ಕಬಕದಲ್ಲಿ ವೆಜಿಟೇಬಲ್ಸ್, ಫ್ರೂಟ್ಸ್ ಮಾರಾಟ ಮಳಿಗೆ ‘ಎಸ್.ಎಚ್ ಜನರಲ್’ ಸ್ಟೋರ್ ಶುಭಾರಂಭ

0

ಪುತ್ತೂರು: ಎಸ್.ಎಚ್ ಜನರಲ್ ಸ್ಟೋರ್, ವೆಜಿಟೇಬಲ್ಸ್,  ಫ್ರೂಟ್ಸ್ಗಳನ್ನೊಳಗೊಂಡ ರಿಟೇಲ್ ಮತ್ತು ಹೋಲ್‌ಸೇಲ್ ಮಾರಾಟ ಮಳಿಗೆ ಸೆ.20ರಂದು ಕಬಕ ಜಂಕ್ಷನ್‌ನಲ್ಲಿ ಶುಭಾರಂಭಗೊಂಡಿತು.

ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು ಅವರು ಉದ್ಘಾಟಿಸಿ ಪ್ರಾರ್ಥನೆ ನೆರವೇರಿಸಿದರು. ಈ ಸಂರ್ಭದಲ್ಲಿ ಕೂಡುರಸ್ತೆ ಜುಮಾ ಮಸೀದಿಯ ಖತೀಬ್ ಬದ್ರುದ್ದೀನ್ ರಹ್ಮಾನಿ, ಸದರ್ ಇಕ್ಬಾಲ್ ಮುಸ್ಲಿಯಾರ್, ಕೂಡುರಸ್ತೆ ಮಸೀದಿ ಅಧ್ಯಕ್ಷ ಅಬ್ದುಲ್ ಮಜೀದ್ ಬಾಳಾಯ, ಮಾಜಿ ಅಧ್ಯಕ್ಷರಾದ ಪಿ.ಕೆ ಮುಹಮ್ಮದ್ ಕೂಡುರಸ್ತೆ, ಇಸ್ಮಾಯಿಲ್ ದರ್ಬೆ, ಸಿದ್ದೀಕ್ ಸುಲ್ತಾನ್ ಕೂಡುರಸ್ತೆ, ಅಬ್ದುಲ್ಲ ಬಾಳಾಯ, ಅಬ್ದುಲ್ ರಹಿಮಾನ್ ಕುಡುರಸ್ತೆ, ಇಸ್ಮಾಯಿಲ್, ಅಶ್ರಫ್ ಮಂಜೇಶ್ವರ, ಹಂಝ ಗಾನ ಉಪ್ಪಿನಂಗಡಿ, ಅಶ್ರಫ್ ಗಾನ ಮತ್ತಿತರರು ಉಪಸ್ಥಿತರಿದ್ದರು.

ಅತಿಥಿಗಳನ್ನು ಸ್ವಾಗತಿಸಿದ ಎಸ್.ಎಚ್ ಜನರಲ್ ಸ್ಟೋರ್‌ನ ಮಾಲಕ ಸಿದ್ದೀಕ್ ಕೊಚ್ಚಿ ಮಾತನಾಡಿ ನಮ್ಮಲ್ಲಿ ವೆಜಿಟೇಬಲ್ಸ್ ಹಾಗೂ  ಫ್ರೂಟ್ಸ್ಗಳನ್ನು ಹೋಲ್‌ಸೇಲ್ ಮತ್ತು ರಿಟೇಲ್ ದರದಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ಹೇಳಿ ಗ್ರಾಹಕರ ಸಹಕಾರ ಕೋರಿದರು.

LEAVE A REPLY

Please enter your comment!
Please enter your name here