ನಗರಸಭೆಯಿಂದ ಅನಧಿಕೃತ ವಾಣಿಜ್ಯ ಕಟ್ಟಡ ತೆರವು ಕಾರ್ಯಾಚರಣೆ

0

ಪುತ್ತೂರು:ಪಡೀಲ್‌ನಲ್ಲಿ ನಿರ್ಮಾಣಗೊಂಡಿರುವ ಅನಧಿಕೃತ ವಾಣಿಜ್ಯ ಕಟ್ಟಡದ ತೆರವು ಕಾರ್ಯಾಚರಣೆಗೆ ನಗರಸಭಾ ಅಧಿಕಾರಿಗಳು ಮುಂದಾದ ಮತ್ತು ವಾಣಿಜ್ಯ ಕಟ್ಟಡದ ಮಾಲಕರಿಗೆ 24 ಗಂಟೆಯೊಳಗೆ ಕಟ್ಟಡ ಸಾಮಾಗ್ರಿಗಳನ್ನು ತೆರವು ಮಾಡಲು ಗಡುವು ನೀಡಿದ ಘಟನೆ ಆ.27ರಂದು ನಡೆದಿದೆ.
ಪಡೀಲ್‌ನಲ್ಲಿ ಎಸ್ ಎನ್ ದೇವಪ್ಪ ನಾಯ್ಕ್ ಎಂಬವರು ಅನಧಿಕೃತವಾಗಿ ನಿರ್ಮಿಸಿರುವ ವಾಣಿಜ್ಯ ಕಟ್ಟಡ ತೆರವಿಗೆ 3 ಬಾರಿ ನೋಟೀಸ್ ನೀಡಲಾದರೂ ತೆರವು ಮಾಡದ ಕಾರಣ ಪೌರಾಯುಕ್ತರ ಸೂಚನೆಯಂತೆ ತೆರವು ಕಾರ್ಯಕ್ಕೆ ನಗರಸಭೆ ಅಧಿಕಾರಿಗಳು ತೆರಳಿ ಸ್ಥಳದಲ್ಲಿ ಕಟ್ಟಡ ನಿರ್ಮಾಣಕ್ಕೆ ಶೇಖರಿಸಿದಲಾದ ಕಲ್ಲುಗಳನ್ನು ನಗರಸಭಾ ವತಿಯಿಂದ ತೆರವು ಮಾಡಲಾಯಿತು. ಈ ಸಂದರ್ಭ ಕಟ್ಟಡ ಮಾಲೀಕರು ವಿನಂತಿಸಿದ ಮೇರೆಗೆ 24 ಗಂಟೆಗಳಲ್ಲಿ ತೆರವು ಮಾಡುವ ಷರತ್ತಿನಂತೆ ಉಳಿದ ಸಾಮಾಗ್ರಿಗಳಾದ ಮರಳು, ಕಾಂಕ್ರೀಟ್ ಸಮಾಗ್ರಿ ಇತ್ಯಾದಿಗಳ ತೆರವು ಮತ್ತು ಸ್ಥಳಾoತರಕ್ಕೆ ಕಟ್ಟಡ ಮಾಲೀಕರಿಗೆ ಸಮಯಾವಕಾಶ ನೀಡಲಾಯಿತು. ಕಾರ್ಯಾಚರಣೆಯಲ್ಲಿ ನಗರಸಭೆ ಹಿರಿಯ ಅಭಿಯಂತರ ಕೃಷ್ಣ ಮೂರ್ತಿ, ಆರೋಗ್ಯ ನಿರೀಕ್ಷಕರದ ರಾಮಚಂದ್ರ ಕೆ, ವರಲಕ್ಷ್ಮಿ, ಶ್ವೇತಾ, ಕಂದಾಯ ನಿರೀಕ್ಷಕ ರಾಜೇಶ್, ರವಿಪ್ರಕಾಶ್, ಪುರುಷೋತ್ತಮ್ ಮತ್ತು ಸ್ವಚ್ಛತಾ ಮೇಲ್ವಿಚಾರಕರು, ಕಾರ್ಮಿಕರು ಭಾಗವಹಿಸಿದ್ದರು. ಕಾರ್ಯಾಚರಣೆಗೆ ಪೊಲೀಸ್ ಬಂದೋಬಸ್ತು ನೀಡಿದ್ದರು.

LEAVE A REPLY

Please enter your comment!
Please enter your name here