ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಮಹಾಸಭೆ

0


48 ವರ್ಷದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಸದಸ್ಯರಿಗೆ ಶೇ.17 ಡಿವಿಡೆಂಡ್ ಘೋಷಣೆ

ಪುತ್ತೂರು: ಪುತ್ತೂರು ಶ್ರೀ ರಾಧಾಕೃಷ್ಣ ಮಂದಿರದ ರಸ್ತೆ ಬಳಿ ಪ್ರಧಾನ ಕಚೇರಿ ಮತ್ತು ಶಾಖೆಯನ್ನು ಹೊಂದಿದ್ದು, ದರ್ಬೆ, ಉಪ್ಪಿನಂಗಡಿ, ಕಾಣಿಯೂರಿನಲ್ಲಿ ಶಾಖೆಗಳನ್ನು ಜೊತೆಗೆ ನೆಹರುನಗರದಲ್ಲಿ ಪಡಿತರ ವಿತರಣಾ ಕೇಂದ್ರ ಹೊಂದಿಕೊಂಡು ಸುಮಾರು 3028 ಸದಸ್ಯರನ್ನು ಒಳಗೊಂಡಿರುವ ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘವು 2023-24ನೇ ವರದಿ ಸಾಲಿನಲ್ಲಿ ಉತ್ತಮ ವ್ಯವಹಾರ ಮಾಡಿಕೊಂಡು ರೂ. 55,78,661.67 ನಿವ್ವಳ ಲಾಭ ಪಡೆದಿದೆ. ಬಂದಿರುವ ಲಾಭವನ್ನು ವಿವಿಧ ನಿಧಿಗಳಿಗೆ ಹಂಚಿ ಸದಸ್ಯರಿಗೆ ಶೇ. 17 ಡಿವಿಡೆಂಡ್ ನೀಡುವುದಾಗಿ ಸಂಘದ ಅಧ್ಯಕ್ಷೆ ಗೌರಿ ಎಚ್ ಅವರು ಘೋಷಣೆ ಮಾಡಿದ್ದಾರೆ.


ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಸೆ.15ರಂದು ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘವು ಈಗಾಗಲೇ ಸದಸ್ಯರ ಪೂರ್ಣ ಸಹಕಾರದಿಂದ ಲಾಭ ಪಡೆದಿದೆ. ಕಳೆದ ಸಲಕ್ಕಿಂತ ಸುಮಾರು 12ಲಕ್ಷ ಹೆಚ್ಚು ಲಾಭ ಬಂದಿದೆ. ಕಾಣಿಯೂರು ಶಾಖೆಗೆ ಸುಮಾರು ರೂ. 18ಲಕ್ಷ ಖರ್ಚು ಮಾಡಿದ್ದರೂ ಉತ್ತಮ ಲಾಭ ಬಂದಿದೆ.


