ಅಡುಗೆ ಉಪಕರಣ ಮಾರಾಟ ಮಳಿಗೆ ಯುಕೆ ಇಂಟೀರಿಯಾ “ಫೇಬರ್ ” ಸ್ಟೋರ್ ಉದ್ಘಾಟನೆ…

0

ಪುತ್ತೂರು : ಮೈಕ್ರೋ ಓವೆನ್ ,ಸ್ಟೋವ್ , ಚಿಮ್ನಿ , ವಾಟರ್ ಪ್ಯೂರಿಫೈಯರ್ ಮತ್ತು ಗೀಸರ್ ಹಾಗೂ ಡಿಶ್ ವಾಷರ್ ಮೊದಲಾದ ಅಡುಗೆ ಉಪಕರಣಗಳ ತಯಾರಿಕೆಯಲ್ಲಿ ಪ್ರಸಿದ್ಧಿ ಪಡೆದುಕೊಂಡಿರುವ , ಮೂಲತಃ ಇಟೆಲಿ ಕಂಪನಿ, ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿರುವಂತಹ ಫೇಬರ್ ಇದರ ಮಳಿಗೆ ಯುಕೆ ಇಂಟೀರಿಯ ಇಲ್ಲಿನ ಬೊಳುವಾರು ಮುಖ್ಯರಸ್ತೆ , ಮಿನಾರ್ ಸಂಕೀರ್ಣದಲ್ಲಿ ಸೆ.19 ರಂದು ಶುಭಾರಂಭಗೊಂಡಿತು.

ನೂತನ ಮಳಿಗೆಯ ಉದ್ಘಾಟನೆಯನ್ನು ಸ್ಪೀಕರ್ ಯುಟಿ ಖಾದರ್ ಅವರು ಉದ್ಘಾಟಿಸಿ, ಸಂಸ್ಥೆಯ ಶ್ರೇಯೋಭಿವೃದ್ದಿಗೆ ಹಾರೈಸಿದರು.ಒಲೆ ಮುಂಡೋವು ಉಸ್ತಾದ್ ಮಹಮುದ್ ಫೈಝಿ ದುವಾಃ ಆಶೀರ್ವಚನ ನೆರವೇರಿಸಿದರು.

ಫೇಬರ್ ಇಂಡಿಯಾ ಲಿ ಇದರ ಡಿಜಿಎಂ (ಸೇಲ್ಸ್) ರಾಜೇಶ್ ಚೌಡ ಫೇಬರ್ ಉತ್ಪನ್ನಗಳ ಬಗ್ಗೆ ವಿವರಣೆ ನೀಡಿದರು.ಮುಖ್ಯ ಅತಿಥಿಗಳಾಗಿ ಎಪಿಎಂಸಿ ಮಾಜಿ ಅಧ್ಯಕ್ಷ ಬುಡಿಯಾರ್ ರಾಧಾಕೃಷ್ಣ ರೈ, ನಗರಸಭಾ ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ , ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಅಝಾದ್ ,ಹಾಗೂ ತಾಲೂಕು ಪಂಚಾಯತ್ ಇ.ಓ ನವೀನ್ ಭಂಡಾರಿ , ಮಾಡಾವು ಸಂತೋಷ್ ಗ್ರೂಪ್ಸ್ ಮಾಲಕ ಹುಸೈನಾರ್ ಸಂತೋಷ್ ,ಉಮ್ಮರ್ ಯು.ಕೆ ಕೋಡಿಂಬಾಡಿ ಹಾಗೂ ಅಬ್ದುಲ್ ಹಮೀದ್ ಬನ್ನೂರು ಸಹಿತ ಹಲವರು ಉಪಸ್ಥಿತರಿದ್ದರು.


ಆರ್ಯಾಪು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಮಹಮ್ಮದ್ ಆಲಿ ಕಾರ್ಯಕ್ರಮ ನಿರ್ವಹಿಸಿದರು. ಯುಕೆ ಇಂಟೀರಿಯಾ ಫೆಬರ್ ಸ್ಟೋರ್ ಇದರ ಪಾಲುದಾರ ಹನೀಶ್ ಮಾಡಾವು ,ಶಹಬಾಝ್ ಯು.ಕೆ ಹಾಗೂ ರುಶಿಯಲ್ ಅತಿಥಿಗಳನ್ನು ಸ್ವಾಗತಿಸಿ ,ವಂದಿಸಿ , ಸಹಕಾರ ಕೋರಿದರು.

40 ಪರ್ಸೆಂಟ್ ವರೆಗೆ ರಿಯಾಯಿತಿ…!!!
ಶುಭಾರಂಭದ ಸಲುವಾಗಿ ಹೆಸರಾಂತ ಫೇಬರ್ ಇದರ ಹಲವು ಬಗೆಯ ಅಡುಗೆ ಮನೆಗೆ ಸಂಬಂಧಿಸಿರುವ ಉತ್ಪನ್ನಗಳ ಮೇಲೆ ಶೇಕಡ 10 ರಿಂದ ಶೇಕಡ 40 ರ ತನಕ ರಿಯಾಯಿತಿಯಿದ್ದು , ಫೇಬರ್ ಉತ್ಪನ್ನ ಪ್ರಿಯರು ಈ ಕೊಡುಗೆಯ ಲಾಭವನ್ನು ಪಡೆಯುವಂತೆ ಕೋರಲಾಗಿದೆ.
ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9945211944 ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here