ಪುತ್ತೂರು: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಇರುವ ಶ್ರೀ ಶಾರದಾ ಭಜನಾ ಮಂದಿರದ ನವರಾತ್ರಿ ಉತ್ಸವ, ಶಾರದೋತ್ಸವದ ಪೂರ್ವಭಾವಿ ಸಭೆ ಸೆ.11ರಂದು ಮಂದಿರದ ಗೌರವಾಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತುರವರ ನೇತೃತ್ವದಲ್ಲಿ ಹಾಗೂ ಮಂದಿರದ ಅಧ್ಯಕ್ಷ ಪಿ.ಜಿ. ಜಗನ್ನೀವಾಸ ರಾವ್ ರವರ ಅಧ್ಯಕ್ಷತೆಯಲ್ಲಿ ಮಂದಿರದಲ್ಲಿ ನಡೆಯಿತು.
ಕಳೆದ ವರ್ಷದಂತೆ ಈ ಬಾರಿ ಕೂಡ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದ್ದು, ರಾತ್ರಿ ಪೂಜೆಯ ನಂತರ ಅನ್ನಸಂತರ್ಪಣೆ ನಡೆಸಲಾಗುವುದು ಎಂದು ನಿರ್ಧರಿಸಲಾಯಿತು.
ಈ ಬಾರಿ ನವರಾತ್ರಿಗೆ ಹೊರ ಕಾಣಿಕೆ ಸಮರ್ಪಣೆ:
ಪ್ರಥಮ ಬಾರಿಗೆ ಶಾರದಾ ಭಜನಾ ಮಂದಿರದಲ್ಲಿ ನವರಾತ್ರಿಯಂದು ಹೊರ ಕಾಣಿಕೆ ಸಮರ್ಪಣೆ ಮೆರವಣಿಗೆ ನಡೆಯಲಿದೆ.
ಇದರ ಜವಾಬ್ದಾರಿಯನ್ನು ಕಳೆದ ವರ್ಷದ ಉತ್ಸವ ಸಮಿತಿಯ ಅಧ್ಯಕ್ಷರಾಗಿದ್ದ ರಾಜೇಶ್ ಬನ್ನೂರುರವರಿಗೆ ವಹಿಸಿಕೊಡಲಾಯಿತು. ಶಾರದೋತ್ಸವ, ಶೋಭಾಯಾತ್ರೆಯ ನೇತೃತ್ವವನ್ನು ಗೌರವಾಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತುರವರ ಮುಂದಾಳತ್ವದಲ್ಲಿ ನಡೆಸಲಾಗುವುದು ಎಂದು ತೀರ್ಮಾನಿಸಲಾಯಿತು.
ಸಭೆಯಲ್ಲಿ ಮಂದಿರದ ಪದಾಧಿಕಾರಿಗಳು ಉಪಸ್ಥಿತರಿದ್ದರು.