ಕಥೋಲಿಕ್ ಸಭಾ ಪುತ್ತೂರು ವಲಯದಿಂದ ಉಪ್ಪಿನಂಗಡಿ ಚರ್ಚ್ ಆವರಣದಲ್ಲಿMLC ಐವನ್ ಡಿ’ಸೋಜರಿಗೆ ಸನ್ಮಾನ

0

ʼಯುವ ಜನತೆ ರಾಜಕೀಯದಲ್ಲಿ ತೊಡಗಿಸಿಕೊಂಡು ಸಮುದಾಯ ಅಭಿವೃದ್ಧಿಪಡಿಸಿʼ – ಐವನ್ ಡಿ’ಸೋಜ

ಪುತ್ತೂರು: ಕಥೋಲಿಕ್ ಸಭಾದ ಉದ್ಧೇಶ ಸಮುದಾಯದ ಅಭಿವೃದ್ಧಿಗೆ ನಾಯಕರನ್ನು ಸೃಷ್ಟಿಸುವುದು. ಸಂವಿಧಾನ ವಿರುದ್ಧವಾಗಿ ಸರ್ಕಾರವು ಸಮುದಾಯದ ವಿರುದ್ಧ ಬಿಲ್ ಮಂಡಿಸುವಾಗ ಅದನ್ನು ವಿರೋಧಿಸಲು ಸಮುದಾಯದಲ್ಲಿ ಧ್ವನಿ ಎತ್ತುವ ನಾಯಕರು ಬೇಕಾಗಿದೆ. ಆದ್ದರಿಂದ ಕ್ರೈಸ್ತ ಸಮುದಾಯದ ಯುವಜನತೆ ಇತರ ಕ್ಷೇತ್ರದಲ್ಲಿ ತೊಡಗಿಸಿಕೊಂಡಾಗೆ ರಾಜಕೀಯದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡು ಸಮುದಾಯವನ್ನು ಅಭಿವೃದ್ಧಿಗೊಳಿಸುವತ್ತ ಚಿತ್ತ ಹರಿಸಬೇಕಾಗಿದೆ ಎಂದು ಕರ್ನಾಟಕ ಸರಕಾರದ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜ (Ivan D’Souza)ರವರು ಹೇಳಿದರು.

ಕಥೋಲಿಕ್ ಸಭಾ ಮಂಗಳೂರು ಪ್ರದೇಶ ಇದರ ಪುತ್ತೂರು ವಲಯದ ಆಶ್ರಯದಲ್ಲಿ ಸೆ.15ರಂದು ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯದ ಆವರಣದಲ್ಲಿ ಕರ್ನಾಟಕ ಸರಕಾರದ ವಿಧಾನ ಪರಿಷತ್ತಿನ ಸದಸ್ಯರಾಗಿ ಎರಡನೇ ಬಾರಿಗೆ ಆಯ್ಕೆಯಾದ ಐವನ್ ಡಿ’ಸೋಜರವರನ್ನು ಸನ್ಮಾನಿಸಿ ಅಭಿನಂದಿಸುವ ಕಾರ್ಯಕ್ರಮದಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು. ಉನ್ನತ ಹುದ್ದೆಯಾಗಿರುವ ಐಎಎಸ್, ಐಪಿಎಸ್ ಅಧಿಕಾರಿಗಳು ತಮ್ಮ ಅಧಿಕಾರಾವಾಧಿಯಲ್ಲಿ ತಮ್ಮ ಹುದ್ದೆಗೆ ನ್ಯಾಯವನ್ನು ಸಲ್ಲಿಸಲಾಗದಿರುವ ಪಕ್ಷದಲ್ಲಿ ಅವರು ರಾಜಕೀಯದಲ್ಲಿ ತೊಡಗಿಸಿಕೊಂಡು ಸಮಾಜ ಸೇವೆಯನ್ನು ಸಲ್ಲಿಸಿರುವ ಉದಾಹರಣೆಗಳಿವೆ.

