ಸೆ.1ಕ್ಕೆ ಪುತ್ತೂರಿನಲ್ಲಿ ಕೃಷಿ ವಿಜ್ಞಾನ ಸಮಾವೇಶ

0

ಪುತ್ತೂರು: ಪುತ್ತೂರಿನ ಗಿಡಗೆಳೆತನ ಸಂಘ ‘ಸಮೃದ್ಧಿ’ಯು ಸೆ.1ರಂದು ಪುತ್ತೂರು ತೆಂಕಿಲ ಬೈಪಾಸ್ ರಸ್ತೆಯಲ್ಲಿರುವ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ‘ಕೃಷಿ ವಿಜ್ಞಾನ ಸಮಾವೇಶ’ವನ್ನು ಆಯೋಜಿಸಿದೆ. ಕೃಷಿ ಮಾಸಿಕ ಅಡಿಕೆ ಪತ್ರಿಕೆಯ ಸಹಕಾರದೊಂದಿಗೆ ನಡೆಯುವ ಕಾರ್ಯಕ್ರಮಕ್ಕೆ ಪುತ್ತೂರಿನ ಕಾಮಧೇನು ಆಗ್ರೋ ಸೇಲ್ಸ್ ಪ್ರಾಯೋಜಕತ್ವ ನೀಡಿದ್ದಾರೆ. ಕೃಷಿಕರೊಂದಿಗೆ ಮಾತು-ಮಂಥನ ಸಮಾವೇಶದ ಹೈಲೈಟ್ಸ್ ಆಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಪೂರ್ವಾಹ್ನ ಗಂ.9.30ಕ್ಕೆ ಅಡಿಕೆ ಪತ್ರಿಕೆ ಸಂಪಾದಕ ಪಡ್ರೆಯವರು ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಇಂದೋರಿನ ಶ್ರೀ ಸಿದ್ಧಿ ಎಗ್ರಿ ಕೆಂ. ಪ್ರೈ ಲಿ., ಇದರ ಪೆರುವೋಡಿ ನಾರಾಯಣ ಭಟ್ಟರು ‘ಸಮಗ್ರ ಬೆಳೆ ನಿರ್ವಹಣೆ’ಯ ಮಾಹಿತಿ ನೀಡಲಿದ್ದಾರೆ. ‘ನೀರಿನ ನಿರ್ವಹಣೆಯಲ್ಲಿ ಯಾಂತ್ರೀಕರಣ’ ವಿಷಯದ ಕುರಿತು ಕೃಷಿಕರಾದ ಅನಂತರಾಮ್‌ಕೃಷ್ಣ ಪಳ್ಳತಡ್ಕ, ಪುತ್ತೂರಿನ ಕಿಸಾನ್ ಆಗ್ರೋದ ಅಭಿಜಿತ್ ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರೆ. ‘ಅಡಿಕೆಯಲ್ಲಿ ಪೋಷಕಾಂಶ ನಿರ್ವಹಣೆ’ ಕುರಿತು ವಿಟ್ಲ ಸಿ.ಪಿ.ಸಿ.ಆರ್.ಐ.ಯ ತೋಟಗಾರಿಕಾ ವಿಜ್ಞಾನಿ ಡಾ.ಭವಿಷ್ಯ ಮಾತನಾಡಲಿದ್ದಾರೆ.


ಅಪರಾಹ್ನ ಅನುಭವಿ ಕೃಷಿಕರೊಂದಿಗೆ ಸಂವಾದವಿದೆ. ಯಶಸ್ವಿ ಕಾಳುಮೆಣಸು ಕೃಷಿಕರಾದ ಸುರೇಶ್ ಬಲ್ನಾಡು, ಜಾಯಿಕಾಯಿ ಕೃಷಿಕರಾದ ಟಿ.ಆರ್.ಸುರೇಶ್ಚಂದ್ರ ತೊಟ್ಟೆತ್ತೋಡಿ, ಬಾಳೆ ಕೃಷಿಕರಾದ ವಿಷ್ಣು ಭಟ್ ಸಾಂದೀಪನಿ, ಕಾಳುಮೆಣಸು ಕೃಷಿಕರಾದ ಅರವಿಂದ ಭಟ್ ಮುಳ್ಳಂಕೊಚ್ಚಿ, ಟ್ರೀ ಬೈಕ್ ಸಂಶೋಧಕರಾದ ಗಣಪತಿ ಭಟ್ ಕೋಮಳೆ, ಕಾಳುಮೆಣಸು ಕೃಷಿಕರಾದ ಅಜಿತ್ ಪ್ರಸಾದ್ ರೈ ಈ ಎಲ್ಲಾ ವಿಷಯ ತಜ್ಞರು ಮಾಹಿತಿಗಳನ್ನು ನೀಡಲಿದ್ದಾರೆ. ಸಮಾವೇಶಕ್ಕೆ ಕೃಷಿಕರೆಲ್ಲರಿಗೂ ಮುಕ್ತ ಪ್ರವೇಶವಿದೆ ಎಂದು ಸಮೃದ್ಧಿ ಗಿಡಗೆಳೆತನ ಸಂಘದ ಅಧ್ಯಕ್ಷ ನಿರಂಜನ ಪೋಳ್ಯ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here