ಬುಳೇರಿಕಟ್ಟೆ ಸಾಜ ಕ್ರಾಸ್ ನೂತನ ಆಟೋ ತಂಗುದಾಣ ಉದ್ಘಾಟನೆ

0

ರಿಕ್ಷಾ ಚಾಲಕರು ಸಮಾಜದ ಆಪತ್ಬಾಂಧವರು: ಶಾಸಕ ಅಶೋಕ್ ರೈ


ಪುತ್ತೂರು; ರಿಕ್ಷಾ ಚಾಲಕರು ಸಮಾಜದ ಕನ್ನಡಿ ಇದ್ದಂತೆ ಅವರು ಕೇವಲ ಚಾಲಕರಲ್ಲ ಅವರು ಸಮಾಜದ  ಆಪತ್ಬಾಂಧವರಾಗಿದ್ದಾರೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.ಅವರು ಬಲ್ನಾಡು ಗ್ರಾಮದ ಬುಳೇರಿಕಟ್ಟೆ ಸಾಜ ಕ್ರಾಸ್ ಬಳಿ ನಿರ್ಮಾಣಗೊಂಡ ನೂತನ ಆಟೋ ನಿಲ್ದಾಣವನ್ನು ಉದ್ಘಾಟಿಸಿ ಮಾತನಾಡಿದರು.


ಈ ಪ್ರದೇಶದಲ್ಲಿ ರಿಕ್ಷಾ ತಂಗುದಾಣ ನಿರ್ಮಾಣವಾಗಬೇಕೆಂದು ಹಲವು ವರ್ಷಗಳಿಂದ ಮನವಿ ಮಾಡುತ್ತಿದ್ದರು ಆದರೆ ಇವರ ಬೇಡಿಕೆ ಈಡೇರಿರಲಿಲ್ಲ ಈ ಬಾರಿ ಬೇಡಿಕೆಯನ್ನು ಈಡೇರಿಸಿದ್ದೇನೆ, ಸುಮಾರು 4 ಲಕ್ಷ ರೂ ವೆಚ್ಚದಲ್ಲಿ ಅತೀ ಸುಂದರವಾದ ರಿಕ್ಷ ತಂಗುದಾಣವನ್ನು ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.


ಪ್ರತೀ ಗ್ರಾಮದಲ್ಲಿ ರಿಕ್ಷಾ ತಂಗುದಾಣ ಬೇಡಿಕೆ ಇದೆ. ಈಗಾಗಲೇ ಸುಮಾರು 60 ಕ್ಕೂ ಮಿಕ್ಕಿ ರಿಕ್ಷಾ ತಂಗುದಾಣ ನಿರ್ಮಾಣಕ್ಕೆ ಅನುದಾನ ಮೀಸಲಿರಿಸಲಾಗಿದೆ. ಮಳೆಗಾಲದಲ್ಲಿ ಮತ್ತು ಬೇಸಿಗೆಯಲ್ಲಿ ರಿಕ್ಷಾ ಚಾಲಕರು ಸುರಕ್ಷಿತವಾಗಿರಬೆಕು ಎಂಬ ಉದ್ದೇಶದಿಂದ ಈ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಶಾಸಕರು ಹೇಳಿದರು.

ತುರ್ತು ಸಂದರ್ಬದಲ್ಲಿ ರಿಕ್ಷಾ ಚಾಲಕರೇ ಬೇಕು
ತುರ್ತು ಸಂದರ್ಭದಲ್ಲಿ ರಿಕ್ಷಾ ಚಾಲಕರೇ ಎಲ್ಲರಿಗೂ ಬೇಕಾಗುತ್ತದೆ, ಮಧ್ಯರಾತ್ರಿ ಕರೆದರೂ ರಕ್ಷಣೆಗೆ ಬರುವ ರಿಕ್ಷಾ ಚಾಲಕರಿಗೆ ಸಮಾಜದಲ್ಲಿ ಅಪಾರ ಗೌರವ ಇದೆ, ರಾಜಕೀಯದವರನ್ನು ಮೇಲಕ್ಕೆತ್ತಲೂ ಅವರಿಗೆ ಗೊತ್ತು ಕೆಳಗೆ ಇಳಿಸುವ ತಾಕತ್ತೂ ಇದೆ. ಅವರಿಗೆ ಸಮಾಜದ ಕಟ್ಟಕಡೇಯ ವ್ಯಕ್ತಿಗಳ ಜೊತೆಗೆ ನಿಕಟ ಸಂಪರ್ಕ ಇರುವವರು ರಿಕ್ಷಾ ಚಾಲಕರು ಮಾತ್ರ ಎಂದರೆ ತಪ್ಪಾಗಲಾರದು ಎಂದು ಶಾಸಕರು ಹೇಳಿದರು.


ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮಹಮ್ಮದ್‌ರವರು ಮಾತನಾಡಿ ಈ ಭಾಗದ ರಿಕ್ಷಾ ಚಾಲಕರ ಬಹುಕಾಲದ ಬೇಡಿಕೆ ಈ ಬಾರಿ ಈಡೇರಿದೆ. ತಂಗುದಾಣವನ್ನು ಸ್ವಚ್ಚತೆಯಿಂದ ಕಾಪಾಡುವ ಮೂಲಕ ಇದನ್ನು ದೀರ್ಘ ಬಾಳಿಕೆಯ ನಿಲ್ದಾಣವಾಗಿ ಉಳಿಸಿಕೊಳ್ಳುವ ಜವಬ್ದಾರಿ ನಮ್ಮೆಲ್ಲರ ಮೇಲಿದೆ. ಪುತ್ತೂರಿನಲ್ಲಿ ಅಭಿವೃದ್ದಿ ಕಾರ್ಯಗಳು ಶರವೇಗದಲ್ಲಿ ಸಾಗುತ್ತಿದೆ ಎಂದು ಹೇಳಿದರು.

ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಂ ರವರು ಮಾತನಾಡಿ ಪುತ್ತೂರಿನಲ್ಲಿ ಅಭಿವೃದ್ದಿ ಪರ್ವ ಆರಂಭವಾಗಿದೆ. ಈಗಾಗಲೇ 1500 ಕೋಟಿ ರೂ ಅನುದಾನ ಬಂದಿದ್ದು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಅನುದಾನ ಹರಿದು ಬರಲಿದ್ದು ಶಾಸಕ ಅಶೋಕ್ ರೈಯವರ ಮುತುವರ್ಜಿಯಿಂದ ಪುತ್ತೂರು ವಿಧಾನಸಭಾ ಕ್ಷೇತ್ರ ಅಭಿವೃದ್ದಿಯ ಉತ್ತುಂಗಕ್ಕೆರಲಿದೆ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಚಂದ್ರ ಆಳ್ವ, ಬಲ್ನಾಡು ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಎ ಎಂ ಪ್ರಕಾಶ್ ಚಂದ್ರ ಆಳ್ವ, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷರಾದ ಮಹಮ್ಮದಾಲಿ, ಡಿಸಿಸಿ ಪ್ರಧಾನ ಕಾರ್ಯದರ್ಶಿ ಕೆ ಪಿ ಆಳ್ವ, ಹಿರಿಯರಾದ ಇದ್ದಿಕುಂಞಿ ,ಬಲ್ನಾಡು ಗ್ರಾಪಂ ಅಧ್ಯಕ್ಷೆ ಪರಮೇಶ್ವರಿ ಭಟ್, ಗ್ರಾಪಂ ಸದಸ್ಯರುಗಳಾದ ಅಂಬ್ರೋಸ್ ಡಿಸೋಜಾ, ವಿನಯಾ ವಸಂತ್, ವಸಂತಿ, ಚಂದ್ರಾವತಿ, ಗ್ರಾಪಂ ಉಪಾಧ್ಯಕ್ಷರಾದ ರವಿ ಸಾಜ, ಶೋಭಾ , ಬೂತ್ ಅಧ್ಯಕ್ಷರಾದ ಅಶ್ರಫ್ ಕೆ ಬಿ, ಗುತ್ತಿಗೆದಾರರಾದ ಸಿಯಾನ್ ದರ್ಬೆ ಮತ್ತಿತರರು ಉಪಸ್ತಿತರಿದ್ದರು.ವಲಯಾಧ್ಯಕ್ಷರಾದ ಚಂದಪ್ಪ ಪುಜಾರಿ ಸ್ವಾಗತಿಸಿ ವಂದಿಸಿದರು. ರಿಕ್ಷಾ ಚಾಲಕರು ಸಹರಿಸಿದರು.

LEAVE A REPLY

Please enter your comment!
Please enter your name here