ಸುಳ್ಯಪದವು ಹಾಲು ಉತ್ಪಾದಕರ ಸಂಘದ ಮಹಾಸಭೆ

0

ಬಡಗನ್ನೂರು: ಸುಳ್ಯಪದವು ಹಾಲು ಉತ್ಪಾದಕರ ಸಹಕಾರ ಸಂಘವು 2023-24ನೇ ಸಾಲಿನಲ್ಲಿ ರೂ.71010 -47 ನಿವ್ವಳ ಲಾಭಗಳಿಸಿದ್ದು, ಶೇಕಡಾ 7 ಡಿವಿಡೆಂಟ್ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ 88 ಪೈಸೆ ಬೋನಸ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ  ಅರುಣ್ ಕುಮಾರ್ ಕನ್ನಡ್ಕ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಘೋಷಣೆ ಮಾಡಿದರು.

ಸಭೆಯು ಸೆ.19ರಂದು ಸಂಘದ ಸಭಾಂಗಣದಲ್ಲಿ ನಡೆಯಿತು. ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿ  ಮಾತನಾಡಿ, ಹಾಲು ಉತ್ಪಾದಕರಿಗೆ ಒಕ್ಕೂಟದಿಂದ ದೊರೆಯುವ ಸೌಲಭ್ಯ ಮತ್ತು ವಿಮೆಯ ಸೌಲಭ್ಯಗಳು ಬಗ್ಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಉಪಾಧ್ಯಕ್ಷ ಗಿರೀಶ್ ಕೆ, ನಿರ್ದೇಶಕರಾದ ರುಕ್ಕಾಂಗದ ಪಿ, ಸುಬ್ರಹ್ಮಣ್ಯ ಭಟ್ ಬಿ, ಜಗನ್ನಾಥ ರೈ ಬಿ, ಸೂರ್ಯನಾರಾಯಣ ಭಟ್ ಬಿ, ನಾರಾಯಣ ನಾಯ್ಕ ಕೆ, ಜಗದೀಶ್ ರೈ ಬಿ, ವಿನಯಕುಮಾರಿ ಟಿ. ಎಸ್, ರಾಘವ ಕೆ, ರಮಾಕಾಂತಿ ಬಿ ಉಪಸ್ಥಿತರಿದ್ದರು. ಸಭೆಯಲ್ಲಿ ಹಾಲು ಉತ್ಪಾದಕರ ಸಂಘದ ಸದಸ್ಯರುಗಳು ಭಾಗವಹಿಸಿದ್ದರು. ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷ ಗಿರೀಶ್ ಕೆ ಸ್ವಾಗತಿಸಿದರು. ಕಾರ್ಯದರ್ಶಿ ವಿನಯ ಕುಮಾರ್ ಕೆ ವರದಿ ಮಂಡಿಸಿದರು. ಸಿಬ್ಬಂದಿ ರಾಜೇಶ್ ಎಂ ವಂದಿಸಿದರು. ವಿನಿಶಾ ಪ್ರಾರ್ಥಿಸಿದರು.

ಬಹುಮಾನ ವಿತರಣೆ: ವರದಿ ವರ್ಷದಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸಿದ ಅರುಣಕುಮಾರ್ ಕನ್ನಡ್ಕ (ಪ್ರ), ರಮಾಕಾಂತಿ ಬಿ  (ದ್ವಿ),ಜಗದೀಶ್ ರೈ. ಬಿ,  ( ತೃ) ರವರುಗಳನ್ನು ಬಹುಮಾನ ನೀಡಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here