ಭಾರತ ದೇಶವು ಜಾತ್ಯಾತೀಯತೆ ರಾಷ್ಟ್ರ. ಇಲ್ಲಿ ಸಂವಿಧಾನಕ್ಕೆ ಬೆಲೆಯಿದೆ. ಭಾರತದ ಪ್ರಧಾನಿ ಚೀಫ್ ಜಸ್ಟೀಸ್‌ರವರ ಮನೆಯಲ್ಲಿ ಜರಗಿದ ಗಣೇಶೋತ್ಸವಕ್ಕೆ ಹೋಗುತ್ತಾರೆಂದರೆ ಅಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಕ್ಕೆ ಬೆಲೆ ಎಲ್ಲಿದೆ ಎಂದ ಅವರು ಪ್ರಪಂಚದಲ್ಲಿ ಅತ್ತ್ಯುನ್ನತ ಪ್ರಜಾಪ್ರಭುತ್ವವಿರುವ ರಾಷ್ಟ್ರವೆಂದರೆ ಅದು ಭಾರತ. ಇಲ್ಲಿ ಪರಸ್ಪರ ನಂಬುಗೆಯ ಜೀವನದ ಮನೋಸ್ಥಿತಿ ಇರಬೇಕೇ ವಿನಹ ದ್ವೇಷದ ಮನೋಸ್ಥಿತಿ ಇರಕೂಡದು. ರಾಜಕೀಯ ಕ್ಷೇತ್ರದಲ್ಲಿ ಕ್ರೈಸ್ತ ಸಮುದಾಯದವರು ಕಾಣ ಸಿಗುವುದು ಬಹಳ ವಿರಳ. ತಾನಾಯಿತು, ತನ್ನ ಕೆಲಸ ಆಯಿತು ಎಂಬಂತೆ ಇದ್ದಾರೆ. ಯಾವಾಗ ತನ್ನ ಕಾಲ ಬುಡಕ್ಕೆ ನೀರು ಬರುತ್ತದೆಯೋ ಆವಾಗ ರಾಜಕೀಯ ವ್ಯಕ್ತಿಗಳತ್ತ ನೆನಪಾಗಿ ಜ್ಞಾನೋದಯವಾಗುವು ಇಂದಿನ ಪರಿಸ್ಥಿತಿ ಎಂದು ಅವರು ಹೇಳಿದರು.

ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯದ ಪ್ರಧಾನ ಧರ್ಮಗುರು ವಂ|ಜೆರಾಲ್ಡ್ ಡಿ’ಸೋಜ ಮಾತನಾಡಿ, ಎಂಎಲ್‌ಸಿ ಐವಾನ್ ಡಿ’ಸೋಜರವರನ್ನು ನಾನು ಹಲವು ವರ್ಷಗಳಿಂದ ಬಲ್ಲವನಾಗಿದ್ದೇನೆ. ರಾಜಕೀಯ ಕ್ಷೇತ್ರದಲ್ಲಿ ಅವರು ಮಾಡಿರುವ ಕಾರ್ಯಗಳು ಅಪಾರ. ಆದ್ದರಿಂದ ಅವರ ರಾಜಕೀಯ ಜೀವನವು ಫಲಪ್ರದವಾಗಿರಲಿ, ಸದಾ ಯಶಸ್ಸಿನಿಂದ ಕೂಡಿರಲಿ ಎಂದು ದೇವರಲ್ಲಿ ಸದಾ ಪ್ರಾರ್ಥಿಸುತ್ತೇನೆ ಎಂದರು.

