ಪರಿವಾರ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಮಹಾಸಭೆ

0

ರೂ.167.86 ಕೋಟಿ ವ್ಯವಹಾರ, ರೂ. 51,25,124.44 ಲಕ್ಷ ಲಾಭ, ಶೇ.14 ಡಿವಿಡೆಂಡ್

ಪುತ್ತೂರು:ಪರಿವಾರ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯು 2023-24ನೇ ಸಾಲಿನಲ್ಲಿ ರೂ.167.86 ಕೋಟಿ ವ್ಯವಹಾರ ನಡೆಸಿ ರೂ.51,25,124.44 ಲಾಭ ಗಳಿಸಿದೆ. ಸದಸ್ಯರಿಗೆ ಶೇ.14 ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ವಾರ್ಷಿಕ ಮಹಾಸಭೆಯಲ್ಲಿ ಘೋಷಣೆ ಮಾಡಿದರು.

ಸಭೆಯು ಪುತ್ತೂರು ತೆಂಕಿಲ ಬೈಪಾಸ್ ಬಳಿಯ ದರ್ಶನ್ ಸಭಾಭವನದಲ್ಲಿ ನಡೆಯಿತು. ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಸ್ಥೆಯು 1734 ಸದಸ್ಯರನ್ನು ಹೊಂದಿದೆ.ಎ ತರಗತಿ ಸದಸ್ಯರಿಂದ ರೂ.1,01,51,200, ಬಿ ತರಗತಿ ಸದಸ್ಯರಿಂದ ರೂ.1,40,700 ಹಾಗೂ ಸಿ ತರಗತಿ ಸದಸ್ಯರಿಂದ ರೂ.65,370 ಪಾಲು ಬಂಡವಾಳ ಹೊಂದಿದೆ. ರೂ. 33,24,91,454.74 ವಿವಿಧ ರೂಪದ ಠೇವಣಿ, ರೂ.1,38,12,971.96 ಕ್ಷೇಮ ನಿಧಿಯನ್ನು ಹೊಂದಿದೆ. ಸದಸ್ಯರಿಗೆ ವಿವಿಧ ರೂಪದಲ್ಲಿ ವಿತರಿಸಲಾದ ಸಾಲಗಳ ಪೈಕಿ ರೂ. 30,05,29,618 ಸಾಲ ಹೊರಬಾಕಿಯಿರುತ್ತದೆ. ವಿವಿಧ ಬ್ಯಾಂಕ್‌ಗಳಲ್ಲಿ ರೂ.8,62,61,738ನ್ನು ವಿನಿಯೋಗಿಸಲಾಗಿದೆ. ಸಂಘದಲ್ಲಿ ರೂ.21,18,922 ನಗದು ಶಿಲ್ಕು ಹಾಗೂ ರೂ.2,60,50,738 ಬ್ಯಾಂಕ್ ಶಿಲ್ಕು ಹೊಂದಿದೆ. ಲೆಕ್ಕ ಪರಿಶೋಧನೆಯಲ್ಲಿ ಸಂಘವು ಸತತವಾಗಿ ಎ ಶ್ರೇಣಿಯನ್ನು ಪಡೆದುಕೊಂಡಿದೆ. ಲಾಭಾಂಶವನ್ನು ಉಪನಿಬಂಧನೆಯಂತೆ ವಿಂಗಡಿಸಲಾಗಿದೆ ಎಂದರು.

