ದರ್ಬೆತ್ತಡ್ಕ ಶಾಲೆಗೆ ಬ್ಯಾಂಡ್ ಸೆಟ್ ಕೊಡುಗೆ

0

ನಿಡ್ಪಳ್ಳಿ; ದ. ಕ. ಜಿ. ಪಂ. ಉನ್ನತ ಹಿರಿಯ ಪ್ರಾಥಮಿಕ ಶಾಲೆ ದರ್ಬೆತ್ತಡ್ಕ ಇಲ್ಲಿಗೆ ರೂ. 6,000 ಮೊತ್ತದ ಬ್ಯಾಂಡ್ ಸೆಟ್‌ ಒಂದನ್ನು 1ನೇ ತರಗತಿಯ ವಿದ್ಯಾರ್ಥಿನಿ ಸೀತಾಲಕ್ಷ್ಮಿ ಇವರ ಪೋಷಕರಾದ ಸುನೀತಾ ಸತೀಶ್ ಮಣಿಯಾಣಿ ಇವರು ಕೊಡುಗೆಯಾಗಿ ನೀಡಿದರು. 

ಒಳಮೊಗ್ರು ಗ್ರಾಮ ಪಂಚಾಯತ್  ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಸದಸ್ಯರಾದ  ಪ್ರದೀಪ್ ಯಸ್, ಶಾರದಾ,ಎಸ್.ಡಿ.ಎಂ.ಸಿ ಅಧ್ಯಕ್ಷ ಶುಭಕರ ನಾಯಕ್,ಉಪಾಧ್ಯಕ್ಷೆ ರಾಜೇಶ್ವರಿ ಹಾಗೂ ಸದಸ್ಯರು ಮತ್ತು ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಕಲ್ಲಡ್ಕ,ಹಿರಿಯ ವಿದ್ಯಾರ್ಥಿಗಳ ಸಂಘದ ಗೌರವಾಧ್ಯಕ್ಷ ಬಾಲಕೃಷ್ಣ ರೈ ಗೋವಿಂದಮೂಲೆ, ನಿಕಟಪೂರ್ವ ಎಸ್.ಡಿ.ಎಂ.ಸಿ ಅಧ್ಯಕ್ಷ  ವಸಂತ ಮಣಿಯಾಣಿ, ಶಾಲಾ ನಾಯಕಿ ಕುಮಾರಿ ಸ್ಮೃತಿ, ಉಪನಾಯಕ ಚಿಂತನ್ ಎಂ ಆರ್, ಪೋಷಕರು, ಹಿರಿಯ ವಿದ್ಯಾರ್ಥಿಗಳು, ಅಧ್ಯಾಪಕ ವೃಂದದವರು ಅಕ್ಷರ ದಾಸೋಹ ಸಿಬ್ಬಂದಿಗಳು, ಶಿಕ್ಷಣ ಪ್ರೇಮಿಗಳು ಮತ್ತು ಮಕ್ಕಳು ಈ ಸಂದರ್ಭದಲ್ಲಿ ಹಾಜರಿದ್ದರು.

LEAVE A REPLY

Please enter your comment!
Please enter your name here