ಅಪ್ರಾಪ್ತೆಯೊಂದಿಗೆ ಲೈಂಗಿಕ ಸಂಪರ್ಕ, ಬೆದರಿಕೆ ಆರೋಪ- ಪೋಕ್ಸೋ ಕಾಯ್ದೆಯಡಿ ಆರೋಪಿ ಬಂಧನ

0

ನೆಲ್ಯಾಡಿ: ಅಪ್ರಾಪ್ತೆಯೊಂದಿಗೆ ಬಲವಂತವಾಗಿ ಲೈಂಗಿಕ ಸಂಪರ್ಕ ಮಾಡಿ, ಈ ವಿಚಾರವನ್ನು ಯಾರಲ್ಲಿಯಾದರೂ ಹೇಳಿದರೆ ಜೀವಂತ ಬಿಡುವುದಿಲ್ಲ ಎಂದು ಬೆದರಿಕೆಯೊಡ್ಡಿದ ಆರೋಪದಲ್ಲಿ ಸತೀಶ ವಿಟ್ಲ ಎಂಬಾತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ಆರೋಪಿಯನ್ನು ಬಂಧಿಸಿರುವುದಾಗಿ ವರದಿಯಾಗಿದೆ.

ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯು ಇದೇ ವರ್ಷದ ಜೂ.14ರಂದು ತನ್ನ ತಾಯಿಯೊಂದಿಗೆ ಪುತ್ತೂರಿನ ಕ್ಲಿನಿಕ್ ವೊಂದಕ್ಕೆ ಹೋದಾಗ ಆ ಕ್ಲಿನಿಕ್ ಗೆ ಬಂದಿದ್ದ ಆರೋಪಿ ಸತೀಶ್ ವಿದ್ಯಾರ್ಥಿನಿಯ ಪರಿಚಯ ಮಾಡಿಕೊಂಡು ಆಕೆಯ ತಾಯಿಯ ಮೊಬೈಲ್ ನಂಬರ್ ಪಡೆದುಕೊಂಡಿದ್ದ. ನಂತರ ಆರೋಪಿ ಸತೀಶ್ ಅದೇ ದಿನ ಸಂಜೆಯಿಂದ ಮೊಬೈಲ್‌ನಲ್ಲಿ ಮೇಸೇಜ್ ಮಾಡಲಾರಂಭಿಸಿದ್ದು ಇಬ್ಬರು ಸಲುಗೆಯಿಂದ ಮಾತನಾಡಿಕೊಂಡಿದ್ದರು.

ಬಳಿಕ ಜು.21 ಆದಿತ್ಯವಾರದಂದು ಬೆಳಿಗ್ಗೆ ಆರೋಪಿ ಸತೀಶ್ ವಿದ್ಯಾರ್ಥಿನಿಗೆ ಕರೆ ಮಾಡಿ ನೆಲ್ಯಾಡಿಗೆ ಬರಲು ಹೇಳಿದ್ದು ಅದರಂತೆ ವಿದ್ಯಾರ್ಥಿನಿ ಗೆಳತಿಯರೊಂದಿಗೆ ನೆಲ್ಯಾಡಿಗೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ನೆಲ್ಯಾಡಿಗೆ ಬಂದಾಗ ಆರೋಪಿ ಸತೀಶ್, ಬಿಳಿ ಮತ್ತು ಹಳದಿ ಬಣ್ಣದ ಪಿಕಪ್‌ ನಲ್ಲಿ, ‘ಕಾಂಚನಕ್ಕೆ ಹೋಗೋಣ ಬಾ..’ ಎಂದು ಒತ್ತಾಯಪೂರ್ವಕವಾಗಿ ಕರೆದುಕೊಂಡು ಬಂದು ಕಾಂಚನ ಒಳ ರಸ್ತೆಯ ಕಾಡು ಪ್ರದೇಶದಲ್ಲಿ ಪಿಕಪ್ ನಿಲ್ಲಿಸಿ ಮರ ಮತ್ತು ಪೊದೆ ಇರುವ ಸ್ಥಳಕ್ಕೆ ಕರೆದುಕೊಂಡು ಹೋಗಿ ಬಲವಂತವಾಗಿ ಲೈಂಗಿಕ ಸಂಭೋಗ ಮಾಡಿ ನಂತರ ನೆಲ್ಯಾಡಿಯಲ್ಲಿ ಬಿಟ್ಟು ಹೋಗಿದ್ದು, ಈ ವಿಚಾರವನ್ನು ಯಾರಲ್ಲಿಯಾದರೂ ಹೇಳಿದರೆ ಜೀವಂತ ಬಿಡುವುದಿಲ್ಲವಾಗಿ ಜೀವ ಬೆದರಿಕೆ ಹಾಕಿರುವುದಾಗಿ ಆರೋಪಿಸಿ ವಿದ್ಯಾರ್ಥಿನಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು.

ಈ ದೂರಿನಂತೆ ಉಪ್ಪಿನಂಗಡಿ ಪೊಲೀಸರು ಕಲಂ: 64(1),351 (2) BNS-2023 ಕಲಂ 4 ಪೋಕ್ಸೋ ಕಾಯ್ದೆ 2012ರಂತೆ ಪ್ರಕರಣ ಅಪರಾಧ ಸಂಖ್ಯೆ: 104/2024 ದಾಖಲಿಸಿಕೊಂಡು ಆರೋಪಿ ಸತೀಶ ವಿಟ್ಲನನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here