ಪುತ್ತೂರು: ಈದ್ ಮಿಲಾದ್ ಪ್ರಯಕ್ತ ಅನಿವಾಸಿ ಭಾರತೀಯರ ತಂಡ ಬದ್ರಿಯಾ ಗಲ್ಫ್ ಫ್ರೆಂಡ್ಸ್ ಸಂಟ್ಯಾರ್ ಸಮಿತಿ ವತಿಯಿಂದ ಸಂಟ್ಯಾರ್ ಜಮಾಅತಿನವರಿಗೆ ಆನ್ಲೈನ್ ಸ್ಪರ್ಧಾ ಕಾರ್ಯಕ್ರಮ ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
“ನಮ್ಮ ಜಮಾತ್ ಹೇಗಿರಬೇಕು..? ಹಾಗೂ “ಕೆಟ್ಟ ಚಟಗಳಿಗೆ ಬಲಿಯಾಗಿ ಆತ್ಮಹತ್ಯೆಗೆ ಬಲಿಯಾಗುತ್ತಿರುವ ಯುವಸಮೂಹ” ಎಂಬ ವಿಷಯದಲ್ಲಿ ಪ್ರಬಂಧ ಸ್ಪರ್ಧೆ, ಖಿರಾಅತ್ ಪಾರಾಯಣ ಸ್ಪರ್ಧೆ, ಕ್ಯಾಲಿಗ್ರಫಿ ಸ್ಪರ್ಧೆ ಹಾಗೂ ಕ್ವಿಝ್ ಸ್ಪರ್ಧೆ ಏರ್ಪಡಿಸಿದ್ದು ಸಂಟ್ಯಾರ್ ಜಮಾತಿನ ಸುಮಾರು 250ಕ್ಕೂ ಮಿಕ್ಕ ಪುರುಷರು ಹಾಗೂ ಮಹಿಳೆಯರು ಭಾಗವಹಿಸಿದ್ದರು.
ಪ್ರಬಂಧ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಪ್ರಥಮ ಸಮದ್ ಝೆನಿತ್ ಹಾಗೂ ದ್ವಿತೀಯ ನಿಝಾರ್ ಪಾಪೆತ್ತಡ್ಕ ಮತ್ತು ಮಹಿಳೆಯರ ವಿಭಾಗದಲ್ಲಿ ಪ್ರಥಮ ಸಾಜಿದ ಕಲ್ಲರ್ಪೆ ಹಾಗೂ ದ್ವಿತೀಯ ಆಯಿಶಾ ಕಲ್ಲರ್ಪೆ, ಖಿರಾಅತ್ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಪ್ರಥಮ ನೌಶಾದ್ ಹಿಮಮಿ ಹಾಗೂ ದ್ವಿತೀಯ ಅಬ್ದುಲ್ ಕರೀಂ ಫೈಝಿ ಮತ್ತು ಮಹಿಳೆಯರ ವಿಭಾಗದಲ್ಲಿ ಪ್ರಥಮ ಹಾಫಿಝಾ ರಂಶೀನಾ ಬಳಕ್ಕ ಹಾಗೂ ದ್ವಿತೀಯ ರುಕ್ಸಾನಾ ಕೂರೇಲು, ಕ್ಯಾಲಿಗ್ರಫಿ ಸ್ಪರ್ಧೆಯಲ್ಲಿ ಪ್ರಥಮ ದಿಶಾನ, ದ್ವಿತೀಯ ಶೈಮ ಹಾಗೂ ತೃತೀಯ ಹಲೀಮತ್ ಹೈಫಾ ಮತ್ತು ಕ್ವಿಝ್ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಪ್ರಥಮ ರಿಯಾಝ್ ಬಳಕ್ಕ ಹಾಗೂ ದ್ವಿತೀಯ ಜಲೀಲ್ ಎಚ್.ಪಿ ಮತ್ತು ಮಹಿಳೆಯರ ವಿಭಾಗದಲ್ಲಿ ಪ್ರಥಮ ಸೈದಾಬಿ ಬಳಕ್ಕ ಹಾಗೂ ದ್ವಿತೀಯ ಹಫ್ಸಾನಾ ನೀರ್ಕಜೆ ವಿಜೇತರಾದರು.
ಬದ್ರಿಯಾ ಜುಮಾ ಮಸೀದಿ ಸಂಟ್ಯಾರ್ ಆಡಳಿತ ಕಮಿಟಿ ಅಧೀನದಲ್ಲಿ ಅನ್ಸಾರಿಯಾ ಯಂಗ್ಮೆನ್ಸ್ ಎಸೋಸಿಯೇಷನ್ ಸಂಟ್ಯಾರ್ ವತಿಯಿಂದ ಆಯೋಜಿಸಿದ ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಬಹುಮಾನವನ್ನು ವಿತರಿಸಲಾಯಿತು.