ಕೊಳ್ತಿಗೆಯ ಮೊಗಪ್ಪೆಯಲ್ಲಿ ವಿಜೃಂಭಿಸಿದ ಸೌಹಾರ್ದ ಗಣೇಶೋತ್ಸವ

0

ಪುತ್ತೂರು: ಸೌಹಾರ್ದ ಸಮಿತಿ ಕೊಳ್ತಿಗೆ ಇದರ ಆಶ್ರಯದಲ್ಲಿ 9 ನೇ ವರ್ಷದ ಸೌಹಾರ್ದ ಗಣೇಶೋತ್ಸವ ಸೆ.7-8ರಂದು ವರೆಗೆ ಎರಡು ದಿನಗಳ ಕಾಲ ವಿಜೃಂಭನೆಯಿಂದ ನಡೆಯಿತು.

ಸೌಹಾರ್ದ ಸಮಿತಿಯ ಅಧ್ಯಕ್ಷ ಪ್ರದೀಪ್ ಕುಮಾರ್ ರೈ ಪಾಂಬಾರು ಇವರ ನೇತೃತ್ವದಲ್ಲಿ ನಡೆದ ಈ ಗಣೇಶೋತ್ಸವದ ಮೊದಲ ದಿನ ಜ್ಯೋತಿ ಬೆಳಗಿಸಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಗಣಪತಿ ಹೋಮ ನಡೆಯಿತು. ಮಧ್ಯಾಹ್ನ ಮಹಾಪೂಜೆ ಬಳಿಕ ಸಾಮೂಹಿಕ ಭೋಜನ ಜರಗಿತು. ಸಂಜೆ ಗಂಟೆ 6.00ಕ್ಕೆ ಆರ್. ಪಿ ಕಲಾ ಸೇವಾ ಟ್ರಸ್ಟ್ ಪಾಂಬಾರು ಇದರ ವತಿಯಿಂದ ಸರಿಗಮಪ ವೇದಿಕೆಗೆ ಆಯ್ಕೆಯಾಗಿರುವ ಖ್ಯಾತ ಕರ್ನಾಟಕ ಹಾಗೂ ಕೇರಳದ ಕಲಾವಿದರಿಂದ ಆರ್. ಪಿ ನೈಟ್ಸ್ ಸಂಗೀತ ಕಾರ್ಯಕ್ರಮ ಜರಗಿತು.ರಾತ್ರಿ 8.00ಕ್ಕೆ ಮಹಾಪೂಜೆ ಪ್ರಸಾದ ವಿತರಣೆ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಆಗಮಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಮೊದಲ ದಿನದ ಕಾರ್ಯಕ್ರಮದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಕಬ್ಬಡಿ ಪಂದ್ಯಾಟ ಜರಗಿತು. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ವಿಭಾಗದಲ್ಲಿ ಬುಶ್ರ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನ, ದ್ವಿತೀಯ ಬಹುಮಾನ ಎಸ್ ಎಂ ಗೈಸ್ ಪೆರ್ಲಂಪಾಡಿ, ಪ್ರೌಢ ಶಾಲಾ ವಿಭಾಗದಲ್ಲಿ ಬುಶ್ರ ಹೈಸ್ಕೂಲ್ ಪ್ರಥಮ ದ್ವಿತೀಯ ಮುತ್ತು ಶ್ರೀ ಮೊಗಪ್ಪೆ ಗಿಟ್ಟಿಸಿಕೊಂಡರು.

ಸಂಜೆ ನಡೆದ ಸೌಹಾರ್ದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೌಹಾರ್ದ ಸಮಿತಿ ಅಧ್ಯಕ್ಷ ಪ್ರದೀಪ್ ಕುಮಾರ್ ರೈ ಪಾಂಬಾರು ಇವರು ವಹಿಸಿದ್ದರು. ವಿಶೇಷ ಅತಿಥಿ ದಕ್ಷಿಣ ಕನ್ನಡ ಜಿಲ್ಲಾ ಧಾರ್ಮಿಕ ಪರಿಷತ್ತು ಸದಸ್ಯರಾದ ಲಕ್ಷ್ಮೀಶ ಗಬ್ಬಲಡ್ಕ ಮಾತನಾಡಿ ಧರ್ಮ ಧರ್ಮಗಳ ನಡುವೆ ಅನ್ಯೋನತೆಯಲ್ಲಿ ಬದುಕಬೇಕು ನಾವೆಲ್ಲ ಭಾರತ ಮಾತೆಯ ಮಕ್ಕಳು ಎಂದರು.

