ಕೊಳ್ತಿಗೆ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ

0

ರೂ.56,511 ನಿವ್ವಳ ಲಾಭ, ಶೇ.6 ಡಿವಿಡೆಂಡ್, ಲೀಟರ್ ಹಾಲಿಗೆ 18 ಪೈಸೆ ಬೋನಸ್

ಪುತ್ತೂರು: ಕೊಳ್ತಿಗೆ ಹಾಲು ಉತ್ಪಾದಕರ ಸಹಕಾರಿ ಸಂಘದ 2023-2024ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಸೆ.22ರಂದು ಸಂಘದ ಅಧ್ಯಕ್ಷರಾದ ವಿಶ್ವನಾಥ ಶೆಟ್ಟಿ ಡಿ.ಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘವು 2023-24 ನೇ ಸಾಲಿನಲ್ಲಿ 56,511.19 ರೂ, ನಿವ್ವಳ ಲಾಭ ಗಳಿಸಿದ್ದು, ಲಾಭದಲ್ಲಿ ಶೇ.6% ಡಿವಿಡೆಂಡ್. ಹಾಲು ಉತ್ಪಾದಕರಿಗೆ ಲೀಟರ್ ಹಾಲಿಗೆ 18 ಪೈಸೆ ಬೋನಸ್ ನೀಡಲಾಗುವುದು, ಸಂಘದಲ್ಲಿ ಒಟ್ಟು 393 ಸದಸ್ಯರಿದ್ದು ರೂ.63,470 ಪಾಲು ಬಂಡವಾಳ ಇದ್ದು ವರದಿ ಸಾಲಿನಲ್ಲಿ ಒಟ್ಟು 1,55,498 ಹಾಲು ಸಂಗ್ರಹವಾಗಿದ್ದು, ವರದಿ ಸಾಲಿನಲ್ಲಿ 116 ಮಂದಿ ಹಾಲು ಹಾಕುತ್ತಿದ್ದಾರೆ ಎಂದು ಅಧ್ಯಕ್ಷರಾದ ವಿಶ್ವನಾಥ ಶೆಟ್ಟಿ ತಿಳಿಸಿದರು. ಅತೀ ಹೆಚ್ಚು ಹಾಲು ಪೂರೈಕೆ ಮಾಡಿದ ವಾಡ್ಯಪ್ಪ ಗೌಡ ಚಾಮೆತಕುಮೇರು, (ಪ್ರಥಮ) ಲತಾಕುಮಾರಿ (ದ್ವಿತೀಯ) ಹಾಗೂ ರತ್ನಾ.ಕೆ ಕೊಂರ್ಬಡ್ಕ (ತೃತೀಯ), ಇವರಿಗೆ ಬಹುಮಾನ ಕೊಟ್ಟು ಗೌರವಿಸಲಾಯಿತು. ಅಲ್ಲದೆ 2023-24 ನೇ ಸಾಲಿನಲ್ಲಿ ಹಾಲು ಹಾಕಿದ ಎಲ್ಲಾ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನವನ್ನು ನೀಡಿ ಗೌರವಿಸಲಾಯಿತು.