ಮುಂದಿನ ದಿನ ಸದಸ್ಯ ಸಂಖ್ಯೆಯನ್ನು 3,500ಕ್ಕೆ ಏರಿಸುವ ಗುರಿಯನ್ನು ಹೊಂದಿದ್ದೇವೆ. ಹೊಸ ಸದಸ್ಯತ್ವ ಮತ್ತು ಸಾಲ ನೀಡಿಕೆಯಿಂದ ಪಾಲು ಬಂಡವಾಳವನ್ನು ರೂ. 86 ಲಕ್ಷದಿಂದ ರೂ. 92ಲಕ್ಷಕ್ಕೆ ವೃದ್ಧಿಸಿಕೊಳ್ಳುವುದು. ಠೇವಣಿಯನ್ನು ರೂ. 15ಕೋಟಿಗೆ ಹೆಚ್ಚಿಸುವ ಮೂಲಕ ಸಾಲ ನೀಡಿಕೆಯನ್ನು ರೂ. 13 ಕೋಟಿಗೆ ಹೆಚ್ಚಿಸುವುದು. ಮಹಿಳಾ ಸ್ವಸಹಾಯ ಗುಂಪುಗಳ ಒಕ್ಕೂಟ ರಚಿಸಿ, ನಿರ್ವಹಣೆ ಮತ್ತು ತರಬೇತಿ ಕಾರ್ಯಕ್ರಮ ಮಾಡುವುದು. ಹೊಸ ಸ್ವಸಹಾಯ ಗುಂಪುಗಳ ರಚನೆಗೆ ಪ್ರೋತ್ಸಾಹ ಮತ್ತು ಸಾಲ ನೀಡುವುದು. ಸದಸ್ಯರಿಗೆ ಸ್ವ ಉದ್ಯೋಗಕ್ಕೆ ಉತ್ತೇಜನ ನಿಡುವ ಬಗ್ಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವುದು. ವ್ಯವಹಾರಗಳನ್ನು ಪರಿಶೀಲಿಸಿ ಮುಂದೆ ಹೊಸ ಶಾಖೆಯನ್ನು ತೆರೆಯುವ ಚಿಂತನೆಯು ಇದೆ ಎಂದ ಅವರು, ಸಂಘದ ವ್ಯವಹಾರ ಹಾಗೂ ಲೆಕ್ಕಪತ್ರಗಳ ಯೋಗ್ಯತೆ ಮೇರೆಗೆ ಸಂಘವು ಸತತವಾಗಿ ಏ ಶ್ರೇಣಿಯಲ್ಲಿದೆ. ಇದೇ ಹಿನ್ನೆಲೆಯಲ್ಲಿ ಸತತ 5ನೇ ಭಾರಿಯು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ಸಾಧನಾ ಪ್ರಶಸ್ತಿಯನ್ನು ಪಡೆದು ಕೊಂಡಿದೆ ಎಂದು ಹೇಳಲು ಹೆಮ್ಮೆಯಾಗಿದೆ ಎಂದರು.


ಮಹಾಸಭೆಯ ಕಾರ್ಯಕ್ರಮವನ್ನು ಸಂಘದ ಹಿರಿಯ ನಿರ್ದೇಶಕಿ ಶಶಿಕಲಾರವರು ಉದ್ಘಾಟಿಸಿದರು. ಸಂಘದ ಕಿರಿಯ ಗುಮಸ್ತೆ ಸಾವಿತ್ರಿ ಮಹಾಸಭೆ ತಿಳುವಳಿಕೆ ಪತ್ರ ಮಂಡಿಸಿದರು. ಸಂಘದ ಶಾಖಾ ವ್ಯವಸ್ಥಾಪಕಿ ಚೈತ್ರ ಕೆ.ಆರ್ 2022-23ನೇ ಸಾಲಿನ ಮಹಾಸಭೆ ನಡವಳಿಕೆಗಳನ್ನು ಮಂಡಿಸಿದರು. 2023-24ನೇ ವಾರ್ಷಿಕ ವರದಿಯನ್ನು ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿದ್ಯಾ ಎಸ್ ಮಂಡಿಸಿದರು. ಗುಮಾಸ್ತೆ ಸರಿತಾ ಕೆ.ಪಿ 2023-24ನೇ ಸಾಲಿನ ವ್ಯಾಪಾರ ವಹಿವಾಟಿನ ತಖ್ತೆಯನ್ನು ಮತ್ತು ಲಾಭ ನಷ್ಟದ ತಖ್ತೆಯನ್ನು ಮಂಡಿಸಿದರು. ಶಾಖಾ ವ್ಯವಸ್ಥಾಪಕಿ ಚೈತ್ರ ಕೆ.ಆರ್, ಅಶ್ವಿನಿ ಕೆ, ನಿತಿನ್ ವಿವಿಧ ವರದಿಗಳನ್ನು ಮಂಡಿಸಿದರು.