ನಮ್ಮ ಸಂಸ್ಥೆಯು ಪ್ರಸ್ತುತ ಕೇಂದ್ರ ಕಛೇರಿ ಸೇರಿ 5 ಶಾಖೆಗಳನ್ನು ಹೊಂದಿದ್ದು ಪಾರದರ್ಶಕ ವ್ಯವಹಾರಕ್ಕಾಗಿ ಎಲ್ಲಾ ಶಾಖೆಯು ಗಣಕೀಕೃತ ಗೊಂಡಿದೆ ಮತ್ತು ಎಲ್ಲಾ ಶಾಖೆಗಳಲ್ಲಿ ಸಿಸಿ ಟಿವಿ ಮತ್ತು ನೋಟ್ ಕೌಂಟಿಂಗ್ ಮೆಶಿನ್ ಗಳನ್ನು ಅಳವಡಿಸಿರುತ್ತೇವೆ. ಮುಂದೆ ಬ್ಯಾಂಕ್‌ಗೆ ಕೋರ್ ಬ್ಯಾಂಕಿಂಗ್ ಸಾಫ್ಟ್ವೇರ್ ಅಳವಡಿಸಲಾಗುವುದು. ಸದಸ್ಯರ ಆರ್ಥಿಕ ಬೆಳವಣಿಗೆಗೆ ಠೇವಣಿ ಸಾಲ, ಮನೆ ಸಾಲ, ವೈಯಕ್ತಿಕ ಸಾಲ, ವ್ಯಾಪಾರ ಸಾಲ, ಪಿಗ್ಮಿ ಸಾಲ, ಚಿನ್ನಾಭರಣ ಸಾಲವನ್ನು ನೀಡುತ್ತಿದೆ ಮುಂದಿನ ದಿನಗಳಲ್ಲಿ ಸಂಸ್ಥೆಯು ಇನ್ನಷ್ಟು ಅಭಿವೃದ್ದಿ ಹೊಂದಬೇಕು ಇದಕ್ಕೆ ಸರ್ವಸದಸ್ಯರ ಸಹಕಾರ ಅಗತ್ಯವಾಗಿದೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ ಕೆ.ಪಿ ತಿಳಿಸಿದರು.

ಪ್ರತಿಭಾ ಪುರಸ್ಕಾರ:
ವರದಿ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.85 ಕ್ಕಿಂತ ಅಧಿಕ ಅಂಕಗಳಿಸಿದ ಚಿಂತನ್ ಪಿ.ಆರ್, ಭವಿಕ್ಷ್ ನಾಯ್ಕ್ ಟಿ.,ವೃದ್ದಿ ಎಸ್,ಶ್ರೀಶ್ಯಾಮ್ ಎಸ್.ನಾಯ್ಕ್ ,ಲಿತಾಶಾ ಎಸ್ ನಾಯ್ಕ್ , ಪಿಯುಸಿಯಲ್ಲಿ ಶೇ.75 ಕ್ಕಿಂತ ಅಧಿಕ ಅಂಕಗಳಿಸಿದ ತನುಶ್, ರಶ್ಮೀ ಆರ್ ನಾಯ್ಕ್ , ಸಂಚಿತ ಕೆ. ಪ್ರಣಾಮ್, ಸಂಚಯ್ ಎಚ್., ಸಮೃದ್ಧ ಎಮ್.ಕೆ, ಶ್ರೇಯಾಂಕ ಬಿ ನಾಯ್ಕ್ , ಇಸಿಕಾ ಕೆ, ಮಹತಿರಾಣಿ ಪಿ.ಎಸ್. ಅವನಿ ವಿ. ನಿಶ್ಮಿತಾ ಓ, ಅನನ್ಯ ಆರ್. ನಾಯ್ಕ್ , ಶ್ರೇಯಸ್ ಎ.ಸಿ.,ರಕ್ಷಣ್,ಹೃತಿಕಾ ಕೆ.ಪಿ, ತ್ರಿಶಾನ್ ಕೆ.ರವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ನಿರ್ದೇಶಕರಾದ ರಘುನಾಥ ನಾಯ್ಕ್ , ಕೊಡಂಗೆ ಬಾಲಕೃಷ್ಣ ನಾಯ್ಕ್ , ಕೆ.ರತ್ನಾಕರ ನಾಯ್ಕ್ , ಸುದೇಶ್ ಕುಮಾರ್ ಕೆ., ಟಿ.ಸದಾಶಿವ ನಾಯ್ಕ್ , ಸತೀಶ್ ನಾಯ್ಕ್ , ರಾಕೇಶ್ ಕುಮಾರ್, ಹೇಮಲತಾ ಎಸ್. ನಾಯ್ಕ್ , ಗುಲಾಬಿ ಕೆ.ಹಾಗೂ ದಿನೇಶ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪಿಗ್ಮಿ ಸಂಗ್ರಾಹಕ ರಾಜೇಶ್ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ಕೆ.ಶಂಕರ್ ನಾಯ್ಕ್ ಸ್ವಾಗತಿಸಿದರು. ಮೃತಪಟ್ಟ ಸದಸ್ಯರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ ಕೆ.ಪಿ ಲೆಕ್ಕಪರಿಶೋದನಾ ವರದಿ, ಲಾಭಾಂಶ ವಿಂಗಡಣೆಯ ಮಾಹಿತಿ ನೀಡಿದರು. ಕಡಬ ಶಾಖಾ ವ್ಯವಸ್ಥಾಪಕಿ ಶುತಿಕಾ ಕೆ.ಕಾರ್ಯಕ್ರಮ ನಿರೂಪಿಸಿ, ನಿರ್ದೇಶಕ ಗೋಪಾಲ್ ನಾಯ್ಕ್ ವಂದಿಸಿದರು. ಅಕೌಂಟೆಂಟ್ ಜಲಜಾಕ್ಷಿ,ಮಂಗಳೂರು ಶಾಖಾ ವ್ಯವಸ್ಥಾಪಕಿ ಜಯಲಕ್ಷ್ಮೀ,ಕೊಕ್ಕಡ ಶಾಖಾ ವ್ಯವಸ್ಥಾಪಕ ಸಂದೇಶ್, ಸುಳ್ಯ ಶಾಖಾ ವ್ಯವಸ್ಥಾಪಕಿ ಪ್ರತಿಭಾ, ಕಛೇರಿ ಸಹಾಯಕರಾದ ವಿಜೇತಾ,ತನುಜಾ, ಶುತಿ ಯು. ನಾಕ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸಿಬ್ಬಂದಿಗಳಾದ ಪ್ರೇಮಾನಂದ ನಾಯ್ಕ್ ,ನಂದನ್ ಕುಮಾರ್,ಕಾರ್ತಿಕ್, ಹರ್ಷಿತ್,ಗಣೇಶ್, ಯತೀನ್,ಧನುಶ್,ಪ್ರದೀತ್, ಧೀರಜ್,ಅವಿನಾಶ್ ಪಿಗ್ಮಿ ಸಂಗ್ರಾಹಕರಾದ ಪ್ರವೀಣ್, ಮನೋರಮಾ, ಬಬಿತಾ, ಅಭಿಲಾಷ್ , ಹೇಮಲತಾ ಹಾಗೂ ಗೀತಾ ಸಹಕರಿಸಿದರು.

