ಶಿಕ್ಷಕರ ದಿನಾಚರಣೆ ಪ್ರಯುಕ್ತ ತಾಲೂಕು ಶಿಕ್ಷಕರ ಸಹಕಾರ ಸಂಘದಿಂದ “ಆರ್.ಡಿ ಮಾಡಿ ಚಿನ್ನದ ನಾಣ್ಯ ಗಳಿಸಿ” ಆಫರ್

0

ಪುತ್ತೂರು: ಪುತ್ತೂರು ತಾಲೂಕಿನ ಇತಿಹಾಸದಲ್ಲಿ ತಾಲೂಕಿನ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಕಾಲೇಜು ಹಾಗೂ ಪದವಿ ಕಾಲೇಜುಗಳ ಶಿಕ್ಷಕರು, ಉಪನ್ಯಾಸಕರು, ನಿವೃತ್ತ ಶಿಕ್ಷಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ಒಳಗೊಂಡ ಶಿಕ್ಷಕರ ಸಹಕಾರ ಸಂಘ ಪುತ್ತೂರು ತಾಲೂಕು ಅಸ್ತಿತ್ವಕ್ಕೆ ಬಂದು ದಾಖಲೆಯ ಸದಸ್ಯತ್ವ ಹಾಗೂ ನಿರಖು ಠೇವಣಿದಾರರಿಗೆ ಮೂರು ವರ್ಷ ಮೇಲ್ಪಟ್ಟು ಠೇವಣಿ ಇಟ್ಟವರಿಗೆ 10% ಬಡ್ಡಿದರವನ್ನು ನೀಡುತ್ತಿದ್ದು, ಅನೇಕ ಉತ್ತಮ ರೀತಿಯ ಬಡ್ಡಿ ದರದಲ್ಲಿ ವಿವಿಧ ಸಾಲ ಸೌಲಭ್ಯ ನೀಡುತ್ತಿದೆ. ದೀರ್ಘಾವಧಿ ಸಾಲ, ತುರ್ತು ಸಾಲ, ವಾಹನ ಸಾಲ, ಚಿನ್ನಾಭರಣದ ಮೇಲೆ ಸಾಲ ನೀಡುತ್ತಿದ್ದು ಪಿಗ್ಮಿ ಮೂಲಕ ಬ್ಯಾಂಕಿಗೆ ಜಮೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಶಿಕ್ಷಕರ ಸಮೃದ್ಧಿ ಯೋಜನೆಯಲ್ಲಿ ಹಣ ದ್ವಿಗುಣವಾಗುವ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ.


ಶೈಕ್ಷಣಿಕ ವರ್ಷದಲ್ಲಿ ಸಪ್ಟೆಂಬರ್ ತಿಂಗಳ ಕೊನೆಯ ಮೂವತ್ತರವರೆಗೆ ಆರ್ ಡಿ ಮಾಡಿದವರಿಗೆ “ಆರ್ ಡಿ ಮಾಡಿ ಚಿನ್ನದ ನಾಣ್ಯ ಗಳಿಸಿ”ಎಂಬ ಯೋಜನೆಯೊಂದಿಗೆ ಪ್ರತಿಯೊಬ್ಬ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ದಿನ ಆರ್ ಡಿ ಮಾಡುವವರಿಗೆ ದಿನಾಂಕ ಸೆ.30ರಂದು ಲಕ್ಕಿ ಡ್ರಾ ನಡೆಯಲಿದೆ. ವಿಶೇಷವಾಗಿ ಐದು ಜನರಿಗೆ ಆಕರ್ಷಕ ಬಹುಮಾನವನ್ನು ನೀಡಲಾಗುವುದು. ಆದುದರಿಂದ ಶಿಕ್ಷಕ ದಿನಾಚರಣೆಯ ದಿನ ಅತಿ ಹೆಚ್ಚು ಶಿಕ್ಷಕರು ಆರ್ ಡಿ ಸೌಲಭ್ಯವನ್ನು ಪಡೆಯಬಹುದು ಎಂದು ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here