ಬಡ ವಿದ್ಯಾರ್ಥಿಗಳಿಗೆ ಧನ ಸಹಾಯ, ಉಪಕನಾ ನಿಧಿ ವಿತರಣೆ:
ಸಂಘದ ವಿವಿಧ ನಿಧಿಗಳಿಂದ ಧನಸಹಾಯವನ್ನು ಸುಮಾರು 12 ಮಂದಿ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಸಾರ್ವಜನಿಕ ಉಪಕಾರ ನಿಧಿಯಿಂದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಸಹಿತ 14 ಮಂದಿ ವಿದ್ಯಾರ್ಥಿಗಳಿಗೆ ಉಪಕಾರ ನಿಧಿ ವಿತರಣೆ ಮಾಡಲಾಯಿತು. ಸಂಘದ ನಿರ್ದೇಶಕರಾದ ಮೋಹಿನಿ ಪಿ ನಾಯ್ಕ ಮತ್ತು ಯಶೋಧ ಅವರು ಕಾರ್ಯಕ್ರಮ ನಿರ್ವಹಿಸಿದರು. ಇದೇ ಸಂದರ್ಭ 7 ಮಂದಿಗೆ ಮರಣೋತ್ತರ ನಿಧಿ ತಲಾ ರೂ. 5ಸಾವಿರ ವಿತರಣೆ ಮಾಡಲಾಯಿತು. ನಿರ್ದೇಶಕಿ ಇಂದಿರಾ ಪಿ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

ಮಹಿಳಾ ಸಾಧಕಿಯರಿಗೆ ಸನ್ಮಾನ:
5 ಮಂದಿ ಸಾಧಕ ಮಹಿಳೆಯರಿಗೆ ಸನ್ಮಾನ ಮಾಡಲಾಯಿತು. ಸ್ವರ್ಣೋದ್ಯಮ ಮುಳಿಯ ಕೇಶವಪ್ರಸಾದ್ ಮತ್ತು ಕೃಷ್ಣವೇಣಿ ಪ್ರಸಾದ್ ದಂಪತಿ ಪುತ್ರಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಆಪ್ತಚಂದ್ರಮತಿ, ದೆಹಲಿಯಲ್ಲಿ ನಡೆದ ಆರ್ ಡಿ ಕ್ಯಾಂಪ್ ನಲ್ಲಿ ಹಲವು ಕ್ಷೇತ್ರದಲ್ಲಿ ಭಾಗವಹಿಸಿದ ವಿವೇಕಾನಂದ ಮಮತಾ ದಂಪತಿ ಪುತ್ರಿ, ಕುಟ್ರುಪಾಡಿ ನಿವಾಸಿ ರಿಕ್ಷಾ ಚಾಲಕಿಯಾಗಿರುವ ಹೇಮಲತಾ, ಅರೆಸೇನಾ ಪಡೆಯ ಶಕುಂತಳಾ, ಪ್ರಗತಿಪರ ಕೃಷಿಕರಾಗಿ ಹಲವು ಸಂಶೋಧನೆ ನಡೆಸಿದ ಆಶಾ ರೈ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ನಿರ್ದೇಶಕರಾದ ಮೋಹಿನಿ ದಿವಾಕರ, ಜಯಶ್ರೀ ಎಸ್ ಶೆಟ್ಟಿ, ಉಷಾ ಮುಳಿಯ, ಮೋಹಿನಿ ಪಿ ನಾಯ್ಕ, ಅಪರ್ಣಾ ಸನ್ಮಾನಿತರನ್ನು ಪರಿಚಯಿಸಿದರು. ಇಂತಹ ಸನ್ಮಾನ ಕಾರ್ಯಕ್ರಮವು ಮುಂದಿನ ಸಾಧಕರಿಗೆ ಪ್ರೇರಣೆ ನೀಡಲಿದೆ. ಸಮಾಜದ ಸಂಘಟನೆಯ ಮೂಲವೇ ಮಹಿಳೆ ಎಂದು ಕಷ್ಣವೇಣಿ ಮುಳಿಯ ಹೇಳಿದರು. ಸನ್ಮಾನಿತರು ಅಭಿಪ್ರಾಯ ಹಂಚಿಕೊಂಡರು.


