ಪುತ್ತೂರು ತಾ|ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದ ಮಹಾಸಭೆ

0

26.56 ಲಕ್ಷ ರೂ.ನಿವ್ವಳ ಲಾಭ; ಶೇ.10 ಡಿವಿಡೆಂಡ್, ಪ್ರತಿ ಕೆ.ಜಿ.ರಬ್ಬರ್‌ಗೆ 50ಪೈಸೆ ಬೋನಸ್; ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ

ನೆಲ್ಯಾಡಿ: ಪುತ್ತೂರು ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ನೆಲ್ಯಾಡಿಯಲ್ಲಿ ಸಂಘದ ಕೇಂದ್ರ ಕಚೇರಿಯಲ್ಲಿ ನಡೆಯಿತು.


ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿಯವರು ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲೂ ನಮ್ಮ ಸಂಘವು ಕಳೆದ 34 ವರ್ಷಗಳಿಂದ ಹಿರಿಯ ಸಹಕಾರಿಗಳ ಮಾರ್ಗದರ್ಶನ ಮತ್ತು ಎಲ್ಲಾ ಸದಸ್ಯರ ಸಹಕಾರದಿಂದ ಅತ್ಯುತ್ತಮ ಸೇವೆ ನೀಡುವುದರ ಜೊತೆಗೆ ಪ್ರಗತಿಪಥದಲ್ಲಿ ಮುನ್ನಡೆಯುತ್ತಿದೆ. 2023-24ನೇ ಸಾಲಿನಲ್ಲಿ ಸಂಘವು 34.54 ಕೋಟಿ ರೂ.ವ್ಯವಹಾರ ಮಾಡಿದೆ. 10.22 ಕೋಟಿ ರೂ.ಠೇವಣಿ ಸಂಗ್ರಹ ಹೊಂದಿದೆ. ಹೊರ ಬಾಕಿ ಸಾಲವು 3.87 ಕೋಟಿ ರೂ.ಇದ್ದು ಕಳೆದ ಸಾಲಿಗಿಂತ 46 ಲಕ್ಷ ರೂ.ಹೆಚ್ಚಳವಾಗಿದೆ. ರಬ್ಬರ್ ಕೃಷಿಗೆ ಬೇಕಾದ ಸಲಕರಣೆ, ಅಡಿಕೆ ಕೃಷಿಗೆ ಮೈಲುತುತ್ತು, ರಾಸಾಯನಿಕ ಗೊಬ್ಬರ ತರಿಸಿ ವಿತರಿಸಲಾಗುತ್ತಿದೆ. ಸದಸ್ಯರಿಗೆ ರಬ್ಬರ್ ದಾಸ್ತಾನು ಇಡಲು ಮತ್ತು ಸಾಲ ಸೌಲಭ್ಯವನ್ನು ಕಳೆದ ವರ್ಷದಿಂದ ಆರಂಭಿಸಲಾಗಿದೆ. ಗ್ರಾಹಕರ ನಗದು ವರ್ಗಾವಣೆಗೆ ಅನುಕೂಲವಾಗುವಂತೆ ಆರ್‌ಟಿಜಿಎಸ್, ನೆಫ್ಟ್ ಸೌಲಭ್ಯವಿದೆ. ಖಾಸಗಿ ವ್ಯಾಪಾರಿಗಳಿಂದ ಸ್ಪರ್ಧೆ ಹಾಗೂ ರಬ್ಬರ್ ಧಾರಣೆಯಲ್ಲಿ ವರ್ಷಪೂರ್ತಿ ಏರಿಳಿತವಿದ್ದರೂ ಕಳೆದ ಸಾಲಿನಲ್ಲಿ ಸಂಘವು 26.56 ಲಕ್ಷ ರೂ. ನಿವ್ವಳ ಲಾಭಗಳಿಸಿದೆ. ಸಂಘದ ಸದಸ್ಯರಿಗೆ ಶೇ.10 ಡಿವಿಡೆಂಡ್ ಹಾಗೂ ಸಂಘಕ್ಕೆ ರಬ್ಬರ್ ಮಾರಾಟ ಮಾಡಿದ ಸದಸ್ಯರಿಗೆ ಪ್ರತಿ ಕೆ.ಜಿ.ರಬ್ಬರ್‌ಗೆ 50 ಪೈಸೆಯಂತೆ ಬೋನಸ್ ನೀಡಲಾಗುವುದು. ನಷ್ಟವನ್ನು ಸರಿದೂಗಿಸಿಕೊಂಡು ಸಂಘ ಲಾಭದಲ್ಲಿ ಮುನ್ನಡೆಯುತ್ತಿದೆ. ಸಂಘವನ್ನು ಇನ್ನಷ್ಟೂ ಆರ್ಥಿಕವಾಗಿ ಗಟ್ಟಿಗೊಳಿಸಲು ಸದಸ್ಯರು ಸಹಕಾರ ನೀಡಬೇಕು. ಮುಂದಿನ ವರ್ಷದಲ್ಲಿ ಇನ್ನಷ್ಟೂ ಪ್ರೋತ್ಸಾಹಧನ ನೀಡುತ್ತೇವೆ ಎಂದು ಪ್ರಸಾದ್ ಕೌಶಲ್ ಶೆಟ್ಟಿ ಹೇಳಿದರು.

