14ರ ವಯೋಮಾನದ ಬಾಲಕಿಯರ ವಲಯ ಮಟ್ಟದ ಖೋ-ಖೋ ಪಂದ್ಯಾಟ – ವಿವೇಕಾನಂದ ಆ.ಮಾ.ಶಾಲೆಯ ಬಾಲಕಿಯರ ತಂಡ ಪ್ರಥಮ 

0

ಪುತ್ತೂರು: ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಮತ್ತು ವಿವೇಕಾನಂದ ಕನ್ನಡ ಮಾಧ್ಯಮ  ಶಾಲೆ ತೆಂಕಿಲ ಪುತ್ತೂರು ಇವುಗಳ ಜಂಟಿ ಆಶ್ರಯದಲ್ಲಿ ತೆಂಕಿಲ ವಿವೇಕಾನಂದ ವಿದ್ಯಾ ಸಂಸ್ಥೆಗಳ ಕ್ರೀಡಾಂಗಣದಲ್ಲಿ ನಡೆದ ಪುತ್ತೂರು ನಗರ ವಲಯ ಮಟ್ಟದ ಖೋ-ಖೋ ಪಂದ್ಯಾಟದಲ್ಲಿ 14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಬಾಲಕಿಯರ ತಂಡ ಪ್ರಥಮ ಸ್ಥಾನಗಳಿಸಿ ತಾಲೂಕು ಮಟ್ಟದ ಪಂದ್ಯಾಕೂಟದಲ್ಲಿ ಭಾಗವಹಿಸಿರುತ್ತಾರೆ.

ಈ ತಂಡದಲ್ಲಿ ಪೂರ್ವಿ(ಪುರುಷೋತ್ತಮ ಮತ್ತು ಪ್ರಮೀಳ ದಂಪತಿಗಳ ಪುತ್ರಿ), ವಂಶಿತಾ. ಎನ್( ವಸಂತ ಗೌಡ ಮತ್ತು ಸುಜಾತ ದಂಪತಿ ಪುತ್ರಿ), ಆತ್ಮಿ ಕೆ. ಎಲ್ (ಲಕ್ಷ್ಮಣ ಗೌಡ ಮತ್ತು ಹೇಮಲತಾ ದಂಪತಿ ಪುತ್ರಿ), ಸಾನ್ವಿ ಆನಂದ್(ಆನಂದ್ ಮತ್ತು ವಾಣಿಶ್ರೀ ದಂಪತಿ‌ ಪುತ್ರಿ),ಚರೀಷ್ಮಾ ಪಿ. ಡಿ. (ದರ್ಣಪ್ಪ ಮತ್ತು ಮಮತಾ ದಂಪತಿ ಪುತ್ರಿ),  ಮಾನ್ಯ. ಪಿ. ಎಸ್  ( ಸತೀಶ ಮತ್ತು ರಂಜಿನಿ ದಂಪತಿ ಪುತ್ರಿ),  ದಿಯಾ.ಜೆ( ಜಯರಾಮ  ಮತ್ತು ಪ್ರೀಯ ದಂಪತಿ ಪುತ್ರಿ), ಸಾನ್ವಿ.ಆರ್. ಕೆ ( ರೂಪೇಶ್ ಮತ್ತು ಜ್ಯೋತಿ ದಂಪತಿ ಪುತ್ರಿ),  ಅದಿತಿ. ಎಸ್( ಅಶೋಕ್ ಕುಮಾರ್ ಮತ್ತು ಅಶ್ವಿನಿ ದಂಪತಿ ಪುತ್ರಿ),  ತನ್ವಿತಾ. ಕೆ( ಭಾಸ್ಕರ ಗೌಡ ಮತ್ತು ಸವಿತ ಕೆ ದಂಪತಿ ಪುತ್ರಿ),  ವಿತಿಕ .ಪಿ .ರೈ (ಪ್ರಜ್ವಲ್  ರೈ ಮತ್ತು ಪದ್ಮಿನಿ  ದಂಪತಿ ಪುತ್ರಿ), ಲಿಖಿತ. ಜೆ  ( ಜೀವನ್ ಕುಮಾರ್ ಮತ್ತು ಶೃತಿ ದಂಪತಿ ಪುತ್ರಿ), ಕೆ.ಮಾನ್ವಿ ರೈ ( ಕೆ ಮೋಹನ್ ರೈ ಮತ್ತು ಮೈನಾ ದಂಪತಿ ಪುತ್ರಿ), ತಶ್ವಿನಿ.ಎ ಎಸ್ (ಲಕ್ಷ್ಮೀಶ ಗೌಡ ಮತ್ತು ಜಯಂತಿ ದಂಪತಿ ಪುತ್ರಿ), ಹರ್ಷಿಣಿ ಪ್ರಭು( ಹರೀಶ್ ಪ್ರಭು ಮತ್ತು ರೇಖಾ ದಂಪತಿ ಪುತ್ರಿ), ಆರಾಧ್ಯಾ .ಕೆ (ಕೇಶವ ಮತ್ತು ಪ್ರೀಯ ದಂಪತಿ ಪುತ್ರಿ)  ಭಾಗವಹಿಸಿರುತ್ತಾರೆ ಎಂದು ಶಾಲೆಯ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.  

LEAVE A REPLY

Please enter your comment!
Please enter your name here