ನಿಡ್ಪಳ್ಳಿ: ಯಾದವ ಸಭಾ ಪ್ರಾದೇಶಿಕ ಸಮಿತಿ ಆರ್ಲಪದವು ಪಾಣಾಜೆ ಇದರ ಆಶ್ರಯದಲ್ಲಿ 18 ನೇ ವರ್ಷದ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಆ.26 ರಂದು ಆರ್ಲಪದವು ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂದಿರದ ವಠಾರದಲ್ಲಿ ಬಹಳ ಸಂಭ್ರಮ ಸಡಗರದಿಂದ ನಡೆಯಿತು.
ಧಾರ್ಮಿಕ ಸಭೆ- ಸನ್ಮಾನ- ಬಹುಮಾನ ವಿತರಣೆ
ಸಂಜೆ ನಡೆದ ಧಾರ್ಮಿಕ ಸಭೆಯನ್ನು ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಉದ್ಘಾಟಿಸಿ ಮಾತನಾಡಿ ಇದು ಯಾದವ ಸಭಾ ಪ್ರಾದೇಶಿಕ ಸಮಿತಿಯ ಒಂದು ಅದ್ಭುತ ಕಾರ್ಯಕ್ರಮ. ಭಾರತ ದೇಶ ವಿಭಿನ್ನ ಜಾತಿ ಧರ್ಮ ಇರುವ ದೇಶ. ಇಲ್ಲಿ ಈ ಸಮುದಾಯದ ಒಗ್ಗಟ್ಟು, ಪ್ರೀತಿಯಲ್ಲಿ ನಾನು ವಿಶೇಷತೆಯನ್ನು ಕಂಡವನು ಮತ್ತು ಇವರೊಂದಿಗೆ ನನಗೆ ಅವಿನಾಭಾವ ಸಂಬಂಧ. ಸರಳ ಸಜ್ಜನಿಕೆಯಿಂದ ಒಳ್ಳೆಯ ಗುಣ, ಸ್ನೇಹಪರತೆ ಇರುವ ಈ ಸಮಾಜ ಎಲ್ಲರೊಂದಿಗೆ ಸೇರಿ ಈ ಕಾರ್ಯಕ್ರಮ ನಡೆಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ಹೇಳಿದ ಅವರು ಕಾರ್ಯಕ್ರಮದ ಬಗ್ಗೆ ಪ್ರಶಂಸಿಸಿ ಶುಭ ಹಾರೈಸಿದರು.
ಪುತ್ತೂರು ಸುದಾನ ಪಿ.ಯು.ಕಾಲೇಜು ಪ್ರಾಂಶುಪಾಲ ಸುಪ್ರೀತ್ ಕೆ.ಸಿ ಬೆಟ್ಟಂಪಾಡಿ ಮಾತನಾಡಿ ಶ್ರೀಕೃಷ್ಣ ದೇವರ ಗುಣ ಮತ್ತು ಆದರ್ಶಗಳನ್ನು ವಿವರಿಸಿದರು.
ಖ್ಯಾತ ಕ್ಯಾನ್ಸರ್ ತಜ್ಞ ಡಾ.ರಘು ಬೆಳ್ಳಿಪ್ಪಾಡಿ, ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸದಸ್ಯ ನವೀನ್ ರೈ ಚೆಲ್ಯಡ್ಕ, ಮಂಗಳೂರು ಯಾದವ ಸಭಾ ಕೇಂದ್ರೀಯ ಸಮಿತಿ ಅಧ್ಯಕ್ಷ ಎ.ಕೆ.ಮಣಿಯಾಣಿ ಬೆಳ್ಳಾರೆ, ಸ್ನೇಹ ಟೆಕ್ಸ್ ಟೈಲ್ಸ್ & ರೆಡಿಮೇಡ್ಸ್ ಮಾಲಕ ವರದರಾಯ ನಾಯಕ್, ಪಾಣಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಜಯಶ್ರೀ ದೇವಸ್ಯ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಅರಣ್ಯ ಇಲಾಖೆಯ ಅಧಿಕಾರಿ ಸುರೇಶ್ ಬಾಬು, ಸಮಿತಿಯ ಅಧ್ಯಕ್ಷ ಧನಂಜಯ ಮಣಿಯಾಣಿ ಆರ್ಲಪದವು, ಕಾರ್ಯದರ್ಶಿ ಹರಿಕೃಷ್ಣ ಕೆ.ಆರ್ ಕಂಪ, ಕೋಶಾಧಿಕಾರಿ ಶಿವರಾಮ ಮಣಿಯಾಣಿ ದೇವಸ್ಯ, ಶುಭಲಕ್ಷ್ಮೀ ಆರ್ಲಪದವು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುತ್ತೂರು ತಾಲೂಕು ಯಾದವ ಸಭಾ ಸಮಿತಿ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ ಅಧ್ಯಕ್ಷತೆ ವಹಿಸಿದ್ದರು.ಮಾಜಿ ಶಾಸಕ ಸಂಜೀವ ಮಠಂದೂರು ಕಾರ್ಯಕ್ರಮದ ಮಧ್ಯದಲ್ಲಿ ಆಗಮಿಸಿ ಶುಭ ಹಾರೈಸಿ ತೆರಳಿದರು
