ಕಾಣಿಯೂರು: ಬೆಳಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಣಿಯೂರು, ಮಾದೋಡಿ, ಪೆರುವಾಜೆ, ಬೆಳ್ಳಾರೆ ಸಂಪರ್ಕ ರಸ್ತೆಯಲ್ಲಿ , ಪ್ರಗತಿ ಶಾಲೆಯ ಬಳಿ ಸೇತುವೆ ಕೆಳಗಡೆ ಒಂದು ಕಡೆ ಹೊಳೆಯ ಬದಿ ಕುಸಿತವಾಗಿ ಅದರ ಭಯ, ಇನ್ನೊಂದು ಬದಿಯಲ್ಲಿ ಪೊದರು, ಗಿಡಗಳು ತುಂಬಿ ಒಂದು ಕಡೆಯಿಂದ ಬರುವ ವಾಹನಗಳು ಇನ್ನೊಂದು ಕಡೆಗೆ ಕಾಣಿಸದೆ ಅಪಾಯದ ಪರಿಸ್ಥಿತಿ ನಿರ್ಮಾಣವಾಗಿ ವಾಹನ ಸಂಚಾರ, ಪಾದಚಾರಿಗಳಿಗೆ ತೊಂದರೆ ಅಪಘಾತಗಳು ಸಂಭವಿಸುತ್ತಿದನ್ನು ಗಮನಿಸಿ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದ ಪೊದರು, ಗಿಡಗಳ ತೆರವು ಮತ್ತು ರಸ್ತೆಯ ಬದಿಯಲ್ಲಿ ಇದ್ದ ಮರದ ತುಂಡುಗಳನ್ನು ಬದಿಗೆ ಸರಿಸಿ ವಾಹನಗಳು ಸರಾಗವಾಗಿ ಹೋಗಲು ಅನುಕೂಲವಾಗುವಂತೆ ಮಾಡಿದರು. ಈ ಎಲ್ಲ ಕಾರ್ಯಗಳನ್ನು ಬೆಳಂದೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜಯಂತ ಅಬೀರ, ದಿನೇಶ್ ಕಾನಾವು, ತೇಜಸ್ ಕಾನಾವು, ಅಶೋಕ್ ಬಳ್ಪ (ರೈಲ್ವೇ ) ಇವರು ತಮ್ಮ ಸ್ವಂತ ಖರ್ಚಿನಲ್ಲಿ ಪೊದೆಗಳು, ಗಿಡಗಳ ತೆರವು ಕಾರ್ಯ ನಡೆಸಿದರು.
Home ಇತ್ತೀಚಿನ ಸುದ್ದಿಗಳು ಕಾಣಿಯೂರು: ಸ್ವಂತ ಖರ್ಚಿನಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ತುಂಬಿದ್ದ ಪೊದರು, ಗಿಡಗಳ ತೆರವು ಕಾರ್ಯ