ಉಪ್ಪಿನಂಗಡಿಯ ಸಹಕಾರಿ ವ್ಯವಸಾಯಿಕ ಸಂಘದಿಂದ ಕೃಷಿ ಸಾಲಗಾರರಿಗೆ ವಿಮಾ ಸೌಲಭ್ಯ: ಕೆ.ವಿ. ಪ್ರಸಾದ್

0

ಉಪ್ಪಿನಂಗಡಿ: ರೈತಾಪಿ ಕುಟುಂಬದ ಅನುಕೂಲಕ್ಕಾಗಿ ಕೃಷಿ ಸಾಲ ಪಡೆದ ರೈತ ಸದಸ್ಯರಿಗೆ ಉಪ್ಪಿನಂಗಡಿಯ ಸಹಕಾರಿ ವ್ಯವಸಾಯಿಕ ಸಂಘವು ವಿಮಾ ಸೌಲಭ್ಯ ಕಲ್ಪಿಸಿದ್ದು, ಎರಡು ಜಿಲ್ಲೆಗಳ ವ್ಯಾಪ್ತಿಯನ್ನೊಳಗೊಂಡ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧೀನದಲ್ಲಿರುವ ಸಹಕಾರಿ ಸಂಘಗಳಲ್ಲಿ ಈ ಯೋಜನೆ ಜಾರಿ ಮಾಡಿದ ಏಕೈಕ ಸಹಕಾರಿ ಸಂಘ ಎಂಬ ಹೆಗ್ಗಳಿಕೆಗೆ ನಮ್ಮ ಸಂಘ ಪಾತ್ರವಾಗಿದೆ ಎಂದು ಸಂಘದ ಅಧ್ಯಕ್ಷ ಕೆ.ವಿ. ಪ್ರಸಾದ್ ತಿಳಿಸಿದ್ದಾರೆ.‌


ಯಾವುದೇ ವಯೋಮಿತಿಯಿಲ್ಲದೆ ಸಂಘದಿಂದ ಕೃಷಿ ಸಾಲ ಪಡೆದ ರೈತ ಸದಸ್ಯರಿಗೆ ಈ ಸೌಲಭ್ಯ ಕಲ್ಪಿಸಲಾಗಿದ್ದು, ಕೃಷಿ ಸಾಲ ಪಡೆದ ರೈತ ಸದಸ್ಯರು ಆಕಸ್ಮಿಕ ಅವಘಡದಲ್ಲಿ ಮೃತಪಟ್ಟಲ್ಲಿ ಅವರ ಸಾಲವನ್ನು ವಿಮಾ ಕಂಪೆನಿ ಭರಿಸಲಿದೆ. ಈ ವಿಮಾ ಸೌಲಭ್ಯದ ಅರ್ಧ ಭಾಗ ಕಂತನ್ನು ಸಂಘವು ಭರಿಸಿದರೆ, ಇನ್ನರ್ಧ ಭಾಗವನ್ನು ಕೃಷಿ ಸಾಲ ಪಡೆಯುವ ರೈತ ಸದಸ್ಯರು ಭರಿಸಬೇಕಾಗುತ್ತದೆ. ಸಂಘದ ವಾರ್ಷಿಕ ಮಹಾಸಭೆಯಲ್ಲಿ ಈ ಯೋಜನೆಗೆ ಅನುಮೋದನೆ ಪಡೆದುಕೊಳ್ಳಲಾಗಿದೆ. ಸಹಕಾರಿ ಸಂಘವೊಂದು ಕೃಷಿ ಸಾಲ ಪಡೆಯುವ ರೈತ ಸದಸ್ಯರಿಗೆ ಇಂತಹ ವಿಮಾ ಯೋಜನೆಯೊಂದನ್ನು ಜಾರಿಗೆ ತಂದಿರುವುದು ರಾಜ್ಯದಲ್ಲೇ ಇದು ಪ್ರಥಮವಾಗಿರಬಹುದೆಂದು ಅವರು ಅಭಿಪ್ರಾಯಿಸಿದ್ದಾರೆ

LEAVE A REPLY

Please enter your comment!
Please enter your name here