- ಸನ್ಮಾನ ಸಮಾರಂಭ; ಭತ್ತ ತಳಿ ಸಂರಕ್ಷಕ ಪದಶ್ರೀ ಪ್ರಶಸ್ತಿ ಪುರಸ್ಕೃತ ಸತ್ಯನಾರಾಯಣ ಮಣಿಯಾಣಿ ಬೆಳೇರಿ, ನಿವೃತ್ತ ಕೆ.ಎಸ್.ಅರ್.ಟಿ.ಸಿ ಅಧಿಕಾರಿ ತಮ್ಮಣ್ಣ ನಾಯ್ಕ ಸುಡ್ಕುಳಿ, ನಿವೃತ್ತ ಕಾರ್ಮಿಕ ಭವಿಷ್ಯ ನಿಧಿ ಅಧಿಕಾರಿ ಗೋಪಾಲ ಮಣಿಯಾಣಿ ಕಂಪ ಮತ್ತು ನಾರಾಯಣಿ ದಂಪತಿ, ನಿವೃತ್ತ ಆರ್.ಟಿ.ಒ ಅಧಿಕಾರಿ ಪುರುಷೋತ್ತಮ ಮಣಿಯಾಣಿ ದಂಪತಿ, ಉಡುಪಿ ಜಿಲ್ಲಾ ವಕೀಲರ ಸಂಘದ ಪ್ರ.ಕಾರ್ಯದರ್ಶಿ ರಾಜೇಶ್ ಎ.ಆರ್ ಆರ್ಲಪದವು ಇವರನ್ನು ಶಾಲು ಹೊದಿಸಿ ಫಲಪುಷ್ಪ, ಸನ್ಮಾನ ಪತ್ರ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.ವಿದ್ಯಾಶ್ರೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಾವು ಹೇಮನಾಥ ಶೆಟ್ಟಿ ಇವರನ್ನು ಗೌರವಿಸಲಾಯಿತು. ಸನ್ಮಾನಿತರು ಅನಿಸಿಕೆ ವ್ಯಕ್ತ ಪಡಿಸಿದರು.
ನವೀನ್ ಕುಮಾರ್.ಎಂ , ಶಿವಪ್ರಸಾದ್ ತಲೆಪ್ಪಾಡಿ, ವಿದ್ಯಾಶ್ರೀ ಸನ್ಮಾನಿತರ ಸನ್ಮಾನ ಪತ್ರ ವಾಚಿಸಿದರು.ದಿನೇಶ್ ಯಾದವ್ ವಂದಿಸಿದರು. ಶ್ರೀಹರಿ ನಡುಕಟ್ಟ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ಗೋಪಾಲ ಮಣಿಯಾಣಿ, ರಂಜಿತ್ ಪಡ್ಯಂಬೆಟ್ಟು, ದಿನೇಶ್ ಆರ್ಲಪದವು, ಕೀರ್ತನ್ ಭರಣ್ಯ, ಕುಂಞ ಮಣಿಯಾಣಿ, ಶಿವರಾಮ ಮಣಿಯಾಣಿ, ಶಶಿಕಲಾ ಗುವೆಲ್ ಗದ್ದೆ, ವಿಜಯ ಮಣಿಯಾಣಿ ಭರಣ್ಯ, ಜಯಂತಿ ದೇವಸ್ಯ ಅತಿಥಿಗಳಿಗೆ ಶಾಲು ಹಾಕಿ ಸ್ವಾಗತಿಸಿದರು. ಸಮಿತಿಯ ಸದಸ್ಯರು ಸಹಕರಿಸಿದರು.
ಬೆಳಿಗ್ಗೆ ಯಾದವ ಸಭಾ ಕೇಂದ್ರೀಯ ಸಮಿತಿ ಮಂಗಳೂರು ಇದರ ಮಾಜಿ ಅಧ್ಯಕ್ಷೆ ಶುಭಲಕ್ಷ್ಮೀ ಆರ್ಲಪದವು ಕಾರ್ಯಕ್ರಮ ಉದ್ಘಾಟಿಸಿದರು.
ಬೆಳಿಗ್ಗೆ ಗಣಹೋಮ ನಂತರ ವಿವಿಧ ಭಜನಾ ಸಂಘದಿಂದ ಭಜನಾ ಕಾರ್ಯಕ್ರಮ, ನಂತರ ಶ್ರೀಕೃಷ್ಣಾರ್ಪಣ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಪಲ್ಲಪೂಜೆ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಅರ್ಚಕ ವೇದಮೂರ್ತಿ ಗೋಪಾಲಕೃಷ್ಣ ಅಡಿಗ ಅಪಿನಿಮೂಲೆ ಇವರು ಪೂಜಾ ವಿದಿವಿಧಾನಗಳನ್ನು ನೆರವೇರಿಸಿದರು.
ಸ್ಪರ್ಧಾ ಕಾರ್ಯಕ್ರಮಗಳು; ಬೆಳಿಗ್ಗೆ ವಿವಿಧ ಸ್ಪರ್ಧಾ ಕಾರ್ಯಕ್ರಮ ನಡೆಯಿತು.ವಿಶೇಷ ಆಕರ್ಷಣೆಯಾಗಿ ಮಕ್ಕಳಿಗೆ ಶ್ರೀಕೃಷ್ಣ ವೇಷ ಸ್ಪರ್ಧೆ, ಮಹಿಳೆಯರಿಗೆ ಹೂಮಾಲೆ ಕಟ್ಟುವ ಸ್ಪರ್ಧೆ ನಡೆಯಿತು.
ಸಂಜೆ ಸ್ಥಳೀಯ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಝೆಂಕಾರ- 2024 ಪ್ರೇಕ್ಷಕರ ಮನರಂಜಿಸಿತು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಧನ್ವಿ ರೈ ಕೋಟೆ ನಿರೂಪಿಸಿದರು.