ಇನ್ನೋರ್ವ ಅತಿಥಿ ಉಪ್ಪಿನಂಗಡಿಯ ಧರ್ಮಗುರು ಜನಾಬ್ ಯಸ್.ಬಿ.ದಾರಿಮಿ ಮಾತನಾಡಿ ಎಲ್ಲಾ ಧರ್ಮದವರು ಒಂದೇ ತಾಯಿಯ ಮಕ್ಕಳು ಎಲ್ಲರ ರಕ್ತವು ಒಂದೇ ಎಲ್ಲರೂ ಈ ದೇಶದಲ್ಲಿ ದ್ವೇಷ ಮಾಡದೇ ಬದುಕಬೇಕೆಂದರು.

ಕಾರ್ಯಕ್ರಮದಲ್ಲಿ ಪ್ರಸಿದ್ಧ ನಾಟ್ಯ ವೈದ್ಯ ರಾಧಾಕೃಷ್ಣ ರೈ ಹಾಗೂ ರಾಜ್ಯ ಮಟ್ಟದ ಚೆಸ್ ಆಟಗಾರ್ತಿ ಸಾಕ್ಷಿ ಕೆ.ಆರ್ ಇವರನ್ನು ಸನ್ಮಾನಿಸಲಾಯಿತು. ವಿಶೇಷ ಅತಿಥಿಗಳಾಗಿ ರಾಮಕೃಷ್ಣ ಪ್ರೌಢಶಾಲೆ ಪುತ್ತೂರು ಇದರ ಸಂಚಾಲಕ ಹೇಮನಾಥ ಶೆಟ್ಟಿ ಕಾವು ಅವರು ಮಾತನಾಡಿ ಸೌಹಾರ್ದ ಸಮಿತಿ ರಾಜ್ಯದಲ್ಲೇ ಹೆಸರು ಪಡೆದಿದೆ ಎಲ್ಲಾ ಧರ್ಮದವರನ್ನು ಒಟ್ಟು ಗೂಡಿಸಿ ಪ್ರದೀಪ್ ಕುಮಾರ್ ರೈ ಪಾಂಬಾರು ರವರ ನೇತೃತ್ವದಲ್ಲಿ ವರ್ಷoಪ್ರತಿ ಮಾಡುತ್ತಿರುವ ಈ ಕಾರ್ಯಕ್ರಮ ಶ್ಲಾಘನೀಯ ಇಂತಹ ಕಾರ್ಯಕ್ರಮ ಎಲ್ಲರಿಂದ ಮಾಡಲು ಅಸಾಧ್ಯ ಎಂದರು.

ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕೆ.ಎಸ್ ವೆಂಕಟ್ರಮಣ ಗೌಡ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಾಯಂಬಾಡಿ ಶ್ರೀ ಷಣ್ಮುಖ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ವಸಂತಕುಮಾರ್ ರೈ ದುಗ್ಗಲ ಮಾತನಾಡಿ ಸೌಹಾರ್ದ ಸಮಿತಿಯು ಇನ್ನೂ ಒಳ್ಳೆಯ ಕೆಲಸ ಮಾಡಲಿ ಎಂದು ಹೇಳಿದರು. ಬಾಲಕೃಷ್ಣ ಗೌಡ ಪಡ್ರೆ ಮಾತನಾಡಿ ಇನ್ನೂ ಮುಂದೆಯೂ ಒಳ್ಳೆಯ ಕಾರ್ಯಕ್ರಮ ನೀಡಲಿ ಎಂದರು.

ಯಕ್ಷ ಲೋಕದ ಒಂಟಿ ಸಲಗ ಖ್ಯಾತಿಯ ಕೊಳ್ತಿಗೆ ನಾರಾಯಣಗೌಡ ಮಾತನಾಡಿ ಇದು ನನ್ನ ಜನ್ಮ ಭೂಮಿ ಇಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನ್ನ ಪುಣ್ಯ ಎಂದರು. ಬಹುಭಾಷಾ ಚಿತ್ರ ನಟಿ ಭವ್ಯ ಪೂಜಾರಿ ಮಾತನಾಡಿ ಸಂತಸ ವ್ಯಕ್ತ ಪಡಿಸಿದರು. ಮುತ್ತು ಮಾರಿಯಮ್ಮ ದೇವಸ್ಥಾನ ಮೊಗಪ್ಪೆ ಇದರ ಗೌರವಾಧ್ಯಕ್ಷ ಎಂ ಪಿ ಕನಕ ರತ್ನ ಇವರು ಭಾಗವಹಿಸಿದ್ದರು. ಸೌಹಾರ್ದ ಸಮಿತಿಯ ಕಾರ್ಯಾಧ್ಯಕ್ಷ ಅಮಲರಾಮಚಂದ್ರ ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿದರು. ವಿಜೇಶ್ ರೈ ಕೆಳಗಿನಮನೆ ವಂದಿಸಿದರು. ಶಾಹುಲ್ ಅಮಲ ಹಾಗೂ ವಿನೋದ್ ಕುಮಾರ್ ರೈ ಕೆಳಗಿನಮನೆ ಕಾರ್ಯಕ್ರಮ ನಿರೂಪಿಸಿದರು.

