ಬಜತ್ತೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ – ಹೊಸಗದ್ದೆ ಸರಕಾರಿ ಹಿ.ಪ್ರಾ.ಶಾಲೆಗೆ ಹಿರಿಯರ ವಿಭಾಗದಲ್ಲಿ ದ್ವಿತೀಯ, ಕಿರಿಯರ ವಿಭಾಗದಲ್ಲಿ ತೃತೀಯ ಸಮಗ್ರ ಪ್ರಶಸ್ತಿ

0

ನೆಲ್ಯಾಡಿ: ಬಜತ್ತೂರು ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಸೆ.2ರಂದು ನಡೆದ ಬಜತ್ತೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಹೊಸಗದ್ದೆ ಸರಕಾರಿ ಹಿ.ಪ್ರಾ.ಶಾಲೆಗೆ ಹಿರಿಯ ವಿಭಾಗದಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿ ಹಾಗೂ ಕಿರಿಯ ವಿಭಾಗದಲ್ಲಿ ತೃತೀಯ ಸಮಗ್ರ ಪ್ರಶಸ್ತಿ ಲಭಿಸಿದೆ.


ಹಿರಿಯರ ವಿಭಾಗದಲ್ಲಿ ಅಭಿನಯಗೀತೆಯಲ್ಲಿ 7ನೇ ತರಗತಿಯ ಗಹನ ಪ್ರಥಮ, ಇಂಗ್ಲಿಷ್ ಕಂಠಪಾಠ ಸ್ಪರ್ಧೆಯಲ್ಲಿ 5ನೇ ತರಗತಿಯ ಫಾತಿಮತ್ ಆಶಿಮ ದ್ವಿತೀಯ, ಅರೇಬಿಕ್ ಪಠಣದಲ್ಲಿ 6ನೇ ತರಗತಿಯ ಮುಹಮ್ಮದ್ ಯಾಸೀನ್ ಪ್ರಥಮ, ಹಿಂದಿ ಕಂಠಪಾಠದಲ್ಲಿ 7ನೇ ತರಗತಿಯ ಕೌಶಿಕ ಪ್ರಥಮ, ಸಂಸ್ಕೃತ ಪಠಣದಲ್ಲಿ 7ನೇ ತರಗತಿಯ ಧೃತಿ ಪ್ರಥಮ, ಮಿಮಿಕ್ರಿಯಲ್ಲಿ 6ನೇ ತರಗತಿಯ ತಶ್ವಿನ್ ದ್ವಿತೀಯ ಹಾಗೂ ಕ್ಲೇ ಮಾಡೆಲ್‌ನಲ್ಲಿ 6ನೇ ತರಗತಿಯ ಜಯಪ್ರೀತ್ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ.


ಕಿರಿಯರ ವಿಭಾಗದಲ್ಲಿ ಕನ್ನಡ ಕಂಠಪಾಠದಲ್ಲಿ 4ನೇ ತರಗತಿಯ ಹವ್ಯಶ್ರೀ ದ್ವಿತೀಯ, ಅಭಿನಯಗೀತೆಯಲ್ಲಿ 4ನೇ ತರಗತಿಯ ತ್ರಿಶಾ ತೃತೀಯ, ಅರೇಬಿಕ್ ಪಠಂದಲ್ಲಿ 4ನೇ ತರಗತಿಯ ಮುಹಮ್ಮದ್ ಇರ್ಫಾನ್ ಪ್ರಥಮ, ಇಂಗ್ಲಿಷ್ ಕಂಠಪಾಠದಲ್ಲಿ 4ನೇ ತರಗತಿಯ ಫಾತಿಮಾ ಆಯಿಫಾ ತೃತೀಯ, ಸಂಸ್ಕೃತ ಪಠಣದಲ್ಲಿ 4ನೇ ತರಗತಿಯ ಹವ್ಯಶ್ರೀ ತೃತೀಯ ಹಾಗೂ ಕ್ಲೇ ಮಾಡೆಲ್‌ನಲ್ಲಿ ೪ನೇ ತರಗತಿಯ ರಕ್ಷಿತ್ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.


ವಿದ್ಯಾರ್ಥಿಗಳಿಗೆ ಶಾಲಾ ಮುಖ್ಯಗುರು ವಿದ್ಯಾ ಕೆ., ಸಹಶಿಕ್ಷಕರಾದ ಮಾಲತಿ ಕೆ., ಪುನಂತೇಶ್ವರಿ, ಅತಿಥಿ ಶಿಕ್ಷಕಿಯರಾದ ಪವಿತ್ರ, ಚಿತ್ರಾವತಿ ಹಾಗೂ ಮಕ್ಕಳ ಪೋಷಕರು ತರಬೇತಿ ನೀಡಿದ್ದರು.

LEAVE A REPLY

Please enter your comment!
Please enter your name here