ಪುತ್ತೂರು: ಪುತ್ತೂರು ಮುರ ಸಮೀಪ ಸೆ.23 ರಂದು ರಾತ್ರಿ ಸುಳ್ಯದ ಆ್ಯಂಬುಲೆನ್ಸ್ ಮತ್ತು ಪಿಕಪ್ ಜೀಪು ನಡುವೆ ಅಪಘಾತ ಸಂಭವಿಸಿದ್ದು, ಆ್ಯಂಬುಲೆನ್ಸ್ ನಲ್ಲಿದ್ದ ಹಸುಳೆಗೆ ಗಾಯವಾಗಿದೆ.
ಸುಳ್ಯ ಆಸ್ಪತ್ರೆಯಲ್ಲಿ ಜನಿಸಿದ ಮಗುವಿಗೆ ಬೆಳವಣಿಗೆ ಸಂಬಂಧಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಮತ್ತು ವಿರುದ್ದ ದಿಕ್ಕಿನಿಂದ ಬರುತ್ತಿದ್ದ ಪಿಕಪ್ ನಡುವೆ ಮುರದಲ್ಲಿ ಡಿಕ್ಕಿ ಸಂಭವಿಸಿದೆ.
ಡಿಕ್ಕಿಯ ರಭಸಕ್ಕೆ ಆ್ಯಂಬುಲೆನ್ಸ್ ನಲ್ಲಿದ್ದ ಹಸುಳೆ ಮತ್ತು ಚಾಲಕನಿಗೆ ಗಾಯವಾಗಿದೆ. ಗಾಯಾಳು ಹಸುಳೆಯನ್ನು ತಕ್ಷಣ ಪುತ್ತೂರು ಚೇತನಾ ಆಸ್ಪತ್ರೆಗೆ ಕರೆದು ಕೊಂಡು ಬಂದು ಅಲ್ಲಿ ಡಾ.ಶ್ರೀಕಾಂತ್ ಅವರು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬದಲಿ ಆ್ಯಂಬುಲೆನ್ಸ್ ನಲ್ಲಿ ಮಂಗಳೂರಿಗೆ ಕಳುಹಿಸಲಾಗಿದೆ. ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರ ಪೊಲೀಸರು ತೆರಳಿದ್ದಾರೆ.
ರಿಪ್ಲೆಕ್ಟರ್ ಇಲ್ಲದೆ ಹಲವು ಅಪಘಾತ:
ಮಾಣಿ ಮೈಸೂರು ರಾಷ್ಡ್ರೀಯ ಹೆದ್ದಾರಿ ಮುರ ಜಂಕ್ಷನ್ ನಲ್ಲಿ ಹಲವು ಅಪಘಾತ ಆಗಾಗೆ ನಡೆಯುತ್ತಿದೆ. ಮುಖ್ಯರಸ್ತೆ ಮುರದಿಂದ ಕೆದಿಲ ಹೋಗುವ ರಸ್ತೆ ತಿರುವಿನಲ್ಲೇ ಅಪಘಾತಗಳು ನಡೆಯುತ್ತಿದೆ. ಈ ಭಾಗದಲ್ಲಿ ರಾತ್ರಿ ಸಮಯ ರಿಪ್ಲೆಕ್ಟರ್ ಅಳವಡಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.