ಸೌಂದರ್ಯ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಲಿಮಿಟೆಡ್‌ ನ ವಾರ್ಷಿಕ ಮಹಾಸಭೆ

0

ರೂ.3.73.97.132.23 ಲಾಭ, ಸದಸ್ಯರಿಗೆ 18% ಡಿವಿಡೆಂಟ್: ಸೌಂದರ್ಯ ಪಿ. ಮಂಜಪ್ಪ

ಪುತ್ತೂರು: ಬೆಂಗಳೂರಿನ ಹಾವನೂರು ಬಡಾವಣೆಯ ಹೆಸರಘಟ್ಟ ಮುಖ್ಯರಸ್ತೆಯ ಸೌಂದರ್ಯ ಸೌಧದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿ, ಪುತ್ತೂರಿನ ಎಸ್‌ಬಿಬಿ ಸೆಂಟರ್ ನಲ್ಲಿ ಶಾಖೆಯನ್ನು ಹೊಂದಿರುವ ಸೌಂದರ್ಯ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಲಿಮಿಟೆಡ್‌ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.22ರಂದು ಬೆಂಗಳೂರಿನ ಹಾವನೂರು ಬಡಾವಣೆಯಲ್ಲಿರುವ ಸೌಂದರ್ಯ ಶಾಲೆಯ ಆವರಣದಲ್ಲಿ ನಡೆಯಿತು.

ಸಹಕಾರಿಯ ಅಧ್ಯಕ್ಷರಾದ ಸೌಂದರ್ಯ ಪಿ.ಮಂಜಪ್ಪರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿ ಸರ್ವರ ಸಹಕಾರದೊಂದಿಗೆ ಸೌಂದರ್ಯ ಸೌಹಾರ್ದ  ಸಹಕಾರಿಯು ಅತ್ಯಲ್ಪ ಅವಧಿಯಲ್ಲೇ ಬಹಳಷ್ಟು ಎತ್ತರಕ್ಕೆ ಬೆಳೆದು, ಪ್ರಧಾನ ಕಚೇರಿಗೆ ಸ್ವಂತ ನಿವೇಶನದಲ್ಲಿ ವ್ಯವಸ್ಥಿತವಾದ  ಕಟ್ಟಡ “ಸೌಂದರ್ಯ ಸೌಧ” ವನ್ನು  ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದೇವೆ. “ನಿಮ್ಮಿಂದ ನಿಮಗಾಗಿ”ಎನ್ನುವ ಸಹಕಾರಿ ತತ್ವ ಅಕ್ಷರಶಃ ಅನುಷ್ಟಾನಗೊಳಿಸಿದ ಸಾರ್ಥಕ ಭಾವ ನಮ್ಮದಾಗಿದೆ. ರಾಷ್ಟ್ರೀಕೃತ ಬ್ಯಾಂಕುಗಳನ್ನು ಮೀರಿಸುವ ರೀತಿಯಲ್ಲಿ ವಿವಿಧ ಸೌಲಭ್ಯಗಳನ್ನು ಸೌಂದರ್ಯ ಸಹಕಾರಿಯು ತನ್ನ ಸದಸ್ಯರಿಗೆ ಒದಗಿಸುತ್ತಿದೆ ಎನ್ನುವ ಖುಷಿ ನಮಗಿದೆ.  ಸದಸ್ಯರ ಬಹುದಿನದ ಬೇಡಿಕೆಯಾದ ಸೇಫ್  ಲಾಕರ್ ಸೌಲಭ್ಯವನ್ನು ಕಲ್ಪಿಸಿದ್ದೇವೆ. ಪುತ್ತೂರು ಶಾಖೆಯಲ್ಲಿ ಮಾತ್ರ ಇದ್ದ ಚಿನ್ನಾಭರಣ ಅಡವಿನ ಸಾಲವನ್ನು ಪ್ರಧಾನ ಕಚೇರಿಗೂ ವಿಸ್ತರಿಸಿದ್ದೇವೆ, ಕೋರ್‌ಬ್ಯಾಂಕಿಂಗ್ ಮೂಲಕ ಸದಸ್ಯರಿಗೆ ಮತ್ತಷ್ಟು ಹತ್ತಿರವಾಗಿದ್ದೇವೆ. ವರ್ಷಾಂತ್ಯಕ್ಕೆ ಸಂಘವು ರೂ.109 ಕೋಟಿಗೂ ಹೆಚ್ಚು ಠೇವಣೆ ಹೊಂದಿದ್ದು,  ರೂ.101 ಕೋಟಿಗೂ ಹೆಚ್ಚಿನ ಸಾಲ ವಿತರಣೆ ಮಾಡಿದೆ.  ರೂ.3.73.97.132.23 ಲಾಭಗಳಿಸಿದ್ದು,‌ ಸದಸ್ಯರಿಗೆ 18% ಡಿವಿಡೆಂಟ್ ನೀಡಲಾಗುವುದು ಎಂದರು.

