ಸೆ.1: ಕೆಮ್ಮಾಯಿಯಲ್ಲಿ 7 ನೇ ವರ್ಷದ ಮೊಸರು ಕುಡಿಕೆ ಉತ್ಸವ-ಶೋಭಾಯಾತ್ರೆ, ಅಟ್ಟಿಮಡಿಕೆ ಒಡೆಯುವ ಸ್ಪರ್ಧೆ

0

ಪುತ್ತೂರು: ಶ್ರೀ ವಿಷ್ಣು ಯುವಕ ಮಂಡಲ ಕೆಮ್ಮಾಯಿ ಮತ್ತು ಮೊಸರು ಕುಡಿಕೆ ಉತ್ಸವ ಸಮಿತಿ ಇವುಗಳ ಜಂಟಿ ಆಶ್ರಯದೊಂದಿಗೆ ಕೆಮ್ಮಾಯಿ ಓಂ ಅಶ್ವತ್ಥಕಟ್ಟೆ ವಠಾರದಲ್ಲಿ 7 ನೇ ವರ್ಷದ ಮೊಸರು ಕುಡಿಕೆ ಉತ್ಸವವು ಸೆ.1 ರಂದು ಜರುಗಲಿದೆ ಎಂದು ಮೊಸರು ಕುಡಿಕೆ ಉತ್ಸವ ಸಮಿತಿ ಗೌರವಾಧ್ಯಕ್ಷ ಸುಂದರ ಪೂಜಾರಿ ಬಡಾವು ಹೇಳಿದರು.


ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ ಕೆಮ್ಮಾಯಿ ಮೊಸರು ಕುಡಿಕೆ ಕಾರ್ಯಕ್ರಮಕ್ಕೆ ಉತ್ತಮ ಹೆಸರಿದೆ ಪ್ರತಿ ವರ್ಷದಂತೆ ನಡೆಯುವ ಕಾರ್ಯಕ್ರಮದಲ್ಲಿ ಬೆಳಗ್ಗಿನಿಂದ ಸಂಜೆಯ ತನಕ ವಿವಿಧ ಆಟೋಟ ಸ್ಪರ್ಧೆ ನಡೆಯಲಿದೆ. ಸಂಜೆ ಪುರಷರಿಗೆ ಮತ್ತು ಮಹಿಳೆಯರಿಗೆ ಹಗ್ಗಜಗ್ಗಾಟ ಸ್ಪರ್ಧೆ ನಡೆಯಲಿದೆ. ಸಂಜೆ ಗಂಟೆ 5 ಗಂಟೆಗೆ ಶೋಭಾಯಾತ್ರೆ ಆರಂಭಗೊಳ್ಳಲಿದೆ. ಶೋಭಾಯಾತ್ರೆಯು ಕೆಮ್ಮಾಯಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಿಂದ ಹೊರಟು ಕೆಮ್ಮಾಯಿ, ಕೃಷ್ಣನಗರ ಕೇಪುಳು, ಪಡೀಲು ಬಳಿಕ ಕೆಮ್ಮಾಯಿಗೆ ತೆರಳಲಿದ್ದು, ದಾರಿಯುದ್ಧಕ್ಕೂ ಅಟ್ಟಿ ಮಡಿಕೆ ಒಡೆಯುವ ಸ್ಪರ್ಧೆ ನಡೆಯಲಿದೆ. ಸ್ಪರ್ಧಾ ವಿಜೇತರಿಗೆ ನಗದು ಬಹುಮಾನ ವಿತರಣೆ ನಡೆಯಲಿದೆ ಎಂದವರು ಹೇಳಿದರು.


ಬೆಳಿಗ್ಗೆ ಮೊಸರು ಕುಡಿಕೆ ಉತ್ಸವವನ್ನು ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಅವರು ಉದ್ಘಾಟಿಸಲಿದ್ದಾರೆ. ಮಾಜಿ ಶಾಸಕ ಸಂಜೀವ ಮಠಂದೂರು, ನಗರಸಭೆ ಸದಸ್ಯೆ ಲೀಲಾವತಿ, ದ್ವಾರಕ ಕನ್‌ಸ್ಟ್ರಕ್ಷನ್‌ನ ಮಾಲಕ ಗೋಪಾಲಕೃಷ್ಣ ಭಟ್, ಕೆಮ್ಮಾಯಿ ಶ್ರೀರಾಂ ಹಾಳೆಬಟ್ಟಲು ಸಂಸ್ಥೆಯ ಶಶಿಧರ್ ಕೆಮ್ಮಾಯಿ, ಯೆಯ್ಯಾಡಿ ಆರಾಧ್ಯ ಅಲ್ಯೂಮಿನಿಯಂನ ಹರೀಶ್ ಪ್ರಭು ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ.

