ಪುತ್ತೂರು: ಲಕುಮಿ ಸಿನಿ ಕ್ರಿಯೇಷನ್ ಮತ್ತು ಲೋ ಬಜೆಟ್ ಪ್ರೊಡಕ್ಷನ್ ನಿರ್ಮಾಣದಲ್ಲಿ ’ಅನರ್ಕಲಿ’ ತುಳು ಸಿನಿಮಾ ಆ.23ಕ್ಕೆ ಬಿಡುಗಡೆಯಾಗಿದೆ. ಪುತ್ತೂರು ಜಿ.ಎಲ್.ವನ್ ಮಾಲ್ನಲ್ಲಿರುವ ಭಾರತ್ ಸಿನಿಮಾಸ್ನಲ್ಲಿ ಚಿತ್ರ ಯಶಸ್ವಿಯಾಗಿ ಮೂಡಿ ಬರುತ್ತಿದೆ. ಈ ಚಿತ್ರವನ್ನು ಹೊಸ ಟೀಮ್ ಸೇರಿ ಮಾಡಿದೆ. ಇದು ಇನ್ನಷ್ಟು ಜನರಿಗೆ ಮುಟ್ಟುವ ಸಲುವಾಗಿ ಎಲ್ಲರ ಸಹಕಾರ ಯಾಚಿಸುತ್ತೇನೆ ಎಂದು ಚಿತ್ರದ ನಿರ್ದೇಶಕ ಹರ್ಷಿತ್ ಸೋಮೇಶ್ವರ ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.
ಇದೊಂದು ಪರಿಶುದ್ಧ ತುಳು ಸಿನಿಮಾ. ಸಿನಿಮಾದಲ್ಲಿ 2 ಗಂಟೆ 10 ನಿಮಿಷಗಳ ಕಾಲ ನಿಮ್ಮನ್ನು ರಂಜಿಸಲು ಏನೆಲ್ಲ ಅಗತ್ಯವೋ ಅದೆಲ್ಲವನ್ನು ತೋರಿಸಿದ್ದೇವೆ. ಪೊಳಲಿ, ಕಟೀಲು, ಸೋಮೇಶ್ವರ, ಉಳ್ಳಾಲ, ಉಳಿಯ, ನೀರುಮಾರ್ಗ, ಕಳಸದಲ್ಲಿ ಸಿನಿಮಾ ಚಿತ್ರೀಕರಣ ನಡೆದಿದೆ.
ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ದೀಪಕ್ ಪಾಣಾಜೆ, ರವಿ ರಾಮಕುಂಜ, ಪುಷ್ಪರಾಜ್ ಬೊಳ್ಳುರು, ಸುಜಾತ ಶಕ್ತಿನಗರ, ನಮಿತಾ ಕುಳೂರು ಮುಖ್ಯ ಭೂಮಿಕೆಯಲ್ಲಿದ್ದಾರೆ. ಮಂಗಳೂರು, ಉಡುಪಿ ಚಿತ್ರಮಂದಿರದಲ್ಲಿ ಹೌಸ್ಫುಲ್ ಆಗಿದೆ. ಪುತ್ತೂರಿನಲ್ಲೂ ಶನಿವಾರ ಮತ್ತು ಆದಿತ್ಯವಾರ ಹೌಸ್ ಫುಲ್ ಆಗುತ್ತಿದೆ ಎಂದ ಅವರು ಚಿತ್ರವನ್ನು ಎಲ್ಲರು ನೋಡುವಂತೆ ಮನವಿ ಮಾಡಿದರು. ಚಿತ್ರದ ಸಂಗೀತ ನಿರ್ದೇಶಕ ರೋಹಿತ್ ಪೂಜಾರಿ, ನಟಿ ವಾತ್ಸಲ್ಯ ಸಾಲಿಯಾನ್, ಚಿತ್ರಿಕರಣ ಮಾಡಿದ ಅರುಣ್ ರೈ ಪುತ್ತೂರು, ಚಿತ್ರದ ಹಂಚಿಕೆದಾರ ಬಾಲಕೃಷ್ಣ ರೈ ಕುಕ್ಕಾಡಿ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.