ಕಚ್ಚಾ ರಬ್ಬರ್ ವ್ಯವಹಾರದಲ್ಲಿ 1.01 ಕೋಟಿ ರೂ.ಲಾಭ:
ಸಂಘದಲ್ಲಿ ವರ್ಷದ ಪ್ರಾರಂಭದಲ್ಲಿ 2,38,02,397 ರೂ.ಮೌಲ್ಯದ ಕಚ್ಚಾ ರಬ್ಬರ್ ದಾಸ್ತಾನು ಇದ್ದು 31,24,67,889 ರೂ.ಮೌಲ್ಯದ ಕಚ್ಚಾ ರಬ್ಬರ್ ಖರೀದಿಸಿದೆ. ವರದಿ ರ್ಷದಲ್ಲಿ 32, 66, 97,510 ರೂ.ಮೌಲ್ಯದ ರಬ್ಬರ್ ಮಾರಾಟ ಮಾಡಿದೆ. ಸಂಘದಲ್ಲಿ ವರ್ಷಾಂತ್ಯಕ್ಕೆ 2,13,78,126 ರೂ.ಮೌಲ್ಯದ ಕಚ್ಚಾ ರಬ್ಬರ್ ದಾಸ್ತಾನು ಇದೆ. ಕಚ್ಚಾ ರಬ್ಬರ್ ವ್ಯವಹಾರದಲ್ಲಿ ಸಂಘವು ರೂ.1,01,53,664.95 ಲಾಭಗಳಿಸಿದೆ. ರಬ್ಬರ್ ಕೃಷಿ ಸಲಕರಣೆಗಳು, ರಾಸಾಯನಿಕಗಳ ಮಾರಾಟದಲ್ಲಿ 19,98,439.64 ರೂ.ಲಾಭ ಗಳಿಸಿದೆ ಎಂದು ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿಯವರು ಹೇಳಿದರು.

