ಜೋಯ್ ಅಲುಕ್ಕಾಸ್ ಸಂಸ್ಥೆ ಇದರ 68ನೇ ವಾರ್ಷಿಕೋತ್ಸವ ಪ್ರಯುಕ್ತವಾಗಿ ಮೆಚ್ಚಿನ ಆಭರಣ ಪ್ರಿಯರಿಗಾಗಿ ಪುತ್ತೂರಿನಲ್ಲಿ ಆ.23ರಿಂದ 25 ತನಕ ಬೃಹತ್ ಚಿನ್ನಾಭರಣ ಪ್ರದರ್ಶನ ಜೊತೆಗೆ ಅದ್ಬುತ ಕೊಡುಗೆಗಳನ್ನು ಘೋಷಣೆ ಮಾಡಿದೆ.
ಪುತ್ತೂರಿನಲ್ಲೇ ಪ್ರಪ್ರಥಮವಾಗಿ ಬೃಹತ್ ಜ್ಯುವೆಲ್ಲರಿ ಪ್ರದರ್ಶನ ಆರಂಭಿಸೋ ಮೂಲಕ, ಆಭರಣ ಪ್ರಿಯರಿಗೆ ಅತೀವ ಸಂತಸದ ಸುದ್ದಿಯನ್ನು ನೀಡಿದ್ದು, ಇಲ್ಲಿನ ಮುಖ್ಯರಸ್ತೆ ಅರುಣಾ ಕಲಾಮಂದಿರದಲ್ಲಿ ಆಯೋಜಿಸಿರುವ ಆಭರಣ ಮೇಳಕ್ಕೆ ಮಾಜಿ ಶಾಸಕ ಸಂಜೀವ ಮಠಂದೂರು ದೀಪ ಪ್ರಜ್ವಲನೆ ಮೂಲಕ ಚಾಲನೆ ನೀಡಿ , ಉದ್ಘಾಟಿಸಿದರು.
ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಸುದಾನ ವಿದ್ಯಾ ಸಂಸ್ಥೆಯ ಮುಖ್ಯಸ್ಥರಾದ ವಿಜಯ ಹಾರ್ವಿನ್ ದಂಪತಿ, ತಾಲೂಕು ಆರೋಗ್ಯಧಿಕಾರಿ ಡಾ. ದೀಪಕ್ ರೈ, ವಿಘ್ನೇಶ್ವರ ಸ್ಟೀಲ್ ಹಾರ್ಡ್ವೇರ್ ಮಾಲೀಕ ಸುಧೀರ್ ಶೆಟ್ಟಿ ದಂಪತಿ, ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ, ಕಡಬ ದುರ್ಗಾಪರಮೇಶ್ವರಿ ದೇವಾಲಯದ ವ್ಯವಸ್ಥಾಪಕ ಸಮಿತಿ ಸದಸ್ಯ ಕಿಶನ್ ರೈ ,
ಅರುಣ ಕಲಾ ಮಂದಿರ ಇದರ ಮಾಲೀಕರಾದ ರಮಾನಂದ ನಾಯಕ್ ದಂಪತಿ, ರಾಜ್ಯ ರಸ್ತೆ ಸಾರಿಗೆ ನಿಗಮ ಪುತ್ತೂರು ಇದರ ಡಿ.ಟಿ.ಐ. ವೆಂಕಟ್ರಮಣ ಭಟ್ ಸಹಿತ ಹಲವು ಗಣ್ಯರು ಹಾಜರಿದ್ದರು.
ಜಾಯ್ ಅಲುಕಾಸ್ ಸಂಸ್ಥೆಯ ವ್ಯವಸ್ಥಾಪಕ ಹರೀಶ್ ಪಿ, ಸಹಾಯಕ ವ್ಯವಸ್ಥಾಪಕ ಗಂಗಾಧರ್, ಇನ್ ಚಾರ್ಜ್ ಝಾಕೀರ್, ಮಾರ್ಕೆಟಿಂಗ್ ಮ್ಯಾನೇಜರ್ ಮಧು, ಸಿ ಆರ್ ಓ ಮೊಹಮ್ಮದ್ ಹನೀಫಿಕ್
ಸಹಿತ ಸಂಸ್ಥೆ ಸಿಬ್ಬಂದಿಗಳು ಹಾಗೂ ಗ್ರಾಹಕರು ಹಾಜರಿದ್ದರು. ಸಾಯಿ ಶ್ರುತಿ ಕಾರ್ಯಕ್ರಮ ನಿರೂಪಿಸಿದರು.
ಪ್ರಥಮ ಗ್ರಾಹಕ ದಂಪತಿಗೆ ಆಭರಣಗಳನ್ನು ಸುದಾನ ವಿದ್ಯಾ ಸಂಸ್ಥೆ ಮುಖ್ಯಸ್ಥ ವಿಜಯ ಹಾರ್ವಿನ್ ಆಭರಣ ಹಸ್ತಾಂತರಿಸಿ, ಹಾರೈಸಿದರು. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಆಭರಣ ಕೊಡುಗೆಗಳ ಫಲಕ ಉದ್ಘಾಟಿಸಿದರು.
ಆಭರಣ ಪ್ರಿಯರಿಗೆ ಕೊಡುಗೆಗಳು…..
ಆಭರಣ ಪ್ರಿಯರು ರೂಪಾಯಿ 75 ಸಾವಿರಕ್ಕಿಂತ ಮೇಲ್ಪಟ್ಟ ಚಿನ್ನಾಭರಣದ ಖರೀದಿಗೆ 200 ಎಂ.ಜಿ. ಯ ಚಿನ್ನದ ನಾಣ್ಯ ಉಚಿತವಾಗಿ ಸಿಗಲಿದೆ. 1 ಲಕ್ಷ ಅಥವಾ ಅದಕ್ಕಿಂತ ಮಿಕ್ಕಿ ವಜ್ರಾಭರಣ ಖರೀದಿಗೆ 1 ಗ್ರಾಂ. ನ ಚಿನ್ನದ ನಾಣ್ಯ ಉಡುಗೊರೆಯಾಗಿ ಸಿಗಲಿದ್ದು, ಈ ಮೇಳವು ಆ.25ರಂದು ಕೊನೆಯಾಗಲಿದೆ.