ಕಡಬ: ಕುಕ್ಕೇ ಶ್ರೀ ಸುಬ್ರಹ್ಮಣ್ಯ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ದಿ. ಕೆ ನೊಣಪ್ಪಗೌಡ ಹಾಗೂ ಅವರ ಧರ್ಮಪತ್ನಿ ದಿ. ಎನ್ ಜಿ ಗಂಗಮ್ಮ ಇವರ ಸ್ಮರಣಾರ್ಥ, ಗಂಗಾ ಪ್ರತಿಷ್ಠಾನ ಕುಮಾರಪುರ, ಕೊಂಬಾರು, ಇವರ ವತಿಯಿಂದ ಕೊಂಬಾರು, ಸಿರಿಬಾಗಿಲು ಗ್ರಾಮ ವ್ಯಾಪ್ತಿಯಲ್ಲಿ ವಾಸ್ತವ್ಯವಿದ್ದು ಏಳನೇ, ಹತ್ತನೇ ಮತ್ತು ದ್ವಿತೀಯ ಪಿಯುಸಿ ವಿಭಾಗಗಳಲ್ಲಿ ಅತೀ ಹೆಚ್ಚು ಅಂಕ ಪಡೆದ ಮತ್ತು ಗ್ರಾಮದ ಮೂರು ಪ್ರಾಥಮಿಕ ಶಾಲೆಗಳಲ್ಲಿ ಏಳನೇ ತರಗತಿಯಲ್ಲಿ ಅತ್ಯಂತ ಹೆಚ್ಚು ಅಂಕ ಪಡೆದ ಒಟ್ಟು 9 ಪ್ರತಿಭಾವಂತ ವಿಧ್ಯಾರ್ಥಿ ವಿದ್ಯಾರ್ಥಿನಿಯರನ್ನು ಗುರುತಿಸಿ, ತಲಾ 5000 ರೂ ಗಳ ನಗದು ಪುರಸ್ಕಾರ ನೀಡಿ, ಗೌರವಿಸಿ ಸನ್ಮಾನಿಸಲಾಯಿತು. ಸತತ ನಾಲ್ಕನೇ ವರ್ಷದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕೌಶಿಕ್ ಕೆ. ಸಿ , ಲಕ್ಸ್ಮಿತಾ ಕೆ ಜಿ, ಪುನರ್ವಿ ಕೆ ಸಿ, ಚಿರಾಯು ಕೆ, ಪೂಜಾ, ಪ್ರೀತಾ ಡಿ ಪಿ, ನಿಜೇಶ್ ಕೆ ಯು, ಪ್ರಜ್ವಲ್ ಕೆ ಹಾಗೂ ಆಶಿಕಾ ಬಿ ಗೌರವ ಸನ್ಮಾನ ಸ್ವೀಕರಿಸಿದರು.
ಗೌಡ- ಒಕ್ಕಲಿ ರಾಗಿದ್ದು ಪೂಜಾ ಅರ್ಚಕರಾಗಿ ಇಬ್ಬರು ಮಕ್ಕಳ ಜೊತೆ ತನ್ನನ್ನು ತೊಡಗಿಸಿಕೊಂಡಿರುವ ಬೆಳ್ತಂಗಡಿ ತಾಲೂಕು ಮುಂಡೂರಿನ ಆನಂದ ಗೌಡ ಮತ್ತು ಅವರ ಇಬ್ಬರು ಮಕ್ಕಳನ್ನು ಗುರುತಿಸಿ ಧಾರ್ಮಿಕ ಕ್ಷೇತ್ರದ ಸಾಧನೆಗೆ, ಹಾಗೂ ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಪ್ರೌಢಶಾಲೆಯ ಅಧ್ಯಾಪಕ ಜಿಲ್ಲಾ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕ ರಘು ಬಿಜೂರ್ , ಅಲ್ಲಿನ ಮುಖ್ಯೋಪಾಧ್ಯಾಯ ಯಶವಂತ ರೈ, ನಿವೃತ್ತ ಅಧ್ಯಾಪಕ ಚಿದಾನಂದ ಹೊಸಬೀಡು, ಸಿರಿಬಾಗಿಲು ಶಾಲೆಯಲ್ಲಿ ಸತತ 17 ವರ್ಷ ಸೇವೆ ಸಲ್ಲಿಸಿದ ದಿನೇಶ್ ಆಚಾರ್ ಇವರನ್ನು ಕೂಡಾ ಶೈಕ್ಷಣಿಕ ಕ್ಷೇತ್ರದ ಸಾಧನೆಗೆ ಗುರುತಿಸಿ ಗೌರವಿಸಿ ಸನ್ಮಾನಿಸಲಾಯಿತು.