ಕಾಣಿಯೂರು ಶಾಖಾ ಸಲಹಾ ಸಮಿತಿ ಸದಸ್ಯರಿಗೆ ಸನ್ಮಾನ:
ಅತ್ಯಲ್ಪ ಸಮಯದಲ್ಲಿ ಉತ್ತಮ ವ್ಯವಹಾರ ನಡೆಸುತ್ತಿರುವ ಕಾಣಿಯೂರು ಶಾಖೆಯ ಸಲಹಾ ಸಮಿತಿ ಅದ್ಯಕ್ಷೆ ಮೋಹಿನಿ ದಿವಾಕರ್, ಸದಸ್ಯರಾದ ಸುಪ್ರೀತಾ, ಇಂದಿರಾ ಬಿ.ಕೆ, ಆಶಾ ರೈ ಕೆ, ಪುಷ್ಪಾವತಿ, ತೇಜಸ್ವಿನಿ, ಗೌರಿ, ಮಮತಾ ಎಂ, ಪ್ರಮೀಳಾ ಜನಾರ್ಧನ ಆಚಾರ್ಯ, ಶುಭದಾ ಎಸ್ ರೈ, ಶುಭಕಿರಣ ಪಿ, ಸುಮನ ಎಂ, ಉಮೇಶ್ವರಿ ಅಗಳಿ ಅವರನ್ನು ಸನ್ಮಾನಿಸಲಾಯಿತು. ನಿರ್ದೇಶಕಿ ಉಷಾ ಮುಳಿಯ ಕಾರ್ಯಕ್ರಮ ನಿರ್ವಹಿಸಿದರು. ಪಿಗ್ಮಿ ಸಂಗ್ರಹಕಕರಾದ ಪ್ರಧಾನ ಕಚೇರಿಯ, ಹೇಮಲತಾ, ದರ್ಬೆ ಶಾಖೆಯ ಗೋಪಾಲಕೃಷ್ಣ ರಾವ್, ಉಪ್ಪಿನಂಗಡಿ ಶಾಖೆಯ ಪುಷ್ಪಕರ, ಕಾಣಿಯೂರು ಶಾಖೆಯ ಪದ್ಮಾವತಿ ಅವರನ್ನು ಗೌರವಿಸಲಾಯಿತು. ಸಂಘಕ್ಕೆ ಸರಾಫರಾಗಿರುವ ಲಕ್ಷ್ಮೀ ನಾರಾಯಣ ಆಚಾರ್ಯ, ಆನಂದ ಆಚಾರ್ಯ, ಶಶಿಕಲಾ ಆಚಾರ್ಯ, ಪುರುಷೋತ್ತಮ ಆಚಾರ್ಯ ಅವರನ್ನು ಗೌರವಿಸಲಾಯಿತು. ನಿರ್ದೇಶಕಿ ವಿಜಯಲಕ್ಷ್ಮೀ ಕಾರ್ಯಕ್ರಮ ನಿರ್ವಹಿಸಿದರು.


ಸಕ್ರೀಯ ಸದಸ್ಯರ ಗುರತಿಸುವಿಕೆ
ಸಕ್ರೀಯ ಸದಸ್ಯರಾಗಿ ಸಂಸ್ಥೆಯ ವ್ಯವಹಾರದಲ್ಲಿ ಭಾಗವಹಿಸಿದ ಸಾಲಗಾರ ಕ್ಷೇತ್ರದಲ್ಲಿ ರವಿಕಲಾ ಬಿ, ಮಾರಾಟ ವಿಭಾಗದಲ್ಲಿ ಸದಸ್ಯೆ ಶೇವಿರೆ ನಿವಾಸಿ ಲಲಿತಾ ಅವರನ್ನು ಗೌರವಿಸಲಾಯಿತು. ಸಂಘದ ನಿರ್ದೇಶಕಿ ಜಯಶ್ರೀ ಎಸ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.


