ಪುತ್ತೂರು: ಪುತ್ತೂರು ಗ್ರಾಮಾಂತರ ವಲಯ ಮಟ್ಟದ ಪ್ರೌಢಶಾಲಾ ಬಾಲಕ ಬಾಲಕಿಯರ ಖೋ- ಖೋ ಪಂದ್ಯಾಟ ಸರಕಾರಿ ಪ್ರೌಢಶಾಲೆ ನೆಟ್ಟಣಿಗೆ ಮುಡ್ನೂರು ಇಲ್ಲಿ ನಡೆಯಿತು.
ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಫೌಝಿಯಾ ಇಬ್ರಾಹಿಂ ಸಮಾರಂಭ ಉದ್ಘಾಟಿಸಿ ಈ ಪ್ರೌಢಶಾಲೆಯಲ್ಲಿ ನಿರಂತರವಾಗಿ ಪಠ್ಯ ಮತ್ತು ಸಹಪಠ್ಯ ಚಟುವಟಿಕೆಗಳು ನಡೆಯುತ್ತಿರುವುದು ಸಂತೋಷಕರ ವಿಚಾರ . ಶಾಲಾ ಅಭಿವೃದ್ಧಿ ಮೇಲುಸ್ತುವಾರಿ ಸಮಿತಿಯ ಸಂಘಟಿತ ಪ್ರಯತ್ನದಿಂದ ಯಾವುದೇ ಕಾರ್ಯಕ್ರಮ ಯಶಸ್ವಿಯಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಅತ್ಯುತ್ತಮ ರೀತಿಯಲ್ಲಿ ಸಂಘಟನೆ ಮಾಡಿದ ಶಾಲೆಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಳೆದ ವರ್ಷವೂ ತಾಲೂಕು ಮಟ್ಟದ ಚೆಸ್ ಸ್ಪರ್ಧೆಯನ್ನು ಅತ್ಯುತ್ತಮವಾಗಿ ನಿರ್ವಹಿಸಿ ಈ ವರ್ಷ ವ್ಯವಸ್ಥಿತ ರೀತಿಯಲ್ಲಿ ಪಂದ್ಯಾಟವನ್ನು ಸಂಘಟಿಸಿರುವುದು ಶಾಲಾಭಿವೃದ್ಧಿ ಸಮಿತಿಯ ಕ್ರಿಯಾಶೀಲತೆಗೆ ಸಾಕ್ಷಿಯಾಗಿದ್ದು ಪಂದ್ಯಾಟಕ್ಕೆ ಶುಭ ಹಾರೈಸಿದರು.
ಸಭಾಧ್ಯಕ್ಷತೆಯನ್ನು ವಹಿಸಿದ ಶಾಲಾ ಕಾರ್ಯಧ್ಯಕ್ಷ ಶ್ರೀರಾಮ್ ಪಕ್ಕಳ ಮಾತನಾಡಿ ಎಲ್ಲರ ಸಹಕಾರದಿಂದ ಈ ಕಾರ್ಯವನ್ನು ಮಾಡಲು ಸಾಧ್ಯವಾಗಿದೆ.ಇಲ್ಲಿಯ ಪೋಷಕರು ಮತ್ತು ಶಾಲಾ ಅಭಿವೃದ್ಧಿ ಸಮಿತಿ ಹಾಗೂ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುವುದರಿಂದ ನಮಗೆ ಯಾವುದೇ ಕಾರ್ಯವನ್ನು ಮಾಡಲು ಸಾಧ್ಯವಾಗಿದೆ ಎಂದರು.