ಸಂಜೆ ಶೋಭಯಾತ್ರೆಯನ್ನು ವಿಜಯ ಸಾಮ್ರಾಟ್ ಚಾರಿಟೇಬಲ್ ಟ್ರಸ್ಟ್‌ನ ಸ್ಥಾಪಕ ಅಧ್ಯಕ್ಷ ಸಹಜ್ ರೈ ಬಳಜ್ಜ ಅವರು ಶೋಭಾಯಾತ್ರೆಯನ್ನು ಉದ್ಘಾಟಿಸಲಿದ್ದಾರೆ. ರಾತ್ರಿ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಅಶೋಕ್ ಕುಮಾರ್ ರೈ ವಹಿಸಲಿದ್ದಾರೆ. ಸಂಸದ ಕ್ಯಾ| ಬ್ರಿಜೇಶ್ ಚೌಟ ವಿಜೇತರಿಗೆ ಬಹುಮಾನ ವಿತರಣೆ ಮಾಡಲಿದ್ದಾರೆ. ಮಹಾವೀರ ಮೆಡಿಕಲ್ ಸೆಂಟರ್‌ನ ಡಾ. ಅಶೋಕ್ ಪಡಿವಾಳ್, ಅಕ್ಷಯ್ ಕಾಲೇಜು ಇದರ ಅಧ್ಯಕ್ಷ ಜಯಂತ ನಡುಬೈಲು, ಸ್ವಾಭಿಮಾನಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಕಾರ್ಯನಿರ್ವಾಹಣ ಅಧಿಕಾರಿ ತುಳಸಿ ಮಂಜುನಾಥ್, ಬೆಂಗಳೂರು ತಿಂಕ್ ಆಂಡ್ ಲರ್ನ್ ಸಂಸ್ಥೆಯ ಎಜಿಎಮ್ ಜಯಂತ್ ಎ, ಶ್ರೀ ಮಹಾಲಿಂಗೇಶ್ವರ ಟಯರ್ ವರ್ಕ್ಸ್‌ನ ರಾಧಾಕೃಷ್ಣ ಶೆಟ್ಟಿಯವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸುಂದರ ಪೂಜಾರಿ ಬಡಾವು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಶ್ರೀ ವಿಷ್ಣುಯುವಕ ಮಂಡಲದ ಇದರ ಅಧ್ಯಕ್ಷ ದಯಾನಂದ ಗೌಡ ಕೆಮ್ಮಾಯಿ, ಮೊಸರುಕುಡಿಕೆ ಉತ್ಸವ ಸಮಿತಿ ಉಪಾಧ್ಯಕ್ಷ ಸುರೇಂದ್ರ ಪೂಜಾರಿ ಬಡಾವು, ಹೇಮಚಂದ್ರ, ಕ್ರೀಡಾ ಕಾರ್ಯದರ್ಶಿ ಯಶವಂತ ಹೊಸಹೊಕ್ಲು, ಕಾರ್ಯಾಧ್ಯಕ್ಷ ಪ್ರಶಾಂತ್ ಕೆಮ್ಮಾಯಿ ಉಪಸ್ಥಿತರಿದ್ದರು.

ಅಟ್ಟಿ ಮಡಿಕೆ ಸ್ಪರ್ಧಾಗಳುಗಳು ಮಧ್ಯಾಹ್ನ ಹೆಸರು ನೋಂದಾಯಿಸಿ
ಅಟ್ಟಿ ಮಡಿಕೆ ಸ್ಪರ್ಧೆಯು ಸಂಜೆ ಗಂಟೆ 5ಕ್ಕೆ ಸರಿಯಾಗಿ ಆರಂಭಗೊಳ್ಳಲಿದೆ. ಅದರ ಮುಂಚೆ ಸ್ಪರ್ಧಿಗಳು ಹೆಸರು ನೋಂದಾಯಿಸಬೇಕು. ಅದೇ ರೀತಿ ಮುದ್ದುಕೃಷ್ಣ ಸ್ಪರ್ಧೆಯಲ್ಲಿ ಭಾಗವಹಿಸುವವರು ಬೆಳಿಗ್ಗೆ ಗಂಟೆ 9.30ಕ್ಕೆ ಹಾಜರಾಗಬೇಕು ಎಂದು ಮೊಸರು ಕುಡಿಕೆ ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ತಿಳಿಸಿದರು.

LEAVE A REPLY

Please enter your comment!
Please enter your name here