ರಬ್ಬರ್ ಬೆಳೆಗಾರರು ಆತಂಕ ಪಡೆಬೇಕಾಗಿಲ್ಲ:
ಕಳೆದ 10-12 ವರ್ಷಗಳಿಂದ ರಬ್ಬರ್ ಧಾರಣೆಯಲ್ಲಿನ ಏರಿಳಿತದಿಂದ ರಬ್ಬರ್ ಬೆಳೆಗಾರರು ಸಂಕಷ್ಟ ಅನುಭವಿಸಿದ್ದಾರೆ. ಬೆಳೆಗಾರರು ರಬ್ಬರ್ ಮರ ಕಡಿದಿರುವುದೂ ಉಂಟು. ಈಗ ರಬ್ಬರ್ ಬೆಳೆಗಾರರಿಗೆ ಸಿಹಿ ಸುದ್ದಿ ಸಿಕ್ಕಿದೆ. ರಬ್ಬರ್ ಧಾರಣೆ ಏರಿಕೆಯಾಗಿದೆ. ರಬ್ಬರ್ ಧಾರಣೆ ಇದೇ ರೀತಿಯಲ್ಲಿ ಮುಂದುವರಿಯುವ ಆಶಾಭಾವನೆ ಇದೆ. ಆದ್ದರಿಂದ ರಬ್ಬರ್ ಬೆಳೆಗಾರರು ಆತಂಕ ಪಡಬೇಕಾಗಿಲ್ಲ. ರಬ್ಬರ್ ಬೆಳೆ ಮುಂದುವರಿಸುವಂತೆ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿಯವರು ಹೇಳಿದರು.

ಸಂಘದಿಂದ ಸಾಮಾಜಿಕ ಸೇವೆ:
ಸಂಘವು ಪ್ರತಿವರ್ಷವೂ ಅಶಕ್ತರಿಗೆ ವೀಲ್ ಚೆಯರ್ ವಿತರಣೆ ಮಾಡುತ್ತಿದೆ. ಈ ವರ್ಷವೂ ವೀಲ್ ಚೆಯರ್, ವಾಕರ್, ವಾಕಿಂಗ್ ಸ್ಟಿಕ್ ನೀಡುವ ಮೂಲಕ ಸಾಮಾಜಿಕ ಸೇವೆ ಸಲ್ಲಿಸುತ್ತಿದೆ. ಸಂಘದ ಸದಸ್ಯರು ಸಂಘಕ್ಕೆ ರಬ್ಬರ್ ಮಾರಾಟ ಮಾಡಬೇಕು. ರಾಸಾಯನಿಕ ಗೊಬ್ಬರ, ರಬ್ಬರ್ ಕೃಷಿ ಸಲಕರಣೆಗಳನ್ನು ಸಂಘದಿಂದಲೇ ಖರೀದಿ ಮಾಡುವ ಮೂಲಕ ಹೆಚ್ಚಿನ ರೀತಿಯಲ್ಲಿ ವ್ಯಾಪಾರ ಮಾಡಬೇಕು. ಸಂಘದ ಅಭಿವೃದ್ಧಿಯಲ್ಲಿ ಆಡಳಿತ ಮಂಡಳಿ ಜೊತೆ ಕೈ ಜೋಡಿಸಿರುವ ಸಂಘದ ಸಿಬ್ಬಂದಿಗಳಿಗೆ ವಿಮಾ ಸೌಲಭ್ಯ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಸಾದ್ ಕೌಶಲ್ ಶೆಟ್ಟಿ ಹೇಳಿದರು.

ಅತೀ ಹೆಚ್ಚು ತೆರಿಗೆ ಪಾವತಿ:
2023-24ನೇ ಸಾಲಿನಲ್ಲಿ ಸಂಘವು 1,38,71,296 ರೂ.,ಸರಕಾರಕ್ಕೆ ತೆರಿಗೆ ಪಾವತಿ ಮಾಡಿದೆ. ಪುತ್ತೂರು ತಾಲೂಕಿನಲ್ಲಿ ಅತೀ ಹೆಚ್ಚು ಸರಕಾರಕ್ಕೆ ತೆರಿಗೆ ಪಾವತಿಸುವಲ್ಲಿ ನಮ್ಮ ಸಂಘವು ಪ್ರಥಮ ಸ್ಥಾನದಲ್ಲಿದೆ. ತ್ವರಿತ ಫೈಲಿಂಗ್ ಮತ್ತು ಸರಕು ಹಾಗೂ ಸೇವಾ ತೆರಿಗೆ ಪಾವತಿಗಾಗಿ ನಮ್ಮ ಸಂಘಕ್ಕೆ 2023-24ರ ಹಣಕಾಸು ವರ್ಷದಲ್ಲಿ ಕೇಂದ್ರೀಯ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿಯವರು ಮೆಚ್ಚುಗೆಯ ಪ್ರಮಾಣ ಪತ್ರ ನೀಡಿದ್ದಾರೆ ಎಂದು ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಹೇಳಿದರು.

