ಪುತ್ತೂರು: ಮುಂಡೂರು(Munduru) ಗ್ರಾಮದ ಪೊನೋಣಿ ಮೂಲದವರಾಗಿದ್ದು, ಪ್ರಸ್ತುತ ಮುಂಬೈನಲ್ಲಿ ವೈದ್ಯರಾಗಿರುವ ಡಾ.ರಶ್ಮಾ ಎಂ.ಶೆಟ್ಟಿ(Dr. Rashma M Shetty)ಯವರು ಆ.31ರಂದು ಬೆಂಗಳೂರಿನ(Bangalore) ವಿದ್ಯಾರಣ್ಯಪುರದ ಹೋಟೆಲ್ ಕಿಂಗ್ ಮೇಡೋದಲ್ಲಿ ನಡೆದ ಪ್ರತಿಭಾ ಸೌಸ್ನಿಮತ್ ಮುಂದಾಳತ್ವದ ಪ್ರತಿಷ್ಠಿತ ‘ಮಿಸೆಸ್ ಇಂಡಿಯಾ ಕರ್ನಾಟಕ-2024 ಸ್ಪರ್ಧೆಯಲ್ಲಿ ಪ್ರಥಮ ರನ್ನರ್ ಅಪ್ ಪ್ರಶಸ್ತಿಯನ್ನು ಗಳಿಸಿದ್ದಾರೆ.
ಡಾ.ರಶ್ಮಾ ಎಂ ಶೆಟ್ಟಿ(Dr. Rashma M Shetty)ಯವರು ಮುಂಬಯಿ(Mumbai)ಯ ಮುಲುಂಡ್ನ ಪ್ರಕೃತಿ ಚಿಕಿತ್ಸಾ ವೈದ್ಯೆಯಾಗಿದ್ದಾರೆ.ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ಒಟ್ಟು 33 ಫೈನಲಿಸ್ಟ್ಗಳು ಭಾಗವಹಿಸಿದ್ದರು. ಟ್ಯಾಲೆಂಟ್ ರೌಂಡ್ನಲ್ಲಿ ಉತ್ತಮ ಪ್ರದರ್ಶನ ಬಹುಮಾನ, ರ್ಯಾಂಪ್ ವಾಕ್ ಸ್ಪರ್ಧೆಯಲ್ಲಿ ಅತ್ಯುತ್ತಮ ನಡೆ ಬಹುಮಾನ, ಉತ್ತಮ ಟಾಸ್ಕ್ (ಶಾರ್ಟ್ ಫಿಲ್ಮ್) ವಿಭಾಗದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಲಭಿಸಿದೆ.
ನಾರ್ಯಗುತ್ತು ರಘುನಾಥ ಶೆಟ್ಟಿ ಮತ್ತು ಅಮ್ಟೂರು ಬಾಳಿಕೆ ಕಸ್ತೂರಿ ಶೆಟ್ಟಿ ದಂಪತಿಯ ಪುತ್ರಿಯಾಗಿರುವ ಡಾ.ರಶ್ಮಾ ಎಂ.ಶೆಟ್ಟಿಯವರು ಮೋಹಿತ್ ಶೆಟ್ಟಿಯವರ ಪತ್ನಿ. ಇವರಿಗೆ 6 ವರ್ಷದ ಮಗಳು ನೇಸರ ಇದ್ದಾರೆ. ಉಡುಪಿಯ ಕಟಪಾಡಿ ಮೂಡುಬೆಟ್ಟು ಹೊಸಮನೆ ಮನೋಹರ್ ಶೆಟ್ಟಿ ಮತ್ತು ಮುಚ್ಚೂರು ಬರ್ಕೆ ದಿ.ಮಮತಾ ಶೆಟ್ಟಿ ಅವರ ಸೊಸೆಯಾಗಿರುವ ಇವರು ಮುಂಡೂರು ಗ್ರಾಮದ ಪೊನೋನಿ ಮೂಲದವರು. ಡಾ.ರಶ್ಮಾ ಎಂ. ಶೆಟ್ಟಿ ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣವನ್ನು ಪಾಪೆಮಜಲು ಸರ್ಕಾರಿ ಶಾಲೆಯಲ್ಲಿ ಪೂರ್ಣಗೊಳಿಸಿದ್ದು, ನಂತರ ಪುತ್ತೂರು ಕೊಂಬೆಟ್ಟು ಸರ್ಕಾರಿ ಕಾಲೇಜಿನಲ್ಲಿ ಪ್ರಿ-ಯುನಿವರ್ಸಿಟಿ ಶಿಕ್ಷಣವನ್ನು ಪಡೆದುಕೊಂಡಿದ್ದಾರೆ.ಅವರು ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ನೈಸರ್ಗಿಕ ಚಿಕಿತ್ಸಾ ಪದವಿಯನ್ನು ಪಡೆದು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಎರಡನೇ ಸ್ಥಾನ ಪಡೆದರು. ತಮ್ಮ ಕಾಲೇಜಿನ ಅತ್ಯುತ್ತಮ ವಿದ್ಯಾರ್ಥಿಯಾಗಿ ಘೋಷಿಸಲ್ಪಟ್ಟ ಇವರು ರಾಜ್ಯಮಟ್ಟದ ಅಥ್ಲೆಟಿಕ್ ಮತ್ತು ಥ್ರೋಬಾಲ್ ಆಟಗಾರ್ತಿಯೂ ಆಗಿದ್ದಾರೆ. ನವಿ ಮುಂಬಯಿಯ ಡಾ.ಡಿವೈ ಪಾಟೀಲ್ ಪ್ರಕೃತಿ ಚಿಕಿತ್ಸಾ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.