ಪ್ರಮುಖರಾದ ಕುಮಾರ್‌ ವೈ, ಸಹಕಾರಿಯ ಉಪಾಧ್ಯಕ್ಷರಾದ ಸುನೀತಾ ಎಂ, ನಿರ್ದೇಶಕರಾದ ಕೀರ್ತನ್‌ ಕುಮಾರ್‌ ಎಂ, ಕೃಷ್ಣ ಶೆಟ್ಟಿ ಕೆ, ಚಿನ್ನಮ್ಮ ಪಿ ಪಿ, ಪ್ರತೀಕ್ಷಾ ಕೀರ್ತನ್‌, ವರುಣ್‌ ಕುಮಾರ್‌ ಎಂ, ಕೇಶವ ಎಸ್‌, ಅರುಣ್‌ ಕುಮಾರ್‌ ಹೆಚ್‌, ರಾಜಶೇಖರಮೂರ್ತಿ ಹೆಚ್‌ ಎಂ, ರಜನಿ ಪಿ ಸೂರಿ, ಮಂಜುನಾಥ ಭಟ್‌, ಮುಖ್ಯಕಾರ್ಯನಿರ್ವಹಣಾಧಿಕಾರಿ ಹೇಮಂತ ಬಿ ವಿ, ನೆಲಮಂಗಲ ಶಾಖಾ ವ್ಯವಸ್ಥಾಪಕರಾದ ಮಹಾಂತೇಶ್‌ ಎಂ ನೆಗಳೂರು, ಪುತ್ತೂರು ಶಾಖಾ  ವ್ಯವಸ್ಥಾಪಕರಾದ ಶ್ಯಾಮಲಾ ಕೆ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಇದೇ ಸಂದರ್ಭದಲ್ಲಿ ಶೈಕ್ಷಣಿಕ ಸಾಧನೆಗಾಗಿ ಅತೀ ಹೆಚ್ಚು ಅಂಕಗಳಿಸಿದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಮುಖ್ಯಕಾರ್ಯನಿರ್ವಹಣಾಧಿಕಾರಿ  ಹೇಮಂತ ಬಿ ವಿ, ವರದಿ ವಾಚಿಸಿದರು. ಸಿಬ್ಬಂದಿ ಸಂಜನಾ ಡಿ ಸೂರಿ ಪ್ರಾರ್ಥಸಿದರು. ಪುತ್ತೂರು ಶಾಖಾ  ಸಹಾಯಕ ವ್ಯವಸ್ಥಾಪಕ ಸುಧೀರ್‌ ಬಿ.ಸ್ವಾಗತಿಸಿದರು. ಶೃಂಗಾ ವಿ ಮತ್ತು  ದಿವ್ಯಾ ಬಿ ಆರ್‌ ಕಾರ್ಯಕ್ರಮ ನಿರೂಪಿದರು. ನೆಲಮಂಗಲ ಶಾಖಾ ವ್ಯವಸ್ಥಾಪಕರಾದ ಮಹಾಂತೇಶ್‌ ಎಂ. ನೆಗಳೂರು ವಂದಿಸಿದರು.

ಪುತ್ತೂರು ಶಾಖೆಯಲ್ಲಿ ರೂ. 33,30,813.90ಲಕ್ಷ ಲಾಭ

ಪುತ್ತೂರು ಶಾಖೆಯಲ್ಲಿ ಒಟ್ಟು  1298 ಸದಸ್ಯರಿದ್ದು, ರೂ13,56,69,872.00 ಠೇವಣಿ ಇದೆ. ರೂ. 12,46,30,696.14 ಹೊರಬಾಕಿ ಸಾಲವಿದೆ. ಒಟ್ಟು 26 ಕೋಟಿ ರೂಪಾಯಿಯ ವ್ಯವಹಾರ ನಡೆಸಿ  ರೂಪಾಯಿ 33,30,812.90 ಲಾಭಗಳಿಸಿದೆ. ಪುತ್ತೂರು ಶಾಖಾ ವ್ಯವಸ್ಥಾಪಕರಾಗಿ ಶ್ಯಾಮಲ ಕೆ., ಸಹಾಯಕ ವ್ಯವಸ್ಥಾಪಕರಾದ ಸುಧೀರ್ ಬಿ., ಸಿಬ್ಬಂದಿಗಳಾಗಿ ಪ್ರಿಯದರ್ಶಿನಿ ನಿಶಾಕಿರಣ್‌, ಜಿನಿತ್ ಕೆ.ಕೆ., ಪವನ್ ಕುಮಾರ್  ಕರ್ತವ್ಯ ನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here