ಅತೀ ಹೆಚ್ಚು ರಬ್ಬರ್ ಹಾಕಿದ ಸದಸ್ಯರಿಗೆ ಗೌರವಾರ್ಪಣೆ:
2023-24ನೇ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ರಬ್ಬರ್ ಹಾಕಿದ ತಲಾ ಮೂವರು ಸದಸ್ಯರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಿ ಸಭೆಯಲ್ಲಿ ಗೌರವಿಸಲಾಯಿತು. ಪ್ರವೀಣ್‌ಕುಮಾರ್ ಜಿ.ಗಾಣದಮೂಲೆ, ಸಂತೋಷ್ ಕೆ.ಎಮ್.,ವಾಯು ಪ್ರಭಾ ಹೆಗ್ಡೆ ಶಾಂತಿಮಾರು (ನೆಲ್ಯಾಡಿ ಕೇಂದ್ರ ಕಚೇರಿ), ತೋಮಸ್ ಝಕಾರಿಯ, ಸುಂದರ ಗೌಡ ಕೆ., ಸಂತೋಷ್‌ಕುಮಾರ್(ಕಡಬ ಶಾಖೆ), ಡಾ.ಪ್ರವೀಣ್ ಪಾರೆ, ಗಿರೀಶ್‌ಕೃಷ್ಣ, ಸುರೇಶ್‌ಕುಮಾರ್ ಸೊರಕೆ(ಪುತ್ತೂರು ಶಾಖೆ), ನವೀನ್‌ಕುಮಾರ್ ಕೆ.ನೆಟ್ಟಣಿಗೆ, ಸುಧೀಶ್ ಬಿ., ಖಲೀದ್ ಬಿ.ಹೆಚ್.,(ಈಶ್ವರಮಂಗಲ ಶಾಖೆ), ರಶ್ಮಿ ಎಮ್.ರೈ, ಪ್ರಸನ್ನಕುಮಾರ್ ಎ.ಕೆ., ಸಂತೋಷ್‌ಕುಮಾರ್ ರೈ(ಕೆಯ್ಯೂರು ರಬ್ಬರ್ ಖರೀದಿಕೇಂದ್ರ), ಹರೀಶ್ಚಂದ್ರ ಎಸ್., ಸತ್ಯಾನಂದ ಬಿ., ಪಾಪಚ್ಚನ್(ಇಚ್ಲಂಪಾಡಿ ರಬ್ಬರ್ ಖರೀದಿಕೇಂದ್ರ), ಸುಬ್ರಹ್ಮಣ್ಯ ಶಬರಾಯ, ಮ್ಯಾಥ್ಯು ವಿ.ಎಮ್., ಮಹಾಬಲ ಶೇಟ್ಟಿ(ನೆಲ್ಯಾಡಿ ಉಪಖರೀದಿ ಕೇಂದ್ರ) ಅವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ಹಿರಿಯ ರಬ್ಬರ್ ಬೆಳೆಗಾರರಿಗೆ ಸನ್ಮಾನ:
ಸಂಘದಲ್ಲಿ ವ್ಯವಹಾರ ಮಾಡಿದ ಹಿರಿಯ ರಬ್ಬರ್ ಬೆಳೆಗಾರರನ್ನು ಈ ವೇಳೆ ಗೌರವಿಸಲಾಯಿತು. ಎನ್.ವಿ.ವ್ಯಾಸ(ಕೇಂದ್ರ ಕಚೇರಿ), ವಾಸುದೇವ ಭಟ್ ಕೆ.(ಕಡಬ ಶಾಖೆ), ಗಂಗಾಧರ ಗೌಡ ಎ.(ಪುತ್ತೂರು ಶಾಖೆ), ಪ್ರಭಾಕರ ಪ್ರಭು (ಈಶ್ವರಮಂಗಲ ಶಾಖೆ),ಬಟ್ಯಪ್ಪ ರೈ (ಕೆಯ್ಯೂರು ರಬ್ಬರ್ ಖರೀದಿಕೇಂದ್ರ), ರುಕ್ಮಯ ಗೌಡ(ಇಚ್ಲಂಪಾಡಿ ರಬ್ಬರ್ ಖರೀದಿ ಕೇಂದ್ರ), ಸಾಬು ಇ.ಎಂ.(ನೆಲ್ಯಾಡಿ ಉಪಖರೀದಿ ಕೇಂದ್ರ)ಅವರನ್ನು ಸನ್ಮಾನಿಸಲಾಯಿತು.

