ಪುಣಚ ಕ್ರಿಸ್ತರಾಜ ದೇವಾಲಯದಲ್ಲಿ ಮೋಂತಿಫೆಸ್ತ್ ಆಚರಣೆ

0

ಪುಣಚ: ಏಸುಕ್ರಿಸ್ತರ ತಾಯಿ ಮೇರಿ ಮಾತೆಯ ಜನ್ಮದಿನವನ್ನು ಸಾರುವ ಕನ್ಯಾಮರಿಯಮ್ಮನವರ ಜನ್ಮದಿನ ಮತ್ತು ತೆನೆಹಬ್ಬವನ್ನು ಪುಣಚ ಕ್ರಿಸ್ತರಾಜ ಚರ್ಚ್’ನಲ್ಲಿ ಸೆ.8ರಂದು ಆಚರಿಸಲಾಯಿತು.

ಮನೆಲ ಚರ್ಚನ ಧರ್ಮಗುರು ಫಾ.ಸ್ಟ್ಯಾನಿ ರೊಡ್ರಿಗಸ್ ಹಾಗೂ ಮಂಗಳೂರು ಧರ್ಮ ಪ್ರಾಂತ್ಯದ ಜೆಪ್ಪು ಸೆಮಿನರಿಯ ಪ್ರಾಧ್ಯಾಪಕ ಫಾ.ವಿನ್ಸೆಂಟ್ ಮಿನೇಜಸ್ ಬಲಿಪೂಜೆ ನೆರವೇರಿಸಿ ಹಬ್ಬದ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಚರ್ಚ್’ನ ನೂತನ ವೆಬ್ ಸೈಟ್ ನ್ನು ಉದ್ಘಾಟಿಸಲಾಯಿತು. ಬಲಿಪೂಜೆಯ ಬಳಿಕ ಸಾಂಪ್ರದಾಯದಂತೆ ತೆನೆ ಮತ್ತು ಕಬ್ಬನ್ನು ಭಕ್ತರಿಗೆ ವಿತರಿಸಲಾಯಿತು.

LEAVE A REPLY

Please enter your comment!
Please enter your name here