ಕೊೖಲ ಬಡಗನ್ನೂರು ಎಸ್.ವೈ.ಎಸ್ ಯುನಿಟ್ ವತಿಯಿಂದ ಶಿಕ್ಷಕರಿಗೆ ಗೌರವಾರ್ಪಣೆ

0

ಬಡಗನ್ನೂರು: ಕೊೖಲ ಬಡಗನ್ನೂರು ಎಸ್.ವೈ.ಎಸ್ ಯುನಿಟ್ ಇದರ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹಾಗೂ ಕೊೖಲ ಅಂಗನವಾಡಿ ಕೇಂದ್ರದ ಶಿಕ್ಷಕಿಯರಿಗೆ ಗೌರವಾರ್ಪಣೆಯು ಸೆ.5ರಂದು ಕೊೖಲ ಬಡಗನ್ನೂರಿನಲ್ಲಿ ನಡೆಯಿತು.

ಎಸ್.ವೈ.ಎಸ್ ದ..ಕ ಈಸ್ಟ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹಮೀದ್ ಕೊೖಲ ರವರು ಶಿಕ್ಷಕರಿಗೆ ಗೌರವಾರ್ಪಣೆ ಸಲ್ಲಿಸಿ ಮಾತನಾಡಿ, ಶಿಕ್ಷಕರು ಸಮುದಾಯಕ್ಕೆ ನೀಡುವ ನಿಸ್ವಾರ್ಥ ಸೇವೆಯನ್ನು ಗುರುತಿಸುವ ಸ್ಮರಣೀಯ ದಿನ ಇದಾಗಿದೆ ಎಂದು ಹೇಳಿದರು.

ಕೊೖಲ ಬಡಗನ್ನೂರು ಶಾಲಾ ಮುಖ್ಯ ಶಿಕ್ಷಕಿ ಪುಷ್ಪಾವತಿ ಎಂ ಬಿ ಗೌರವ ಸ್ವೀಕರಿಸಿ ಮಾತನಾಡಿ, ನಮ್ಮ ಅನುಭವದಲ್ಲಿ ಸರ್ಕಾರೇತರ ಸಂಘಟನೆಯೊಂದು ಗ್ರಾಮೀಣ ಪ್ರದೇಶದ ಅದರಲ್ಲೂ ಸರಕಾರಿ ಶಾಲೆಯ ನಮ್ಮಂತಹ ಶಿಕ್ಷಕರ ಸೇವೆಯನ್ನು ಗುರುತಿಸಿ ಗೌರವಿಸುವುದು ಮೊದಲ ಬಾರಿ. ಇದೊಂದು ಮಾದರಿ ಕೆಲಸ. ನಮಗೆ ಖುಷಿ ತಂದಿದೆ. ಮುಂದೆಯೂ ಎಸ್. ವೈ.ಎಸ್ ಇಂತಹ ಹಲವಾರು ಉತ್ತಮ ಕಾರ್ಯಕ್ರಮಗಳನ್ನು ಮಾಡುವಂತಾಗಲಿ ಎಂದು ಶುಭಹಾರೈಸಿದರು. ಸಹಶಿಕ್ಷಕರಾದ ಗಿರೀಶ್ ಅವರು ಪ್ರಕೃತಿ ವಿಕೋಪದಂತಹ ಸಂದರ್ಭದಲ್ಲಿ ತಮ್ಮ ಸಂಘಟನೆ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಹಾಗೂ ಶ್ರಮಿಕ ವರ್ಗದ ಎಲೆಮರೆ ಕಾಯಿಯಂತಿರುವ ಲೈನ್ ಮ್ಯಾನ್ ಗಳು ,ಅಂಗನವಾಡಿ ಶಿಕ್ಷಕರು,ಗ್ರಾಮೀಣ ಶಾಲೆಯ ನಮ್ಮಂತಹ ಶಿಕ್ಷಕರನ್ನು ಗೌರವಿಸುತ್ತಿರುವುದು ನಮ್ಮ ಸೇವಾವಧಿಯಲ್ಲಿ ಇದೇ ಪ್ರಥಮ ಬಾರಿ ಎಂದು ಹೇಳಿ ಶುಭ ಹಾರೈಸಿದರು.


ಗೌರವಾರ್ಪಣೆ
ಶಾಲಾ ಮುಖ್ಯ ಗುರುಗಳಾದ ಪುಷ್ಪಾವತಿ ಎಂ ಬಿ, ಸಹ ಶಿಕ್ಷಕರಾದ ಗಿರೀಶ ಡಿ, ಸೌಮ್ಯ,ಅತಿಥಿ ಶಿಕ್ಷಕಿ ಸರಳ ಡಿ, ಗೌರವ ಶಿಕ್ಷಕಿ ಪೂರ್ಣಿಮಾ, ಹಾಗೂ ಅಂಗನವಾಡಿ ಕಾರ್ಯಕರ್ತೆ ಹೇಮಾವತಿ ಪಿ, ಸಹಾಯಕಿ ಜಲಜಾಕ್ಷಿ ಸಿಎಚ್. ಇವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ,ಕರ್ನಾಟಕ ಮುಸ್ಲಿಂ ಜಮಾಅತ್.ಎಸ್ .ವೈ .ಎಸ್ ಎಸ್ ಎಸ್. ಎಫ್. ಕಾರ್ಯಕರ್ತರಾದ ಅಬ್ದುಲ್ ರಹಿಮಾನ್ ಅನಿಲೆ, ಮುದಸ್ಸಿರ್ ಶರಾವು, ಅಬ್ದುಲ್ ಜಲೀಲ್ ಹಾಗೂ ಮುನೀರ್ ಝೈನಿ, ತ್ವಾಹ ಪಾಲಡ್ಕ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here