ಬಡಗನ್ನೂರು: ಬಡಗನ್ನೂರು ಗ್ರಾ.ಪಂ ಜಮಾಬಂಧಿ ಸಭೆಯು ಗ್ರಾ.ಪಂ.ಅಧ್ಯಕ್ಷೆ ಪುಷ್ಪಲತಾ ದೇವಕಜೆ ಇವರ ಅಧ್ಯಕ್ಷತೆಯಲ್ಲಿ ಸೆ.19 ರಂದು ಗ್ರಾ.ಪಂ.ಸಮುದಾಯ ಭವನದಲ್ಲಿ ನಡೆಯಿತು.
ಮಾರ್ಗದರ್ಶಿ ಅಧಿಕಾರಿಯಾಗಿ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ,ಶಿಕ್ಷಣ ಸಂಯೋಜಕ ಹರೀಶ್ ಮಾತನಾಡಿ ಪಾರದರ್ಶಕ ದೃಷ್ಟಿಯಲ್ಲಿ ಪಂಚಾಯತ್ ಲೆಕ್ಕ ಪತ್ರ ಹಾಗೂ ಕಾಮಾಗಾರಿಗಳ ಭೌದ್ದಿಕ ಪರಿಶೀಲನೆಯನ್ನು ಸಾರ್ವಜನಿಕ ಸಮುದಾಯದ ಜತೆ ತಿಳಿಸುವುದು ಈ ಸಭೆಯ ಉದ್ದೇಶ. ಯಾವುದೇ ಕಾಮಾಗಾರಿ ಸರಿಯಾದ ರೀತಿಯಲ್ಲಿ ಆಗದಿದ್ದರೆ ಸಭೆಯಲ್ಲಿ ತಿಳಿಸಲು ಅವಕಾಶ ಇದೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ದೊರಕಬೇಕೇಂಬ ಅಶಯ ಸರ್ಕಾರದ್ದಾಗಿದೆ ಎಂದು ಹೇಳಿದರು.
ಸಭೆಯ ಬಳಿಕ 2023 -24 ನೇ ಸಾಲಿನಲ್ಲಿ ನಡೆಸಲಾದ ಕಾಮಾಗಾರಿಗಳ ಪರಿಶೀಲನೆ ಮಾಡಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷೆ ಸುಶೀಲಾ ಪಕ್ಯೋಡ್, ಸದಸ್ಯರಾದ ರವಿರಾಜ ರೈ ಸಜಂಕಾಡಿ ,ಸಂತೋಷ್ ಆಳ್ವ ಗಿರಿಮನೆ, ವೆಂಕಟೇಶ್ ಕನ್ನಡ್ಕ, ಕುಮಾರ ಅಂಬಟೆಮೂಲೆ, ರವಿಚಂದ್ರ ಸಾರೆಪ್ಪಾಡಿ, ಸವಿತಾ ನೇರೋತ್ತಡ್ಕ, ದಮಯಂತಿ ಕೆಮನಡ್ಕ, ಹೇಮಾವತಿ ಮೋಡಿಕೆ, ವಸಂತ ಗೌಡ ಕನ್ನಯ ಸುಜಾತ ಮೈಂದನಡ್ಕ, ಶ್ರೀಮತಿ ಕನ್ನಡ್ಕ, ಧರ್ಮೇಂದ್ರ ಕುಲಾಲ್ ಪಾಡ್ ಉಪಸ್ಥಿತರಿದ್ದರು.
ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮೋನಪ್ಪ ಕೆ ಸ್ವಾಗತಿಸಿ, ವರದಿ ಮಂಡಿಸಿದರು. ಸಿಬ್ಬಂದಿ ಹೇಮಾವತಿ ಸಿ.ಹೆಚ್ ವಂದಿಸಿದರು.ಸಿಬ್ಬಂದಿಗಳಾದ ಶಾರದ ,ಅಬ್ದುಲ್ ರಹಿಮಾನ್, ಶೀಲಾವತಿ ಹಾಗೂ ಸುಕನ್ಯಾ ಹಾಗೂ ಪ್ರಿಯಾ ಸಹಕರಿಸಿದರು. ಕಾರ್ಯಕ್ರಮದ ಬಳಿಕ 15 ನೇ ಹಣಕಾಸು ಯೋಜನೆ ಕಾಮಗಾರಿ ಪರಿಶೀಲನೆ ನಡೆಯಿತು.