ಸೆ.28: ರೆಂಜಲಾಡಿ ಇಸ್ಲಾಮಿಕ್ ಸೆಂಟರ್ ಆಶ್ರಯದಲ್ಲಿ ‘ಇಷ್ಕೇ ಮದೀನಾ’ ಬೃಹತ್ ಮಿಲಾದ್ ಫೆಸ್ಟ್

0

ಪುತ್ತೂರು: ರೆಂಜಲಾಡಿ ಇಸ್ಲಾಮಿಕ್ ಎಜುಕೇಶನ್ ಸೆಂಟರ್ (ಆರ್‌ಐಸಿ) ಆಶ್ರಯದಲ್ಲಿ ‘ಇಷ್ಕೇ ಮದೀನಾ’ ಬೃಹತ್ ಮಿಲಾದ್ ಫೆಸ್ಟ್ ಸೆ.28ರಂದು ಸಂಜೆ ಗಂಟೆ 7ರಿಂದ ರೆಂಜಲಾಡಿ ಆರ್‌ಐಸಿ ವಠಾರದಲ್ಲಿ ನಡೆಯಲಿದೆ.


ಆರ್‌ಐಸಿ ಅಧ್ಯಕ್ಷ ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮ ಆಯೋಜನೆಗಾಗಿ ಮಿಲಾದ್ ಸ್ವಾಗತ ಸಮಿತಿಯನ್ನು ರಚಿಸಲಾಗಿದ್ದು ಚೇರ್‌ಮೆನ್ ಆಗಿ ಗಲ್ಫ್ ಉದ್ಯಮಿ ಉಮ್ಮರ್ ಸುಲ್ತಾನ್ ರೆಂಜಲಾಡಿ ಹಾಗೂ ಕನ್ವೀನರ್ ಆಗಿ ಉದ್ಯಮಿ ಪಿ.ಕೆ ಮಹಮ್ಮದ್ ಕೂಡುರಸ್ತೆಯವರನ್ನು ಆಯ್ಕೆ ಮಾಡಲಾಗಿದೆ.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ವೈವಿಧ್ಯಮಯ ಕಾರ್ಯಕ್ರಮ, ದಫ್, ಬುರ್ದಾ ಸೇರಿದಂತೆ ವಿವಿಧ ಕಾರ್ಯಕ್ರಮ ನಡೆಯಲಿದೆ. ಕೊನೆಯಲ್ಲಿ ಅನ್ನದಾನ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here