ಪುತ್ತೂರು: ವೈರಲ್ ಆಗಿರುವ ಆಡಿಯೋದಲ್ಲಿ ಮಾತನಾಡಿರುವ ಮಹಿಳೆ ಎನ್ನಲಾದ ಮಹಿಳೆಯೋರ್ವರು ತನಗೆ ಬೆದರಿಕೆಯಿದ್ದು, ಪೊಲೀಸ್(police) ರಕ್ಷಣೆ ಕೋರಿ ಮತ್ತೊಮ್ಮೆ ಪುತ್ತೂರು (puttur) ನಗರ ಪೊಲೀಸ್ ಠಾಣೆಗೆ ಬಂದು ಇನ್ಸ್‌ಪೆಕ್ಟರ್ ಜೊತೆ ಮಾತನಾಡಿದ್ದಾರೆ.
ಆ.31ರಂದು ಸಂಜೆ ಸುಮಾರು 4 ಗಂಟೆಯ ವೇಳೆಗೆ ಮಹಿಳೆ ಏಕಾಂಗಿಯಾಗಿ ಪೊಲೀಸ್ ಠಾಣೆಗೆ ಬಂದು ಇನ್ಸ್‌ಪೆಕ್ಟರ್ ಜೊತೆ ಮಾತನಾಡಿ, ತನಗೆ ಇನ್ನೂ ರಕ್ಷಣೆಯ ಅಗತ್ಯವಿದೆ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಆದರೆ ಇನ್ನು ಕೂಡಾ ಯಾವುದೇ ಅಧಿಕೃತ ಲಿಖಿತ ದೂರು ಸಲ್ಲಿಸಿಲ್ಲ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಸದ್ಯ ಪುತ್ತೂರಿನಲ್ಲಿ ವಾಸವಿರುವ ಆಕೆಯ ಮನೆಯ ಮುಂದೆ ‘ಯಾರೋ ಅಡ್ಡಾಡಿದಂತೆ’ ಭಾಸವಾಗುತ್ತಿದೆ. ಹಾಗಾಗಿ ನನಗೆ ರಕ್ಷಣೆ ಬೇಕಾಗಿದೆ’ ಎಂದಿರುವ ಮಹಿಳೆ ‘ಯಾವುದೇ ವ್ಯಕ್ತಿಯ ವಿರುದ್ದ ಅಧಿಕೃತವಾಗಿ ಅನುಮಾನ ಅಥವಾ ಸಂಶಯ ವ್ಯಕ್ತಪಡಿಸಿಲ್ಲ ಎಂದೂ ತಿಳಿದುಬಂದಿದೆ.