ದಿವಂಗತ ಕೆ ನೊಣಪ್ಪ ಗೌಡರು ಶಾಲಾ ದಿನಗಳಲ್ಲಿ ರಚಿಸಿದ ಭಾವಗೀತೆಗಳು, ಮತ್ತು ಅವರು ಹಿಂದೆ ರಚಿಸಿ ಇಂದಿಗೂ ಸುಬ್ರಮಣ್ಯ ಪ್ರೌಡ ಶಾಲೆ, ಕಾಲೇಜಿನಲ್ಲಿ ಪ್ರಾರ್ಥನಾ ಗೀತೆಯಾಗಿ ಹಾಡುತ್ತಿರುವ ಪ್ರಾರ್ಥನಾ ಭಕ್ತಿ ಗೀತೆ , ಹಾಗೂ ಇತರ ಭಾವ ಭಕ್ತಿ ಗೀತೆಗಳನ್ನು ಜಿಲ್ಲಾ ಪ್ರಶಸ್ತಿ ವಿಜೇತ ರಘು ಬಿಜೂರ್ ಮತ್ತು ಪೃಥ್ವಿ, ಸ್ಕಂದ , ಸ್ವಸ್ತಿ, ಬ್ರಿಜೇಶ್ ಹೆಸರಿನ ಪುಟಾಣಿ ಮಕ್ಕಳ ತಂಡ ಸುಶ್ರಾವ್ಯವಾಗಿ ಹಾಡಿ ಭಾವಯಾನ ಸಂಗೀತ ಕಾರ್ಯಕ್ರಮ ನಡೆಸಿ ಕೊಟ್ಟರು. ಒಕ್ಕಲಿಗ ಅರ್ಚಕ ಎನ್ ಆನಂದ ಗೌಡ ಮತ್ತು ಅವರ ಇಬ್ಬರು ಮಕ್ಕಳಿಂದ ಸತ್ಯನಾರಾಯಣ ಪೂಜೆ ಹಾಗೂ ಮಹಾಗಣಪತಿ ಹೋಮ ಕೂಡ ನಡೆಯಿತು.
ಗಂಗಾ ಪ್ರತಿಷ್ಠಾನ ದ ಮುಖ್ಯ ಪ್ರವರ್ತಕರಾದ ವಕೀಲ ಕೆ. ಎನ್. ಪ್ರವೀಣ್ ಕುಮಾರ್, ಡಾ ಕಲಾವತಿ ಪಿ.ಟಿ ಹಾಗೂ ಇವರ ಮಕ್ಕಳಾದ ಡಾ. ಅನನ್ಯಾ ಪಿ.ಕೆ. ಮತ್ತು ಸಿಂಚನ ಪಿ. ಕೆ. ಈ ಕಾರ್ಯಕ್ರಮ ನಡೆಸಿಕೊಟ್ಟರು.
ದಿ. ನೋಣಪ್ಪ ಗೌಡ ರ ಸಾರಥ್ಯದಲ್ಲಿ 1985ರಲ್ಲಿ ಸಿರಿಬಾಗಿಲು ಪ್ರಾಥಮಿಕ ಶಾಲೆಗೆ ಆವರಣ, ಸಂಪರ್ಕ ರಸ್ತೆ , ಮತ್ತು ಬಸ್ಸು ತಂಗುದಾಣ ನಿರ್ಮಿಸಿದ 1985 ರ ಕುಕ್ಕೇ ಸುಬ್ರಹ್ಮಣ್ಯ ಪದವಿ ಪೂರ್ವ ಕಾಲೇಜಿನ ಎನ್ ಎಸ್ ಎಸ್ ತಂಡವನ್ನು 39 ವರ್ಷಗಳ ಬಳಿಕ ಗುರುತಿಸಿ ಈ ಸಂದರ್ಭದಲ್ಲಿ ಗುರುತಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ವಕೀಲ ವೈ ಸದಾನಂದ ಪಕ್ಕಳ, ಗ್ರಾಮಪಂಚಾಯತ್ ಅಧ್ಯಕ್ಷ ಮಧುಸೂಧನ್ ಒಡೋಳಿ , ಡಾ. ಮಧುಸೂದನ ಕೈಕುರೆ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೆ. ಎನ್ ಪ್ರಸನ್ನ ಕುಮಾರ್, ನಿವೃತ್ತ ಆರಕ್ಷಕ ಉಪ ನಿರೀಕ್ಷಕ ಪಿ. ತಿಮ್ಮಪ್ಪ ಗೌಡ, ಮನಮೋಹನ ಗೋಳ್ಯಾಡಿ, ಗ್ರಾಮಪಂಚಾಯತ್ ಪಿಡಿಒ ರಾಘವೇಂದ್ರ ಗೌಡ, ಗುಡ್ಡಪ್ಪ ಗೌಡ ಹೊಳ್ಳಾರು, ಕಿಶೋರ್ ಹೊಳ್ಳಾರು, ಡಿ. ರಾಮಕೃಷ್ಣ ಹೊಳ್ಳಾರು, ಗುಣವಂತ ಕಟ್ಟೆ, ಮುಖ್ಯ ಶಿಕ್ಷಕ ವಿಜಯಕುಮಾರ್ ಎನ್, ವಿನೇಶ್ ಬಿಳಿನೆಲೆ, ಕೇಶವ ಗೌಡ ಪುಚ್ಚೇರಿ, ಮನೋಹರ್ ಕಟ್ಟೆ, ಶಿವರಾಮ ಗೌಡ, ಭುವನೇಶ್ವರ ಅಮ್ಚೂರ್ , ಚೇರು ಶಾಲೆಯ ಮುಖ್ಯ ಶಿಕ್ಷಕಿ ದಮಯಂತಿ ಹಾಗೂ ಇತರ ಸುಮಾರು ಮುನ್ನೂರು ಮಂದಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಯಶವಂತ ರೈ ಧನ್ಯವಾದ ಸಮರ್ಪಿಸಿದರು. ಶಶಿಧರ ಬೊಟ್ಟಡ್ಕ ಹಾಗೂ ಕಮಲಾಕ್ಷ ಕಾರ್ಯಕ್ರಮ ನಿರೂಪಿಸಿದರು.