ಸೊಸೈಟಿಯು ಬೆಳ್ಳಿ ಹಬ್ಬದ ಸಂಭ್ರಮಾಚರಣೆಯಲ್ಲಿದೆ
ಸೊಸೈಟಿಯು ಸದಸ್ಯರ ಪ್ರೊತ್ಸಾಹ ಹಾಗೂ ಸಹಕಾರದಿಂದ 24 ವರ್ಷವನ್ನು ಯಶಸ್ವಿಯಾಗಿ ಪೂರೈಸುತ್ತಿದ್ದು ಬರುವ ವರ್ಷ ಬೆಳ್ಳಿ ಹಬ್ಬದ ಸಂಭ್ರಮವನ್ನು ಆಚರಿಸಲಿದೆ. ಸಂಸ್ಥೆಯ ಮೇಲೆ ವಿಶ್ವಾಸವನ್ನಿಟ್ಟು ಠೇವಣಿ ಇರಿಸಿ ಸೊಸೈಟಿಯ ಅಭಿವೃದ್ದಿಗೆ ಕಾರಣರಾದ ಎಲ್ಲಾ ಠೇವಣಿದಾರರಿಗೆ ಮತ್ತು ಸಂಸ್ಥೆಯಲ್ಲಿ ವ್ಯವಹಾರ ಮಾಡುತ್ತಿರುವ ಪ್ರತಿಯೊಬ್ಬರಿಗೂ, ಸಂಘದ ಬೆಳವಣೆಗೆಗೆ ಸಹಕರಿಸುತ್ತಿರುವ ನಿರ್ದೇಶಕರಿಗೆ, ಸಿಬ್ಬಂದಿ ವರ್ಗದವರಿಗೆ ವಂದನೆಗಳನ್ನು ತಿಳಿಸಿದರು. ಬೆಳ್ತಂಗಡಿ ಹಾಗೂ ಸಂಘದ ಕಾರ್ಯ ವ್ಯಾಪ್ತಿಯಲ್ಲಿ ಸೊಸೈಟಿಯ ನೂತನ ಶಾಖೆಗಳನ್ನು ತೆರೆಯಲಾಗುವುದು. ಕೇಂದ್ರ ಕಚೇರಿಗೆ ಶೀಘ್ರದಲ್ಲಿಯೇ ಸ್ವಂತ ಕಟ್ಟಡ ನಿರ್ಮಿಸಲಾಗುವುದು.
ಸಂತೋಷ್ ಕುಮಾರ್ ಅಧ್ಯಕ್ಷರು

LEAVE A REPLY

Please enter your comment!
Please enter your name here