ನಿಡ್ಪಳ್ಳಿ: ನಿಡ್ಪಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘದ 2023-24ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಸಂಘದ ಉಪಾಧ್ಯಕ್ಷ ಹರೀಶ್ ಕುಮಾರ್ ಪಿ ಇವರ ಅಧ್ಯಕ್ಷತೆಯಲ್ಲಿ ಆ.30ರಂದು ಸಂಘದ ವಠಾರದಲ್ಲಿ ನಡೆಯಿತು.
ಮುಖ್ಯ ಅತಿಥಿ ದ.ಕ.ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿ ಇವರು ಸಂಘದ ಕಾರ್ಯ ಚಟುವಟಿಕೆ, ಪಶುಪಾಲನೆ ಮತ್ತು ರೈತರಿಗೆ ಒಕ್ಕೂಟದ ವತಿಯಿಂದ ದೊರೆಯುವ ಸವಲತ್ತುಗಳ ಬಗ್ಗೆ ವಿವರಿಸಿದರು.ರೈತರು ಶುದ್ಧ ಮತ್ತು ಗುಣಮಟ್ಟದ ಹಾಲು ಹಾಕಿ ಸಂಘದ ಮತ್ತು ತಮ್ಮ ಅಭಿವೃದ್ಧಿಗೆ ಸಹಕಾರ ನೀಡುವಂತೆ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಉಪಾಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ ಹೆಚ್ಚಿನ ಹೈನುಗಾರರು ಹಸುಗಳನ್ನು ಸಾಕಿ ಗುಣಮಟ್ಟದ ಹಾಲನ್ನು ಹೆಚ್ಚು ಹೆಚ್ಚು ಹಾಕಿ ಸಂಘದ ಅಭಿವೃದ್ಧಿಗೆ ಸಹಕರಿಸುವಂತೆ ಹೇಳಿದರು. ಸಂಘದ ನಿರ್ದೇಶಕರುಗಳಾದ ಲೋಕನಾಥ ರೈ, ಗಂಗಾಧರ ಸಿ.ಎಚ್, ನಾಗೇಶ ಗೌಡ, ಲಿಂಗಪ್ಪ ಗೌಡ, ನಾರ್ಣಪ್ಪ ನಾಯ್ಕ, ಗೀತಾ ನಾಯ್ಕ, ಡೆಲಿಫಿನ್ ಡಿ’ ಸೋಜಾ, ದೇವಕಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯದರ್ಶಿ ದಯಾಮಣಿ ಎಸ್.ರೈ ಪ್ರಾರ್ಥಿಸಿ ವರದಿ ವಾಚಿಸಿದರು.ನಿರ್ದೇಶಕ ಗಂಗಾಧರ ಸಿ.ಎಚ್ ಸ್ವಾಗತಿಸಿ ನಾಗೇಶ ಗೌಡ ವಂದಿಸಿದರು.ಸಹಾಯಕಿ ಪುಷ್ಪ ಸಹಕರಿಸಿದರು.ಸಂಘದ ಸದಸ್ಯರು ಪಾಲ್ಗೊಂಡರು.
ಬಹುಮಾನ ವಿತರಣೆ: ವರದಿ ಸಾಲಿನಲ್ಲಿ ಅತೀ ಹೆಚ್ಚು ಹಾಲು ಹಾಕಿದ ಸಂಘದ ಅಧ್ಯಕ್ಷ ರಾಧಾಕೃಷ್ಣ ರೈ ಆನಾಜೆ ಪ್ರಥಮ, ಲಿಂಗಪ್ಪ ಗೌಡ ದ್ವಿತೀಯ ಹಾಗೂ ಸ್ವಸ್ತಿಕ್ ಭಟ್ ತೃತೀಯ ಬಹುಮಾನ ಪಡೆದುಕೊಂಡರು. ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.