ವೀಲ್ ಚಯರ್, ವಾಕರ್, ವಾಕಿಂಗ್ ಸ್ಟಿಕ್ ಕೊಡುಗೆ:
ಐಸಮ್ಮ ನೆಟ್ಟಣಿಗೆ ಮುಡ್ನೂರು, ಆಸ್ಯ ಉಮ್ಮ ಶಾಂತಿಮಲೆ ದೇಲಂಪಾಡಿ, ಆದಂ ಮೇನಾಲರವರಿಗೆ ವೀಲ್ ಚಯರ್ ಹಾಗೂ ಚೋಮಾರು ಮಾರ್ಲಕುಮೇರಿ ಇವರಿಗೆ ವಾಕರ್ ಮತ್ತು ಕುಸುಮ ಬೆದ್ರಾಡಿ ಇವರಿಗೆ ವಾಕಿಂಗ್ ಸ್ಟಿಕ್ ಕೊಡುಗೆಯಾಗಿ ನೀಡಲಾಯಿತು. ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಗೂ ವೀಲ್ ಚಯರ್ ಕೊಡುಗೆಯಾಗಿ ನೀಡಲಾಯಿತು.

ಖಾಸಗಿ ಮಾರಾಟಗಾರರಿಗೆ ಗೌರವಾರ್ಪಣೆ:
ಸಂಘಕ್ಕೆ ಅತೀ ಹೆಚ್ಚು ರಬ್ಬರ್ ಮಾರಾಟ ಮಾಡಿದ ಖಾಸಗಿ ಮಾರಾಟಗಾರರಾದ ಕಡಬ ಕರಾವಳಿ ಟ್ರೇಡಿಂಗ್ಸ್‌ನ ತಾಜುದ್ದೀನ್ (ಪ್ರಥಮ), ಸುಳ್ಯ ಸುಪಾರಿ ಸೆಂಟರ್‌ನ ಅಬ್ಬಾಸ್ (ದ್ವಿತೀಯ), ಅವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ಸಂಘದ ಉಪಾಧ್ಯಕ್ಷ ರಾಯ್ ಅಬ್ರಹಾಂ, ನಿರ್ದೇಶಕರಾದ ಸಿ.ಜೋರ್ಜ್‌ಕುಟ್ಟಿ, ಎನ್.ವಿ.ವ್ಯಾಸ, ರಮೇಶ್ ಕಲ್ಪುರೆ, ಸುಭಾಷ್ ನಾಯಕ್ ಎಸ್., ಸತ್ಯಾನಂದ ಬಿ., ಶ್ರೀರಾಮ ಪಕ್ಕಳ, ಗಿರೀಶ್ ಸಾಲಿಯಾನ್ ಬಿ., ಜಯರಾಮ ಬಿ., ಅರುಣಾಕ್ಷಿ, ಗ್ರೇಸಿ ನೈನಾನ್, ಬೈರ ಮುಗೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಪ್ರಭಾ ವರದಿ ಮಂಡಿಸಿದರು. ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿಯವರು ಸ್ವಾಗತಿಸಿ, ರಾಯ್ ಅಬ್ರಹಾಂ ವಂದಿಸಿದರು. ಸಿಬ್ಬಂದಿ ರುಕ್ಮಯ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here