ಅಂಗನವಾಡಿ ಪುಟಾಣಿಗಳಿಗೆ ಆಪಲ್ ಹಂಚಿ ಹುಟ್ಟು ಹಬ್ಬ ಆಚರಿಸಿಕೊಂಡ ಚಾರ್ವಿ ಕಜೆಮಾರ್

0

ಪುತ್ತೂರು: ಅಂಗನವಾಡಿ ಪುಟಾಣಿಗಳಿಗೆ ಆಪಲ್ ಹಂಚುವ ಮೂಲಕ ಪತ್ರಕರ್ತ ಸಿಶೇ ಕಜೆಮಾರ್‌ರವರ ಪುತ್ರಿ ಚಾರ್ವಿ ಕಜೆಮಾರ್ ತನ್ನ 3ನೇ ವರ್ಷದ ಹುಟ್ಟು ಹಬ್ಬವನ್ನು ಆ.27ರಂದು ಆಚರಿಸಿಕೊಂಡಳು. ಕುಂಬ್ರ ಅಂಗನವಾಡಿ, ಪರ್ಪುಂಜ, ತ್ಯಾಗರಾಜನಗರ ಮತ್ತು ತಿಂಗಳಾಡಿ ಅಂಗನವಾಡಿ ಕೇಂದ್ರದ ಪುಟಾಣಿಗಳಿಗೆ ಆಪಲ್ ಹಂಚುವ ಮೂಲಕ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಕುಂಬ್ರ ಅಂಗನವಾಡಿ ಶಿಕ್ಷಕಿ ಆಶಾ ಮಾಧವ ರೈ ಕುಂಬ್ರ, ಸಹಾಯಕಿ ರಾಜೀವಿ ಕುಂಬ್ರ, ಎಸ್.ಮಾಧವ ರೈ ಕುಂಬ್ರ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಚಾರ್ವಿ ಕಜೆಮಾರ್‌ರವರ ತಾಯಿ ಮಮತಾ ಕಜೆಮಾರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here