ದರ್ಬೆ ಸಣ್ಣ ಕೈಗಾರಿಕಾ ಅಭಿವೃದ್ಧಿ ಸಹಕಾರ ಸಂಘದ ಮಹಾಸಭೆ

0

ಪುತ್ತೂರು: ದರ್ಬೆ ಸಣ್ಣ ಕೈಗಾರಿಕಾ ಅಭಿವೃದ್ಧಿ ಸಹಕಾರ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಆ.24ರಂದು ಸಂಘದ ಎ.ಪಿ ರೈ ಸ್ಮಾರಕ ಸಭಾಭವನದಲ್ಲಿ ನಡೆಯಿತು.
ಸಂಘದ ಕಾರ್ಯದರ್ಶಿ ಈಶ್ವರ ಭಟ್ ಎಂ. 202324ನೇ ಸಾಲಿನ ಲೆಕ್ಕಪರಿಶೋಧಕರ ವರದಿ, ಅನುಪಾಲನಾ ವರದಿ, ಬಜೆಟ್‌ಗಿಂತ ಹೆಚ್ಚಾದ ಖರ್ಚಿನ ವಿವರ 2024-25ನೇ ಸಾಲಿನ ಸಾಮಾನ್ಯ ಬಜೆಟ್ ವರದಿ, ಸಂಘದ ಮುಂದಿನ ಕಾರ್ಯಯೋಜನೆಗಳನ್ನು ತಿಳಿಸಿದರು. 2023-24ನೇ ಸಾಲಿನ ಸಂಘದ ಲಾಭಾಂಶ ವಿಂಗಡನೆ ತಿಳಿಸಿ ಸದಸ್ಯರಿಗೆ ಶೇ.16 ಡಿವಿಡೆಂಡ್ ನೀಡಲಾಗುವುದೆಂದು ಘೋಷಿಸಿದರು. ಬೈಲಾ ತಿದ್ದುಪಡಿ ಬಗ್ಗೆ ತಿಳಿಸಿದ ಅವರು ಸಂಘದಲ್ಲಿ ವ್ಯವಹಾರ ಮಾಡುವವರಿಗೆ ಮತದಾನದ ಹಕ್ಕು ಇರುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಟಿ.ವಿ.ರವೀಂದ್ರನ್ 2023-24ನೇ ಸಾಲಿನ ವರದಿ ವಾಚಿಸಿ ಪುತ್ತೂರು, ಸುಳ್ಯ ಹಾಗೂ ಬೆಳ್ತಂಗಡಿ ತಾಲೂಕಿನ ಕೈಗಾರಿಕೋದ್ಯಮಿಗಳು ಸೇರಿ ಪುತ್ತೂರು ಕೈಗಾರಿಕಾ ಸಂಘದ ಮೂಲಕ 1988ರಲ್ಲಿ ಸಂಘ ಸ್ಥಾಪನೆಯಾಗಿದೆ. ಸಣ್ಣ ಕೈಗಾರಿಕೆ ಸ್ಥಾಪಿಸಲು, ನಡೆಸಲು ಮತ್ತು ಅಭಿವೃದ್ಧಿ ಪಡಿಸಲು ಬೇಕಾಗುವ ಆರ್ಥಿಕ ಮತ್ತು ಇನ್ನಿತರ ಸಹಾಯಗಳನ್ನು ಸಂಘದಿಂದ ಒದಗಿಸಲಾಗುತ್ತದೆ ಎಂದರು. ವರದಿ ವರ್ಷಕ್ಕೆ 488 ಸದಸ್ಯರಿದ್ದು ರೂ.35,49,600 ಸದಸ್ಯರ ಪಾಲು ಬಂಡವಾಳ ಮತ್ತು ರೂ.65,000 ಸರಕಾರದ ಪಾಲು ಬಂಡವಾಳ ಇರುತ್ತದೆ. ರೂ.5,86,18,307 ಠೇವಣಿ, ರೂ.4,30,31,568 ಹೊರ ಬಾಕಿ ಸಾಲ ಸಂಘದಲ್ಲಿದ್ದು ಶೇ.97.76 ಸಾಲ ವಸೂಲಾತಿಯಾಗಿದೆ. ಸಂಘಕ್ಕೆ ಲೆಕ್ಕಪರಿಶೋಧನೆ ಪ್ರಕಾರ ರೂ.14,09,234.63 ಲಾಭಾಂಶ ಬಂದಿದ್ದು ಅಡಿಟ್ ವರ್ಗೀಕರಣದಲ್ಲಿ ಸಂಘ “ಎ” ಶ್ರೇಣಿಯನ್ನು ಪಡೆದಿದೆ ಎಂದು ಹೇಳಿ ಸಹಕರಿಸಿದ ಎಲ್ಲಾ ಗ್ರಾಹಕವರ್ಗದವರಿಗೆ, ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.


ಸಂಘದ ಸದಸ್ಯರಾದ ಲೋಕೇಶ್ ಹೆಗ್ಡೆ, ಶಿವಶಂಕರ ಭಟ್, ಜಾನ್ ಕುಟಿನ್ಹಾ ವಿವಿಧ ಸಲಹೆ ಸೂಚನೆ ನೀಡಿದರು. ನಿರ್ದೇಶಕರಾದ ಪ್ರೇಮಾನಂದ ಡಿ., ಪದ್ಮಶ್ರೀ ಡಾ|ಗಿರೀಶ್ ಭಾರದ್ವಾಜ್, ರವಿರಾಜ ಭಟ್, ಕೆ. ಮೀನಾಕ್ಷಿ ಮಂಜುನಾಥ್, ಮೋಹನ್ ಕುಮಾರ್ ಬೊಳ್ಳಾಡಿ, ಸುಧೀರ್ ಶೆಟ್ಟಿ ಪಿ., ಕೇಶವ ಬಿ., ಮಹಾಲಕ್ಷ್ಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಪ್ರಸನ್ನ ಕುಮಾರ್ ರೈ ಸ್ವಾಗತಿಸಿ ನಿರ್ದೇಶಕ ಕೃಷ್ಣಮೋಹನ್ ವಂದಿಸಿದರು. ಲೆಕ್ಕಿಗ ರಘುನಾಥ ರೈ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿ ಜಗದೀಶ ಎ., ಪಿಗ್ಮಿ ಸಂಗ್ರಾಹಕ ಮುರಳಿ ಎಂ ಸಹಕರಿಸಿದರು. ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here