ಎರಡನೇ ದಿನದ ಕಾರ್ಯಕ್ರಮದಲ್ಲಿ ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ ಹಾಗೂ ಸಾಮೂಹಿಕ ಭೋಜನ ಕಾರ್ಯಕ್ರಮ ನಡೆಯಿತು. ಸಂಜೆ ನಿರೀಕ್ಷಾ ಗುರುದತ್ ನಾಯಕ್ ಬಳಗ ಸುಳ್ಯ ಇವರಿಂದ ಭಜನಾ ಸಂಕೀರ್ತನ ಕಾರ್ಯಕ್ರಮ ನಡೆಯಿತು.ಮಾಜಿ ಶಾಸಕಿ ಶಕುಂತಲ ಟಿ ಶೆಟ್ಟಿ ಆಗಮಿಸಿ ಪ್ರಸಾದ ಸ್ವೀಕರಿದರು. ಪುರುಷರಿಗಾಗಿ ಮುಕ್ತ ವಾಲಿಬಾಲ್ ಪಂದ್ಯಾಟ ನಡೆಯಿತು. ಸುಮಾರು 16 ತಂಡಗಳು ಈ ಪಂದ್ಯಾಟದಲ್ಲಿ ಭಾಗವಹಿಸಿದ್ದವು. ಚಾಂಪಿಯನ್ ಪಟ್ಟವನ್ನು ಎಸ್. ಕೆ. ವೈ. ಸಿ. ತನ್ನದಾಗಿಸಿಕೊಂಡರೆ, ರನ್ನರ್ ಅಪ್ ಸ್ಥಾನವನ್ನು ನಾಯಿಫ್ ಗೈಸ್ ಪಡೆಯಿತು.

ಮುಕ್ತ ಕೇರಂ ಪಂದ್ಯಾಟದಲ್ಲಿ ರೂಪರಾಜ್ ಮೊಗಪ್ಪೆ ಪ್ರಥಮ ಸ್ಥಾನವನ್ನು ಹಸೈನಾರ್ ನೆಟ್ಟಾರು ದ್ವಿತೀಯ ಸ್ಥಾನವನ್ನು ಪಡೆದರು. ಸಂಜೆ 6.30ಕ್ಕೆ ರಿಯಾಲಿಟಿ ಶೋ ಗಳಲ್ಲಿ ಭಾಗವಹಿಸಿದ ನುರಿತ ನೃತ್ಯ ಕಲಾವಿದರಿಂದ ಡ್ಯಾನ್ಸ್ ದಮಾಕ ಕಾರ್ಯಕ್ರಮ ಜರಗಿತ್ತು. ಬಳಿಕ ಮಹಾಪೂಜೆ ಪ್ರಸಾದ ವಿತರಣೆ ಸಾಮೂಹಿಕ ಭೋಜನ ನಡೆದು ಅತ್ಯಾಕರ್ಷಕ ಸಿಡಿಮದ್ದು ಪ್ರದರ್ಶನದೊಂದಿಗೆ ಹರಿಹರಸುತ ಕಲಾಸ್ಮಿತಿ ದೇಲಂಪಾಡಿ ಇವರಿಂದ ಕೇರಳ ಮಾದರಿಯ ಚೆಂಡೆ ಪ್ರದರ್ಶನದೊಂದಿಗೆ ಆಕರ್ಷಕ ಶೋಭಾಯಾತ್ರೆ ನಡೆಯಿತು. ಗಣೇಶ ಮೂರ್ತಿಯನ್ನು ಮೊಗಪ್ಪೆ ಸಾರ್ವಜನಿಕ ಕೆರೆಯಲ್ಲಿ ಜಲಸ್ತಂಬನಗೊಳಿಸಲಾಯಿತು.

LEAVE A REPLY

Please enter your comment!
Please enter your name here