ಉಪ್ಪಿನಂಗಡಿ: ಸ್ವಚ್ಛತಾ ಅಭಿಯಾನ

0

ಉಪ್ಪಿನಂಗಡಿ: ಭಾರತ ಸರಕಾರದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಲಶಕ್ತಿ ಸಚಿವಾಲಯದ ನಿರ್ದೇಶನದನ್ವಯ ಕರ್ನಾಟಕ ಸರಕಾರದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿರುವ ಸೆ.17 ರಿಂದ ಅ.2 ರವರೆಗಿನ ಬೃಹತ್ ಸ್ವಚ್ಚತೆಯ ಅಭಿಯಾನವನ್ನು ಮಂಗಳವಾರದಂದು ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವಠಾರದಲ್ಲಿ ಉದ್ಟಾಟಿಸಲಾಯಿತು.


ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯ್ಕ್ ಮಾತನಾಡಿ, ಪ್ರಕೃತಿಯನ್ನು ಸ್ವಚ್ಚವಾಗಿರಿಸುವುದೇ ಭಗವಂತನಿಗೆ ಪ್ರಿಯವಾದ ಕಾರ್ಯವಾಗಿರುವುದರಿಂದ ಸ್ವಚ್ಚತಾ ಅಭಿಯಾನ ಬದುಕಿನ ಕಟ್ಟ ಕಡೆಯ ದಿನದವರೆಗೂ ನಡೆಯಬೇಕೆಂದರು.


ದೇವಳದ ವ್ಯವಸ್ಥಾಪನಾ ಸಮಿತಿಯ ಹಿರಿಯ ಸದಸ್ಯ ಕೃಷ್ಣ ರಾವ್ ಅರ್ತಿಲ ಮಾತನಾಡಿ, ದೇಶದಲ್ಲಿ ಸ್ವಾತಂತ್ರ್ಯದ ಸವಿಯನ್ನು ಅನುಭವಿಸುತ್ತಿರುವ ನಾವುಗಳು ಸ್ವಚ್ಚತೆಯ ವಿಚಾರದಲ್ಲಿ ಬದ್ದತೆಯನ್ನು ಹೊಂದದೇ ಇರುವುದು ವಿಷಾದನೀಯವೆಂದರು.


ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತಾ, ಉಪಾಧ್ಯಕ್ಷೆ ವಿದ್ಯಾಲಕ್ಷ್ಮಿ ಪ್ರಭು , ಸದಸ್ಯರಾದ ಧನಂಜಯ ನಟ್ಟಿಬೈಲು, ಉಷಾ ಮುಳಿಯ, ಉಪ್ಪಿನಂಗಡಿ ಗ್ರಾ.ಪಂ. ಪಂಚಾಯತ್ ಪಿಡಿಒ ವಿಲ್ಪ್ರೆಡ್ ಲಾರೆನ್ಸ್ ರೋಡ್ರಿಗಸ್, ಕಾರ್ಯದರ್ಶಿ ಗೀತಾ ಬಿ., 34 ನೆಕ್ಕಿಲಾಡಿ ಗ್ರಾ.ಪಂ. ಪಿಡಿಒ ಸತೀಶ್ ಬಂಗೇರ, ಗ್ರಾ.ಪಂ. ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ದೇವಾಲಯದ ಪರಿಸರದಿಂದ ಪ್ರಾರಂಭಗೊಂಡ ಸ್ವಚ್ಚತಾ ಕಾರ್ಯ ಉಪ್ಪಿನಂಗಡಿಯ ಬಸ್ ನಿಲ್ದಾಣದ ಪರಿಸರದವರೆಗೆ ನಡೆಯಿತು.

LEAVE A REPLY

Please enter your comment!
Please enter your name here