ಪಾಪೆಮಜಲು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ

0

ನಿವ್ವಳ ಲಾಭ 2,26,574| ಡಿವಿಡೆಂಡ್‌ ಶೆ.11| ಪ್ರತಿ ಲೀ.ಗೆ ಬೋನಸ್‌ 0.81

ಪುತ್ತೂರು: ಅರಿಯಡ್ಕ ಗಾಮದ ಪಾಪೆಮಜಲು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆಯು ವಿನಯ್‌ ಕುಮಾರ್‌ ಎಸ್‌ ಅಧ್ಯಕ್ಷತೆಯಲ್ಲಿ ಸಂಘದ ಸಭಾಭವನದಲ್ಲಿ ನಡೆಯಿತು.

2023-24ನೇ ಸಾಲಿನಲ್ಲಿ ಸಂಘವು 2,47,09,600 ರೂಪಾಯಿ ವವ್ಯಹಾರ ನಡೆಸಿದೆ. 2,36,574ರೂ ಗಳ ನಿವ್ವಳ ಲಾಭ ಗಳಿಸಿದ್ದು ಸದಸ್ಯರಿಗೆ ಶೇ.11ಡಿವಿಡೆಂಡ್‌ ಹಾಗೂ ಪ್ರತಿ ಲೀಟರ್‌ ಗೆ 0.81ಪೈಸೆಯಂತೆ ಬೋನಸ್‌ ನೀಡಲಾಗುವುದೆಂದು ಸಂಘದ ಅಧ್ಯಕ್ಷ ವಿನಯ್‌ ಕುಮಾರ್‌ ಎಸ್‌ ನೂಚಿಲೋಡ್‌ ಘೋಷಿಸಿದರು.ಸಂಘವು ಹಾಲು ಉತ್ಪಾದನೆಯಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡು ಆಡಿಟ್‌ ವರ್ಗೀಕರಣದಲ್ಲಿ ಎ ಶ್ರೇಣಿಯನ್ನು ಪಡೆದುಕೊಂಡಿರುತ್ತದೆ.

ಸಂಘದ ಹಾಲು ಪರೀಕ್ಷಕಿ ಚೈತ್ರಾ ವರದಿ ವಾಚಿಸಿದರು.ಅತಿಥಿಯಾಗಿ ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿ ಒಕ್ಕೂಟದಿಂದ ಸಿಗುವ ಅನುದಾನಗಳ ಬಗ್ಗೆ, ಯೋಜನೆಗಳ ಬಗ್ಗೆ, ಜಾನುವಾರು ವಿಮೆಯ ಬಗ್ಗೆ ಮಾಹಿತಿ ನೀಡಿ, ಪ್ರತಿಯೊಬ್ಬರೂ ಇದರ ಪ್ರಯೋಜನ ಪಡೆದುಕೊಂಡು ಹೋಗಲು ಸಲಹೆ ನೀಡಿದರು.

ಗೌರವಾರ್ಪಣೆ:
ಸಂಘಕ್ಕೆ ಅತಿ ಹೆಚ್ಚು ಹಾಲು ಪೂರೈಸಿದ ರಮೇಶ್‌ ರೈ ಬಳ್ಳಿಕಾನ ಹಾಗೂ ಸುನೀಲ್‌ ಕುಮಾರ್‌ ಗುಂಡ್ಯಡ್ಕ ಅವರನ್ನು ಸನ್ಮಾನಿಸಲಾಯಿತು.ಸಂಘದಲ್ಲಿ ಕಳೆದ 29ವರ್ಷಗಳಿಂದ ಹಾಲು ಪರೀಕ್ಷಕರಾಗಿ ಸ್ವ-ನಿವೃತ್ತಿ ಹೊಂದಿದ ದೇವಪ್ಪಗೌಡ ಆಲಂತಡ್ಕ ಅವರನ್ನು ಗೌರವಿಸಲಾಯಿತು. ಸಂಘದ ನಿಕಟಪೂರ್ವ ಅಧ್ಯಕ್ಷರಾದ ರಾಮಮೋಹನ್‌ ನೆಕ್ಕರೆ, ದೇವಪ್ಪಗೌಡರ ಸೇವೆಯನ್ನು ಸ್ಮರಿಸುತ್ತಾ ಮುಂದಿನ ಜೀವನಕ್ಕೆ ಶುಭ ಹಾರೈಸಿದರು.

ಅಧ್ಯಕ್ಷ ವಿನಯ್‌ ಕುಮಾರ್‌ ಎಸ್‌ ಮಾತನಾಡಿ ಸಂಘವು ಕಳೆದ 33 ವರ್ಷಗಳಿಂದ ನಿರಂತರ ಅಭಿವೃದ್ಧಿಗೆ ಕಾರಣರಾದ ರಾಮ್‌ ಮೋಹನ್‌ ನೆಕ್ಕರೆ ಇವರ ನಿಸ್ವಾರ್ಥ ಸೇವೆಯನ್ನು ಅವರೊಂದಿಗೆ ಶ್ರಮಿಸಿದ ಎಲ್ಲ ನಿರ್ದೇಶಕರ ಸೇವೆಯನ್ನು ಅಭಿನಂದಿಸಿದರು. ಸಂಘದ ಸದಸ್ಯರು ಲಾಭ ನಷ್ಟದ ವಿಚಾರವನ್ನಷ್ಠೇ ಪರಿಗಣಿಸಬಾರದು. ಹಾಲಿನ ಹಾಗೂ ಹಾಲು ಉತ್ಪನ್ನಗಳ ಮಹತ್ವವನ್ನು ಅರಿತು ದೀರ್ಗಕಾಲದಲ್ಲಿ ಪ್ರಯೋಜನ ಪಡೆದುಕೊಳ್ಳಬಹುದು. ಒಕ್ಕೂಟದ ಅನುದಾನದ ಸದ್ಭಳಕೆ , ಸೈಲೇಜ್‌ ನ ಉಪಯೋಗದಿಂದ ಹೈನುಗಾರಿಜೆಯನ್ನು ಲಾಭದಾಯಕ ಉದ್ಯಮವನ್ನಾಗಿ ಮಾಡಬಹುದು. ಕೃಷಿಯೊಂದಿಗೆ ಹೈನುಗಾರಿಕೆ ಮಾಡಿ ಸಂಘಕ್ಕೆ ಉತ್ತಮ ಗುಣಮಟ್ಟದ ಹಾಲು ಪೂರೈಸಿ ಸಂಘದ ಅಭಿವೃದ್ಧಿಗೆ ಎಲ್ಲರೂ ಸಹಕರಿಸಬೇಕೆಂದು ವಿನಂತಿಸಿದರು. ಸಂಘದ ನಿರ್ದೇಶಕ ಲೊಕೇಶ್‌ ಕೆ ಸ್ವಾಗತಿಸಿ, ವಂದಿಸಿದರು.

ವೇದಿಕೆಯಲ್ಲಿ ಸಂಘದ ಉಪಧ್ಯಾಕ್ಷ ವಿಶ್ವನಾಥ ಬಿ, ನಿರ್ದೇಶಕರಾದ ಸುನೀಲ್‌ ಕುಮಾರ್‌, ದೇವಪ್ಪ ನಾಯ್ಕ, ನಿತ್ಯಕುಮಾರಿ, ಭವಾನಿ ಎಮ್‌, ಕಮಲಾಕ್ಷಿ, ಭಾರತಿ, ಕಾರ್ಯದರ್ಶಿ ರಮೇಶ್‌ ಎ ,ಹಾಲು ಪರೀಕ್ಷಕಿ ಚೈತ್ರಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here