ದ.ಕ ಹಾಲು ಒಕ್ಕೂಟ ಮಂಗಳೂರು ಇದರ ನಿರ್ದೇಶಕರು ಹಾಗೂ ಪಾಣಾಜೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ನಾರಾಯಣ ಪ್ರಕಾಶ್.ಕೆ, ಸಂಘದ ದಕ ಹಾಲು ಒಕ್ಕೂಟದ ಪುತ್ತೂರು ವಿಭಾಗದ ವಿಸ್ತರಣಾಧಿಕಾರಿ ಮಾಲತಿ.ಪಿ, ಉಪಾಧ್ಯಾಕ್ಷರಾದ ಬೆಳ್ಯಪ್ಪ ಗೌಡ, ನಿರ್ದೇಶಕರುಗಳಾದ ತಿರುಮಲೇಶ್ವರ ಗೌಡ, ಎಸ್. ಮುರಳೀಕೃಷ್ಣ, ಬಿ. ವಾಡ್ಯಪ್ಪ ಗೌಡ, ಪಿ.ಧನಂಜಯ ಪೂಜಾರಿ, ಸುಬ್ರಹ್ಮಣ್ಯ ಗೌಡ ಸಿ.ಆರ್, ಕರುಣಾಕರ.ಕೆ, ಶಿವರಾಮ.ಕೆ, ಚಂದ್ರಾವತಿ.ಕೆ.ವಿ, ಜಲಜಾಕ್ಷಿ.ಎಂ, ಸಂಘದ ಸ್ಥಾಪಕಾಧ್ಯಕ್ಷರಾದ ಕೆ.ಆರ್.ಲಕ್ಷ್ಮಣ ಗೌಡ, ಕೊಳ್ತಿಗೆ ಗ್ರಾಮ ಪಂಚಾಯತ್ ಉಪಾಧ್ಯಾಕ್ಷ ಪ್ರಮೋದ್ ಕೆ.ಎಸ್ ಹಾಗೂ ಸಿಬ್ಬಂದಿ ವರ್ಗದವರು, ಕೊಳ್ತಿಗೆ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು/ಉಪಾಧ್ಯಕ್ಷರು/ನಿರ್ದೆಶಕರು ಹಾಗೂ ಸಿಬ್ಬಂದಿ ವರ್ಗದವರು ರೈತ ಮಿತ್ರ ಕೂಟದ ಅಧ್ಯಕ್ಷರಾದ ಮುರಲೀಧರ ಎಸ್.ಪಿ, ಕೊಳ್ತಿಗೆ ಯುವಕ ಮಂಡಲದ ಪದಾಧಿಕಾರಿಗಳು ಹಾಗೂ ಸಂಘದ ಸರ್ವಸದಸ್ಯರು ಉಪಸ್ಥಿತರಿದ್ದರು. ಮುಖ್ಯ ಅತಿಥಿಯಾಗಿದ್ದ ನಾರಾಯಣ ಪ್ರಕಾಶ್‌ರವರು, ಮಾತನಾಡಿ ಸಂಘದ ಅಭಿವೃಧಿಗೆ ದ.ಕ ಒಕ್ಕೂಟದಿಂದ ಸಂಘದ ಹಸಿರು ಮೇವು ತಾಕು ಸ್ಥಾಪಿಸಲು ಸೇರಿದಂತೆ ನನ್ನಿಂದಾಗುವ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು ಅಲ್ಲದೆ ಸಂಘದಲ್ಲಿ ೩೯೩ ಸದಸ್ಯರು ಇದ್ದು ಇನ್ನೂ ಹೆಚ್ಚು ಮಂದಿ ಹಾಲು ಪೂರೈಕೆ ಮಾಡುವಂತೆ ತಿಳಿಸಿದರು. ಕಡಿಮೆ ಷೇರು ಶುಲ್ಕ ಹಾಗೂ ಒಂದು ಮನೆಯಿಂದ ಒಂದೇ ಸದಸ್ಯರು ಇರುವ ಹಾಗೆ ಮಾಡಿ ಎಂದು ಸಲಹೆ ನೀಡಿದರು. ಹಾಲು ಒಕ್ಕೂಟದ ವಿಸ್ತಾಣಾಧಿಕಾರಿ ಮಾಲತಿ ಇವರು ಹಾಲಿನ ಗುಣ್ಣಮಟ್ಟ ಹೆಚ್ಚಿಸುವ ಕುರಿತು ಹಾಗೂ ನಂದಿನಿ ಪಶು ಆಹಾರ,ಲವಣ ಮಿಶ್ರಣ, ಸಂವೃದ್ಧಿ ಬಳಕೆ ಮತ್ತು ರೈತರ ಜಾನುವಾರು ವಿಮೆ ಹಾಗೂ ಒಕ್ಕೂಟದ ಎಲ್ಲಾ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು.


ಸಂಘದ ಸಹಾಯಕಿ ಸುಮಾ ಪ್ರಾರ್ಥಿಸಿದರು. ನಿರ್ದೇಶಕರಾದ ಮುರಳೀಕೃಷ್ಣ ಸ್ವಾಗತಿಸಿದರು, ಕಾರ್ಯದರ್ಶಿ ಹರ್ಷಿತ್.ಕೆ ವಾರ್ಷಿಕ ವರದಿಯನ್ನು ವಾಚಿಸಿದರು. ಹಿಂದಿನ ಸಭೆಯ ನಡವಳಿಯನ್ನು ಹಾಲು ಪರೀಕ್ಷಕಿ ವಿಜಯಕುಮಾರಿ ಸಬೆಯ ಮುಂದಿಟ್ಟರು. ನಿರ್ದೆಶಕರಾದ ತಿರುಮಲೇಶರ ಗೌಡ ವಂದಿಸಿದರು. ಸಹಾಯಕಿ ಸವಿತಾ ಹಾಗೂ ಯುವಕ ಮಂಡಲ ಸದಸ್ಯರು ಸಹಕರಿಸಿದರು.

ಸನ್ಮಾನ ಕಾರ್ಯಕ್ರಮ
ಸಂಘದ ಹಿರಿಯ ಸದಸ್ಯರುಗಳಾದ ಕೆ. ಸೀತಾರಾಮ, ಕೆ.ಗಂಗಾಧರ ಗೌಡ, ಎಸ್.ಗಣಪತಿ ಭಟ್, ಕೆ.ಆರ್.ಲಕ್ಷ್ಮಣ ಗೌಡ . ಕೆ.ಎಲ್.ಹರ್ಷಕುಮರಿ, ಕೆ.ರಮೇಶ ಭಟ್, ಕೃಷ್ಣಪ್ಪ ನಾಯ್ಕರವರುಗಳಿಗೆ ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕದಾದ ನಾರಾಯಣ ಪ್ರಕಾಶ್, ವಿಸ್ತರಣಾಧಿಕಾರಿ ಮಾಲತಿ.ಪಿ ಹಾಗೂ ಸಂಘದ ಅಧ್ಯಕ್ಷರು/ಉಪಾಧ್ಯಕ್ಷರು/ನಿರ್ದೇಶಕರುಗಳು ಶಾಲು,ಹಾರ,ಫಲಪುಷ್ಪ ಕೊಟ್ಟು ಸನ್ಮಾನಿಸಿ, ಗೌರವಿಸಿದರು.

LEAVE A REPLY

Please enter your comment!
Please enter your name here