ಇಚ್ಲಂಪಾಡಿ: ನಿವೃತ್ತ ಸೈನಿಕ ತೋಮಸ್ ಎಂ.ಎಂ.ಹೃದಯಾಘಾತದಿಂದ ನಿಧನ

0

ನೆಲ್ಯಾಡಿ: ನಿವೃತ್ತ ಸೈನಿಕ, ಇಚ್ಲಂಪಾಡಿ ಗ್ರಾಮದ ಮೇಪರತ್ ನಿವಾಸಿ ತೋಮಸ್ ಎಂ.ಎಂ.(80ವ.)ಅವರು ಸೆ.23ರಂದು ಸಂಜೆ ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.


ತೋಮಸ್ ಅವರಿಗೆ ಬೆಳಿಗ್ಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು ಈ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಯಲ್ಲಿದ್ದವರು ಸಂಜೆ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟರು ಎಂದು ವರದಿಯಾಗಿದೆ. ತೋಮಸ್ ಎಂ.ಎಂ.ಅವರು 20 ವರ್ಷ ಭಾರತೀಯ ಸೇನೆಯಲ್ಲಿದ್ದು ದೇಶದ ವಿವಿಧ ಕಡೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ನಿವೃತ್ತಿಯ ಬಳಿಕ ಮಂಗಳೂರು ಫಾದರ್ ಮುಲ್ಲಾರ‍್ಸ್ ಆಸ್ಪತ್ರೆಯಲ್ಲಿ ಸುಮಾರು 5 ವರ್ಷ ಕ್ಯಾಂಟಿನ್ ನಡೆಸುತ್ತಿದ್ದರು. ಆ ಬಳಿಕ ಇಚ್ಲಂಪಾಡಿಯಲ್ಲಿ ಕೃಷಿಯಲ್ಲಿ ತೊಡಗಿಕೊಂಡಿದ್ದರು.
ಮೃತರು ಪತ್ನಿ ಮೋಳಿಕುಟ್ಟಿ, ಪುತ್ರ ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ಸಾಜನ್, ಪುತ್ರಿಯರಾದ ಮೊರ್ಲಿನ್, ಮಿನಿ ಅವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಬುಧವಾರ ಮಧ್ಯಾಹ್ನ ಇಚ್ಲಂಪಾಡಿ ಸಾಲೋಮ್ ನ್ಯೂ ಇಂಡಿಯಾ ಚರ್ಚ್‌ನಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here