ತ್ರೋಬಾಲ್ ಪಂದ್ಯಾಟ: ಇಂದ್ರಪ್ರಸ್ಥ ವಿದ್ಯಾಲಯದ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

0

ಉಪ್ಪಿನಂಗಡಿ : ಸಾರ್ವಜನಿಕ ಶಿಕ್ಷಣ ಇಲಾಖಾ ವತಿಯಿಂದ ಇಂದ್ರಪ್ರಸ್ಥ ವಿದ್ಯಾಲಯ (Indraprastha Vidyalaya) ಇಲ್ಲಿ ಸೆಪ್ಟಂಬರ್ 11ರಂದು ನಡೆದ ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ (Throwball Tournament) ಇಂದ್ರಪ್ರಸ್ಥ ವಿದ್ಯಾಲಯದ 17 ವಯೋಮಾನದ ಬಾಲಕರ ತಂಡವು ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ. ಹಾಗೂ ಬಾಲಕಿಯರ ತಂಡವು ದ್ವಿತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡಿರುತ್ತಾರೆ.

17 ರ ವಯೋಮಾನದ ಬಾಲಕರ ತ್ರೋಬಾಲ್ ವಿಭಾಗದಲ್ಲಿ 10ನೇ ತರಗತಿಯ ಆಕಾಶ್ ರೈ, ಅಕ್ಷಜ್ ಶೆಟ್ಟಿ, ತನ್ವಿತ್, ಅಹಮ್ಮದ್ ಶಬೀರ್, ಪುನೀತ್, ಶಿಖರ್ ಶೆಟ್ಟಿ, 9ನೇ ತರಗತಿಯ ಚಿಂತನ್ ಕೆ. ಸಿ, ಆಯುಶ್ ಎಸ್ ಶೆಟ್ಟಿ, ಅನ್ಮಯಿ ಡಿ ಶೆಟ್ಟಿ, ಇಮಾಮ್ ಅಹಮದ್, ಕವೀಶ್, ಸಮೃದ್ಧ ಜೈನ್, ಪ್ರಥಮ್, 8ನೇ ತರಗತಿಯ ಸಾಕೇತ್ ಶೆಟ್ಟಿ, ಪ್ರೀತಮ್ ಭಾಗವಹಿಸಿರುತ್ತಾರೆ.

17 ರ ವಯೋಮಾನದ ಬಾಲಕಿಯರ ತ್ರೋಬಾಲ್ ವಿಭಾಗದಲ್ಲಿ 10ನೇ ತರಗತಿಯ ಕೃಪಾ, ವನಿಷಾ, ಸೃಜನಾ ಸಿ. ಟಿ, ಸೃಷ್ಠಿ ಜೈನ್, ಪ್ರಣೀಕ್ಷಾ, ೯ನೇ ತರಗತಿಯ ತನ್ವಿ, ಅನ್ವಿ ಆರ್ ಆಚಾರ್ಯ, ಸವ್ಯ, ಸೃಷ್ಠಿ. ಕೆ, 8ನೇ ತರಗತಿಯ ಧನ್ವಿ ಶೆಟ್ಟಿ, ಅನುಶ್ರೀ, ಸ್ತುತಿ ಶೆಟ್ಟಿ ಭಾಗವಹಿಸಿರುತ್ತಾರೆ. ಆಕಾಶ್ ಮತ್ತು ಅನುಶ್ರೀ ಉತ್ತಮ ಎಸೆತಗಾರರಾಗಿ, ಚಿಂತನ್ ಕೆ.ಸಿ ಸವ್ಯಸಾಚಿ ಆಟಗಾರರಾಗಿ ಆಯ್ಕೆಯಾಗಿರುತ್ತಾರೆ. ಇವರಿಗೆ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಗೋಪಿನಾಥ್ ಹಾಗೂ ದೈಹಿಕ ಶಿಕ್ಷಣ ಶಿಕ್ಷಕಿ ವಿದ್ಯಾ , ಶ್ರೀರಂಜಿನಿ ತರಬೇತಿ ನೀಡಿದ್ದಾರೆ ಎಂದು ಸಂಸ್ಥೆಯ ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾ ಆರ್ ಪ್ರಸಾದ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here