ಕಥೋಲಿಕ್ ಸಭಾ ಪುತ್ತೂರು ವಲಯದ ಕಾರ್ಯದರ್ಶಿ ಅರುಣ್ ರೆಬೆಲ್ಲೋ, ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯದ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಮ್ಯಾಕ್ಸಿಂ ಲೋಬೊ, 21 ಆಯೋಗಗಳ ಸಂಚಾಲಕ ನವೀನ್ ಬ್ರ್ಯಾಗ್ಸ್, ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯದ ಕಥೋಲಿಕ್ ಸಭಾ ಘಟಕದ ಅಧ್ಯಕ್ಷ ಜೆರಾಲ್ಡ್ ಮಸ್ಕರೇನ್ಹಸ್, ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಥೋಲಿಕ್ ಸಭಾ ಪುತ್ತೂರು ವಲಯದ ಅಧ್ಯಕ್ಷೆ ಶ್ರೀಮತಿ ಲವೀನಾ ಪಿಂಟೊ ಸ್ವಾಗತಿಸಿ, ಕಥೋಲಿಕ್ ಸಭಾ ಬನ್ನೂರು ಘಟಕದ ಕಾರ್ಯದರ್ಶಿ ಲ್ಯಾನ್ಸಿ ಮಸ್ಕರೇನ್ಹಸ್ ವಂದಿಸಿದರು. ಕಥೋಲಿಕ್ ಸಭಾ ಬನ್ನೂರು ಘಟಕದ ರಾಜಕೀಯ ಸಂಚಾಲಕ ಡೆನ್ನಿಸ್ ಮಸ್ಕರೇನ್ಹಸ್, ನೆಲ್ಯಾಡಿ ಘಟಕದ ಅಧ್ಯಕ್ಷ ಪ್ರೀತಂ ಡಿ’ಸೋಜ, ಕಥೋಲಿಕ್ ಸಭಾ ಪುತ್ತೂರು ಘಟಕದ ಯುವ ಸಂಚಾಲಕ ವಿ.ಜೆ ಫೆರ್ನಾಂಡೀಸ್, ಕಥೋಲಿಕ್ ಸಭಾ ಪುತ್ತೂರು ವಲಯದ ಆಮ್ಚೊ ಸಂದೇಶ್ ಪ್ರತಿನಿಧಿ ಶ್ರೀಮತಿ ಗ್ರೇಸಿ ಗೊನ್ಸಾಲ್ವಿಸ್, ಉಪ್ಪಿನಂಗಡಿ ಐಸಿವೈಎಂ ಅಧ್ಯಕ್ಷರು ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಎಂಎಲ್‌ಸಿ ಐವಾನ್ ಡಿ’ಸೋಜರವರ ಸನ್ಮಾನ ಪತ್ರವನ್ನು ಕಥೋಲಿಕ್ ಸಭಾ ಪುತ್ತೂರು ವಲಯದ ನಿಕಟಪೂರ್ವ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನ್ಹಸ್‌ರವರು ವಾಚಿಸಿದರು. ಕಥೋಲಿಕ್ ಸಭಾ ಪುತ್ತೂರು ಘಟಕದ ಅಧ್ಯಕ್ಷ ಪ್ರೊ|ಝೇವಿಯರ್ ಡಿ’ಸೋಜರವರು ಕಾರ್ಯಕ್ರಮ ನಿರೂಪಿಸಿದರು. ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಂ ಬಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್, ಪುತ್ತೂರು ಕ್ರಿಶ್ಚಿಯನ್ ಯೂನಿಯನ್ ಗೌರವಾಧ್ಯಕ್ಷ ವಲೇರಿಯನ್ ಡಾಯಸ್, ಉಪ್ಪಿನಂಗಡಿ ಪಂಚಾಯತ್ ಸದಸ್ಯ ಯು.ಟಿ ತೌಸೀಫ್, ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತ ಘಟಕದ ಜಿಲ್ಲಾ ಉಪಾಧ್ಯಕ್ಷ ಜೋನ್ ಕೆನ್ಯೂಟ್ ಮಸ್ಕರೇನ್ಹಸ್ ಸಹಿತ ಹಲವರು ಉಪಸ್ಥಿತರಿದ್ದರು.

