ಸೆ.13ರ ರಾತ್ರಿ ಹೊರಟ ಪುತ್ತೂರು ಕಿಲ್ಲೆ ಮೈದಾನದ ಮಹಾಗಣಪತಿಯ ಶೋಭಯಾತ್ರೆ – ಸೆ.14ರ ಬೆಳಗ್ಗಿನ ಜಾವ ಜಲಸ್ತಂಭನ

0

ಪುತ್ತೂರು: ಕಿಲ್ಲೆ ಮೈದಾನದಲ್ಲಿ ಶ್ರೀ ದೇವತಾ ಸಮಿತಿಯ ಆಶ್ರಯದಲ್ಲಿ ಏಳು ದಿನಗಳ ಕಾಲ ನಡೆದ 67ನೇ ವರ್ಷದ ಸಾರ್ವಜನಿಕ ಶ್ರೀ ಮಹಾಗಣೇಶೋತ್ಸವದ ವೈಭವದ ಶೋಭಾಯಾತ್ರೆಯು ಸೆ.13ರಂದು ರಾತ್ರಿ ಹೊರಟು ಸೆ.14ರ ಬೆಳಗ್ಗೆ 6 ಗಂಟೆ ಸುಮಾರಿಗೆ ಮಂಜಲ್ಪಡ್ಪು ಕೆರೆಯಲ್ಲಿ ಜಲಸ್ತಂಭನಗೊಳಿಸಲಾಯಿತು. ಬೆಳಿಗ್ಗೆ ವೇದಿಕೆಯಲ್ಲಿ ಚೋಮ ಬೆಟ್ಟಂಪಾಡಿಯವರಿಂದ ಭಕ್ತಿ ಜನಪದ ಗೀತೆ ಕಾರ್ಯಕ್ರಮ ಬಳಿಕ ಮಧ್ಯಾಹ್ನ ಬಾರಿಸು ಕನ್ನಡ ಡಿಂಡಿಮವ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶೋಭಾಯಾತ್ರೆಯಲ್ಲಿ ದಾರಿಯುದ್ದಕ್ಕೂ ಚೆಂಡೆ, ಗೊಂಬೆಗಳ ಕುಣಿತ, ತಾಲಿಮು ಪ್ರದರ್ಶನ ವಿಶೇಷ ಆಕಷಣೆಯಾಗಿತ್ತು.

LEAVE A REPLY

Please enter your comment!
Please enter your name here