ಪುತ್ತೂರು:ಮಾಯಿದೇ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯಲ್ಲಿ ರೋಟರಿ ಸಂಸ್ಥೆ ಪುತ್ತೂರು ಸಿಟಿಯ ಪ್ರಾಯೋಜಕತ್ವದ ಇಂಟರ‍್ಯಾಕ್ಟ್ ಕ್ಲಬ್‌ನ ಪದಪ್ರಧಾನ ಕಾರ್ಯಕ್ರಮವು ಶಾಲಾ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿದ್ದ ರೋಟರಿ ಕ್ಲಬ್ ಪುತ್ತೂರು ಯುವದ ಅಧ್ಯಕ್ಷೆ ಅಶ್ವಿನಿ ಕೃಷ್ಣ ಮುಳಿಯ ಮಾತನಾಡಿ, ಇಂಟರ‍್ಯಾಕ್ಟ್ ಕ್ಲಬ್‌ನ ಪದಾಧಿಕಾರಿಗಳ ಜವಾಬ್ದಾರಿಯನ್ನು ತಿಳಿಸಿಕೊಡುವುದರೊಂದಿಗೆ ಸಮಾಜದ ಅಭಿವೃದ್ಧಿ ಕೆಲಸಕಾರ್ಯಗಳನ್ನು ಮಾಡಿ ಸಮಾಜದ ಹಿತವನ್ನು ಬಯಸಬೇಕು ಎಂದರು.
ಶಾಲಾ ಮುಖ್ಯೋಪಾಧ್ಯಾಯನಿ ರೋಸಲಿನ್ ಲೋಬೊ ಮಾತನಾಡಿ, ರೋಟರಿ ಸಂಸ್ಥೆವು ಹಲವು ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡಿ ಸಮಾಜಕ್ಕೆ ಕೊಡುಗೆ ನೀಡುತ್ತಿದೆ ಎಂದರು.
ಜಾನ್ ಕುಟಿನ್ಹಾ ಮಾತನಾಡಿ, ನಾವು ಇತರರಿಗೆ ಸಂತೋಷ ಕೊಡುವಂತಹ ಕೆಲಸದಲ್ಲಿ ಸತತವಾಗಿ ಕಾರ್ಯನಿರ್ವಹಿಸಬೇಕು ಎಂದರು. ಇಂಟರ‍್ಯಾಕ್ಟ್ ಕ್ಲಬ್‌ನ ನೂತನ ಅಧ್ಯಕ್ಷೆ ಎಂ. ತಾಜುನ್ನಿಸಾ, ಪ್ರಶಾಂತ್ ಶೆಣೈ, ಜೊ ಡಿಸೋಜ, ಪಿ.ಎಂ ಅಶ್ರಫ್, ಗುರುಪ್ರಸಾದ್‌ರವರು ಉಪಸ್ಥಿತರಿದ್ದರು.
ಇಂಟರ‍್ಯಾಕ್ಟ್ ಕ್ಲಬ್‌ನ ನೂತನ ಅಧ್ಯಕ್ಷೆ ಎಂ ತಾಜುನ್ನಿಸಾ, ಉಪಾಧ್ಯಕ್ಷೆ ರಿಂಶಾ ಆಲಿ, ಕಾರ್ಯದರ್ಶಿ ಸೋಹ ಶಾನುಮ್, ಜೊತೆ ಕಾರ್ಯದಶಿಯಾಗಿ ಅಶಿಕಾ ರಮ್ಲತ್, ಕೋಶಾಧಿಕಾರಿ ರೆನಿಶಾ ಡಿಸೋಜ, ಸಾಜಂಟ್ ಎಟ್ ಆರ್ಮ್ಸ್ ಆಗಿ ಫಾತಿಮತ್ ಶಾಯಿಫಾ, ಕ್ಲಬ್ ಸರ್ವಿಸ್ ನಿರ್ದೇಶಕಿ ಹುಝೈಫಾ, ಇನ್‌ಸ್ಟಿಟ್ಯೂಷನಲ್ ಸರ್ವಿಸ್ ನಿರ್ದೇಶಕಿ ಮುಫಿದಾ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕಿ ವರ್ಷಿಣಿ, ಇಂಟರ್‌ನ್ಯಾಷನಲ್ ಸರ್ವಿಸ್ ನಿರ್ದೇಶಕಿ ರಂಶಾ ಡಿ ಕೆ, ಇಂಟರ‍್ಯಾಕ್ಟ್ ಸಿಬ್ಬಂದಿ ಸಂಯೋಜಕಿ ರೀನಾ ತೆರೆಜ್ ರೆಬೆಲ್ಲೊ ಹಾಗೂ ಶ್ವೇತಾ ರಿಯ ಡಿಸೋಜರವರು ಪದ ಪ್ರದಾನ ಸ್ವೀಕರಿಸಿದರು. ರೋಟರಿ ಸಂಸ್ಥೆ ಪುತ್ತೂರು ಸಿಟಿಯ ಅಧ್ಯಕ್ಷ ಮಹಮ್ಮದ್ ಸಾಹೇಬ್‌ರವರು ಸ್ವಾಗತಿಸಿ, ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ಕಾರ್ಯದರ್ಶಿ ರಾಮಚಂದ್ರ ವಂದಿಸಿದರು. ಇಂಟರ‍್ಯಾಕ್ಟ್ ಸಿಬ್ಬಂದಿ ಸಂಯೋಜಕಿ ರೀನಾ ತೆರೆಜ್ ರೆಬೆಲ್ಲೊ ಕಾರ್ಯಕ್ರಮ ನಿರೂಪಿಸಿದರು.