ನಾನು ನಿಮ್ಮೊಂದಿಗೆ ಸದಾ ಇದ್ದೇನೆ..
ಯಾವುದೇ ಸಮುದಾಯವಾಗಿರಲಿ, ಅಲ್ಲಿ ದ್ವೇಷದ ಮನೋಭಾವನೆ ಭಿತ್ತದೆ ಪ್ರೀತಿಯ ಮನೋಭಾವನೆ ಭಿತ್ತುವಂತಾದಾಗ ದೇಶವು ಸುಭೀಕ್ಷೆಯಾಗಿರುತ್ತದೆ. ವಿಧಾನಪರಿಷತ್‌ನಲ್ಲಿ ಸಮುದಾಯದ ಅಭಿವೃದ್ಧಿ ಬಗ್ಗೆ ಧ್ವನಿ ಎತ್ತುವ ಕೆಲಸ ಮಾಡಿದ್ದೇನೆ. ಇತ್ತೀಚೆಗೆ ಫಿಲೋಮಿನಾ ಕಾಲೇಜಿಗೆ ಅಟಾನಾಮಸ್ ಕಾಲೇಜು ಎಂದು ದೃಢೀಕರಣಗೊಳಿಸಲು ವಿಶ್ವವಿದ್ಯಾಲಯವು ಹಿಂದೇಟು ಹಾಕಿದ್ದಾಗ ನಾನೇ ಮುಂದೆ ನಿಂತು ಉಳಿದವರಿಗೆ ನೀವು ಕೊಡಲಿಲ್ಲವೇ, ಆವಾಗ ವಿಶ್ವವಿದ್ಯಾನಿಲಯವು ಮುಚ್ಚುವುದಿಲ್ಲವೇ?. ನೀವು ಕೊಡದಿದ್ದರೆ ನಾನು ಸಿಎಂ ಬಳಿ ಹೋಗುತ್ತೇನೆ. ಆದ್ದರಿಂದ ಫಿಲೋಮಿನಾ ಕಾಲೇಜಿಗೂ ಕೊಡಿ ಎಂದು ಧ್ವನಿ ಎತ್ತಿದ್ದರಿಂದಲೇ ಅನುಮೋದನೆಯಾಗಿದೆ. ಆದ್ದರಿಂದ ಈ ಐವಾನ್ ಡಿ’ಸೋಜ ಸಮುದಾಯದ ಪರವಾಗಿ ನಾನು ನಿಮ್ಮೊಂದಿಗೆ ಸದಾ ಇದ್ದೇನೆ.
-ಐವಾನ್ ಡಿ’ಸೋಜ, ವಿಧಾನ ಪರಿಷತ್ ಸದಸ್ಯ, ಕರ್ನಾಟಕ ರಾಜ್ಯ ಸರಕಾರ

ಅಭಿನಂದನೆ..
ಈ ಸಂದರ್ಭದಲ್ಲಿ ಕಥೋಲಿಕ್ ಸಭಾ ಪುತ್ತೂರು ಘಟಕ, ಬನ್ನೂರು ಘಟಕ, ಕಡಬ ಘಟಕ, ನೆಲ್ಯಾಡಿ ಘಟಕ, ಸುಳ್ಯ ಘಟಕ, ಉಪ್ಪಿನಂಗಡಿ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು, ಉಪ್ಪಿನಂಗಡಿ ಕಥೋಲಿಕ್ ಕೋ-ಆಪರೇಟಿವ್ ಬ್ಯಾಂಕ್, ಅನುಗ್ರಹ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನಿರ್ದೇಶಕರು ಎಂಎಲ್‌ಸಿ ಐವಾನ್ ಡಿ’ಸೋಜರವರಿಗೆ ಹೂಗುಚ್ಛ ನೀಡಿ ಅಭಿನಂದಿಸಿದರು.

LEAVE A REPLY

Please enter your comment!
Please enter your name here