ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕಡಬ ತಾಲುಕು ನೆಲ್ಯಾಡಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರಿಂದ ನೆಲ್ಯಾಡಿ-ಕೌಕ್ರಾಡಿ ಶೀ ಅಯ್ಯಪ್ಪ ಸ್ವಾಮಿ ದೇವಾಸ್ಥಾನದಲ್ಲಿ ಶ್ರಮದಾನ ಮಾಡಲಾಯಿತು.
ಇದೇ ವೇಳೆ ಘಟಕದ ಪ್ರತಿನಿಧಿ ರಮೇಶ್ ಬಾಣಜಾಲು ಅವರ ಅಧ್ಯಕ್ಷತೆಯಲ್ಲಿ ಘಟಕದ ತಿಂಗಳ ಮಾಸಿಕ ಸಭೆ ನಡೆಯಿತು. ಶೌರ್ಯ ಘಟಕದ ಸ್ವಯಂ ಸೇವಕ, ಯುವ ಸಾಹಿತಿಯೂ ಆದ ಕೇಶವ ನೆಲ್ಯಾಡಿಯವರಿಗೆ ವರ್ಲ್ಡ್ ಪ್ರೆಸ್ ಬುಕ್ ಆಫ್ ರೆಕಾರ್ಡ್ ವಿಶ್ವ ದಾಖಲೆ ಗೌರವ ಮತ್ತು ಕಾವ್ಯ ಚೇತನ ಪ್ರಶಸ್ತಿ ಲಭಿಸಿದ್ದು, ಅವರನ್ನು ನೆಲ್ಯಾಡಿ ಶೌರ್ಯ ವಿಪತ್ತು ಘಟಕದ ವತಿಯಿಂದ ಸನ್ಮಾನಿಸಲಾಯಿತು.
ವಲಯ ಮೇಲ್ವಿಚಾರಕರಾದ ಆನಂದ ಡಿ.ಬಿ. ಮಾಹಿತಿ ನೀಡಿದರು. ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಾಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ.ಸದಾನಂದ ಕುಂದರ್, ಪದಾಧಿಕಾರಿಗಳಾದ ರವಿಚಂದ್ರ ಹೊಸವಕ್ಲು,ಸುಧೀರ್ ಕುಮಾರ್ ಕೆ.ಎಸ್., ನೆಲ್ಯಾಡಿ ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಜಯಾನಂದ ಬಂಟ್ರಿಯಾಲ್, ಶೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ರವಿಚಂದ್ರ ಗೌಡ ಅತ್ರಿಜಾಲು, ಕಾರ್ಯದರ್ಶಿ ರಕ್ಷಿತ್ ಎಂ.ಟಿ., ಕೌಕ್ರಾಡಿ ಒಕ್ಕೂಟದ ಅಧ್ಯಕ್ಷರಾದ ಬಾಲಕೃಷ್ಣ ಗೌಡ ಉಪಸ್ಥಿತರಿದ್ದರು.
ಘಟಕ ಸಂಯೋಜಕಿ ನಮಿತಾ ಎಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸ್ವಯಂಸೇವಕರಾದ ಕುಸುಮ ಕೆ ಸ್ವಾಗತಿಸಿ, ಹೇಮಾ ವಿ ವಂದಿಸಿದರು. ಶೌರ್ಯ ಘಟಕದ ಸ್ವಯಂ ಸೇವಕರು ಶ್ರಮದಾನದಲ್ಲಿ ಭಾಗವಹಿಸಿದ್ದರು.