ಈಶ್ವರಮಂಗಲ: ನವೋದಯ ಒಕ್ಕೂಟ ಈಶ್ವರಮಂಗಲ ಇದರ ಪದಾಧಿಕಾರಿಗಳ ಪದಗ್ರಹಣ ಹಾಗೂ ಪದಾಧಿಕಾರಿಗಳ ಆಯ್ಕೆ ಸಭೆ ಸೆ.1ರಂದು ನಡೆಯಿತು. ಹಾಲಿ ಅಧ್ಯಕ್ಷರಾಗಿರುವ ರತ್ನ ಕುಮಾರ್, ತಾಲೂಕು ಮೇಲ್ವಿಚಾರಕರಾಗಿರುವ ಚಂದ್ರಶೇಖರ್, ಹಾಗೂ ವಲಯ ಪ್ರೇರಕಿಯಾದ ಮಾಧವಿ, ಗೌರವ ಅಧ್ಯಕ್ಷರಾದ ಪ್ರಶಾಂತ್ ಉಪಸ್ಥಿತಿಯಲ್ಲಿ ನಡೆದ ಈ ಸಭೆಯಲ್ಲಿ ಸರ್ವ ಸದಸ್ಯರ ಒಪ್ಪಿಗೆಯೊಂದಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ನೂತನ ಅಧ್ಯಕ್ಷರಾಗಿ ವಸಂತಿ ಪಟ್ರೋಡಿ, ಉಪಾಧ್ಯಕ್ಷರಾಗಿ ಸವಿತಾ ಮೂನಡ್ಕ, ಕಾರ್ಯದರ್ಶಿಯಾಗಿ ಹರೀಶ್ ಈಶ್ವರಮಂಗಲ, ಜತೆ ಕಾರ್ಯದರ್ಶಿಯಾಗಿ ಸುಶ್ಮಿತಾ ಮುಂಡ್ಯ, ಗೌರವ ಅಧ್ಯಕ್ಷರಾಗಿ ಜಲಜಾಕ್ಷಿ ಕರ್ಪುಡಿಕಾನ ಆಯ್ಕೆಯಾಗಿದ್ದಾರೆ.