ಸಮಾರಂಭದಲ್ಲಿ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಮ ಮೇನಾಲ,ಸದಸ್ಯರಾದ ವೆಂಕಪ್ಪ ನಾಯ್ಕ, ಇಬ್ರಾಹಿಂ ಪಳ್ಳತ್ತೂರು,ಶಾಲಾ ನಿಕಟ ಪೂರ್ವ ಕಾರ್ಯಾಧ್ಯಕ್ಷೆ ಮಂಜುನಾಥ ರೈ ಸಾಂತ್ಯ, ಸೂಫಿ ಬಂಟಡ್ಕ, ಶಿಕ್ಷಣ ತಜ್ಞರಾದ ಮಹಾಬಲ ರೈ, ವಿಕ್ರಂ ರೈ, ಗ್ರೇಡ್ 1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಪಡುಮಳೆ ,ಮಧುರ ಇಂಟರ್ನ್ಯಾಷನಲ್ ಸ್ಕೂಲ್ ನ ಸಂಚಾಲಕ ಅಬ್ದುಲ್ ರಹಿಮಾನ್, ಅಬ್ದುಲ್ ಖಾದರ್ ಸುರುಳಿ ಮೂಲೆ,ಫೌಝಿಯಾ ಉಪಸ್ಥಿತರಿದ್ದು ಶುಭ ಹಾರೈಸಿದರು. ಶಾಲಾ ಮುಖ್ಯ ಶಿಕ್ಷಕರಾದ ಪ್ರೇಮ್ ಕುಮಾರ್ ಸ್ವಾಗತಿಸಿದರು. ಶಿಕ್ಷಕ ಪುರುಷೋತ್ತಮ ,ರಮಿತಾ ದಮಯಂತಿ,ಮೀನಾಕ್ಷಿ, ಮೋನಿಷಾ ಸಹಕರಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ದೇವಿ ಪ್ರಕಾಶ್ ಶೆಟ್ಟಿ ವಂದಿಸಿದರು.ಸಮಾಜ ವಿಜ್ಞಾನ ಶಿಕ್ಷಕಿ ಇಂದಿರಾ. ಎ ಕಾರ್ಯಕ್ರಮ ನಿರ್ವಹಿಸಿದರು.
ಸಮಾರೋಪ ಸಮಾರಂಭ
ಬಹುಮಾನ ವಿತರಣೆಯನ್ನು ಶಿಕ್ಷಣ ತಜ್ಞರಾದ ಮಹಾಬಲ ರೈ ಕರ್ನೂರು, ಅಬ್ದುಲ್ ಖಾದರ್ ಸುರುಳಿ ಮೂಲೆ,ಖೋ- ಖೋ ಆಟಗಾರರ ರಾಜೇಶ್ ಪಂಚೋಡಿ,ನಾರಾಯಣ ಮೇನಾಲ, ಗ್ರಾಮ ಪಂಚಾಯತ್ ಸದಸ್ಯರಾದ ವೆಂಕಪ್ಪ ನಾಯ್ಕ ಉಪಸ್ಥಿತರಿದ್ದು ವಿತರಿಸಿದರು. ಶಾಲಾ ಮುಖ್ಯ ಶಿಕ್ಷಕ ಪ್ರೇಮ್ ಕುಮಾರ್ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕ ದೇವಿ ಪ್ರಕಾಶ್ ಶೆಟ್ಟಿ ವಂದಿಸಿದರು.
ಫಲಿತಾಂಶ
17ರ ವಯೋಮಾನದ ಬಾಲಕರು ಪ್ರಥಮಶ್ರೀ ಗಜಾನನ ವಿದ್ಯಾಸಂಸ್ಥೆ ಹನುಮಗಿರಿ, ದ್ವಿತೀಯ ಸರಕಾರಿ ಪ್ರೌಢಶಾಲೆ ಇರ್ದೆ ಉಪ್ಪಳಿಗೆ
17ರ ವಯೋಮಾನದ ಬಾಲಕಿಯರು ಪ್ರಥಮ. ಸರಕಾರಿ ಪ್ರೌಢಶಾಲೆ ನೆಟ್ಟಣಿಗೆ ಮುಡ್ನೂರು , ದ್ವಿತೀಯ.. ಷಣ್ಮುಖ ದೇವ ಪ್ರೌಢಶಾಲೆ ಪೆರ್ಲಂಪಾಡಿ