ಹೊಸ ಸ್ವಸಹಾಯ ಸಂಘದ ಸದಸ್ಯರಿಗೆ ಪುಸ್ತಕ ಹಸ್ತಾಂತರ:
ನೂತನವಾಗಿ ಉಪ್ಪಿನಂಗಡಿಯಲ್ಲಿ ಸಹಕಾರ ಜ್ಯೋತಿ ಮಹಿಳಾ ಸ್ವಸಹಾಯ ಸಂಘ ಆರಂಭಗೊಂಡಿದ್ದು, ಸಂಘದ ಸದಸ್ಯರಾದ ಪ್ರಮೀಳಾ ಹರೀಶ್, ಮಾಲತಿ ಸಹಿತ ಇತರ ಸದಸ್ಯರಿಗೆ ಸ್ವ ಸಹಾಯ ಸಂಘದ ಪುಸ್ತಕವನ್ನು ಹಸ್ತಾಂತರಿಸಲಾಯಿತು. ನಿರ್ದೇಶಕಿ ವತ್ಸಲಾ ರಾಜ್ಞಿ ಕಾರ್ಯಕ್ರಮ ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ಅದೃಷ್ಟ ಮಹಿಳೆಯಾಗಿ ಜಮೀಳಾ ಅವರು ಆಯ್ಕೆಯಾದರು. ಹಿರಿಯ ಸದಸ್ಯೆಯಾಗಿ ಶಾರದಾ ಆಯ್ಕೆಯಾದರು. ಅವರನ್ನು ಸಂಘದಿಂದ ಗೌರವಿಸಲಾಯಿತು. ಸಹಕಾರಿ ಸಂಘದ ಹಿರಿಯ ಸಿಬ್ಬಂದಿ ಸಾವಿತ್ರಿ, ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ವಿದ್ಯಾ ಎಸ್, ಶಾಖಾ ವ್ಯವಸ್ಥಾಪಕರಾದ ಚೈತ್ರ ಕೆ ಆರ್, ಅಶ್ವಿನಿ ಕೆ, ಗುಮಸ್ತರಾದ ಸರಿತಾ ಕೆ ಟಿ, ನಿತಿನ್, ಎಟೆಂಡರ್ ಅಟೆಂಡರ್ ಧನುಷ್, ರಿತೇಶ್ ಕೆ, ರೋಹಿಣಿ ಅವರನ್ನು ಗೌರವಿಸಲಾಯಿತು. ಸಂಘದ ಉಪಾಧ್ಯಕ್ಷೆ ಉಮಾ ಡಿ ಪ್ರಸನ್ನ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಉಪಾಧ್ಯಕ್ಷೆ ಉಮಾ ಡಿ ಪ್ರಸನ್ನ, ನಿರ್ದೇಶಕರಾದ ಮೋಹಿನಿ ದಿವಾಕರ್ ಪ್ರೇಮಲತಾ ರಾವ್ ಟಿ, ಶಶಿಕಲಾ, ವತ್ಸಲಾ ರಾಜ್ಞೀ, ಮೋಹಿನಿ ಪಿ ನಾಯ್ಕ, ಉಷಾ ಮುಳಿಯ, ಯಶೋಧ, ಜಯಶ್ರೀ ಎಸ್ ಶೆಟ್ಟಿ, ವಿಜಯಲಕ್ಷ್ಮೀ, ಇಂದಿರಾ ಪಿ ಆಚಾರ್ಯ, ಅರ್ಪಣಾ ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಸಿಬ್ಬಂದಿಗಳು ಪ್ರಾರ್ಥಿಸಿ, ನಿರ್ದೇಶಕಿ ಉಷಾ ಮುಳಿಯ ಸ್ವಾಗತಿಸಿದರು. ಪ್ರೇಮಲತಾ ರಾವ್ ವಂದಿಸಿದರು.


ಶೇ.17 ಡಿವಿಡೆಂಡ್
ಸಂಘ ಆರಂಭವಾಗಿದಿನಿಂದ ಸುಮಾರು 48 ವರ್ಷದಲ್ಲಿ ಕೊಡದಷ್ಟು ಡಿವಿಡೆಂಟ್ ಅನ್ನು ಈ ವರ್ಷ ಪ್ರಥಮ ಬಾರಿಗೆ ನೀಡುತ್ತಿದ್ದೇವೆ. ಶೇ.17 ಡಿವಿಡೆಂಟ್ ನೀಡುವುದಾಗಿ ಘೋಷಣೆ ಮಾಡಿದ್ದೇವೆ. ಅದೇ ರೀತಿ ಹಲವು ಯೋಜನೆಗಳನ್ನು ಮುಂದಿಟ್ಟಿದ್ದೇವೆ. ಸಂಘದ ಈ ಲಾಭ ಮತ್ತು ಅಭಿವೃದ್ದಿಗೆ ಸದಸ್ಯರ ಸಹಕಾರವೇ ಕಾರಣ ಎಂದು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಗೌರಿ ಹೆಚ್ ಹೇಳಿದರು.

LEAVE A REPLY

Please enter your comment!
Please enter your name here