1,05,819.24 ಲಕ್ಷ ರೂ ಲಾಭ – ಶೇಕಡ 5ರಷ್ಟು ಡಿವಿಡೆಂಡ್- ಲೀಟರ್ ಗೆ 76 ಪೈಸೆ ಬೋನಸ್
ಪುತ್ತೂರು: ಶಾಂತಿಗೋಡು ಗ್ರಾಮದ ಆನಡ್ಕ ಹಾಲು ಉತ್ಪಾದಕರ ಸಹಕಾರ ಸಂಘದ 2023-24ನೇ ಸಾಲಿನ ಮಹಾಸಭೆ ಅಧ್ಯಕ್ಷೆ ಎಮ್ ವನಜಾಕ್ಷಿ ಅವರ ಅಧ್ಯಕ್ಷತೆಯಲ್ಲಿ ಆನಡ್ಕ ಸಂಘದ ವಠಾರದಲ್ಲಿ ಸೆ.24ರಂದು ನಡೆಯಿತು.
ಒಟ್ಟು 107 ಮಂದಿ ಸದಸ್ಯರಿದ್ದು 99,500 ಪಾಲು ಬಂಡವಾಳವಿರುತ್ತದೆ. ವರ್ಷಾಂತ್ಯಕ್ಕೆ 66,584.6 ಲೀಟರ್ ನಷ್ಟು ಹಾಲು ಸಂಗ್ರಹವಾಗಿರುತ್ತದೆ. ಸಂಘಕ್ಕೆ ರೂಪಾಯಿ 1,05,819.24 ಲಕ್ಷ ನಿವ್ವಳ ಲಾಭ ಬಂದಿದೆ. ಲಾಭಾಂಶದಲ್ಲಿ ಸದಸ್ಯರಿಗೆ ಶೇಕಡಾ 5 ಡಿವಿಡೆಂಡ್ ಹಾಗೂ ಸದಸ್ಯರಿಗೆ ಬೋನಸ್ ರೂಪಾಯಿ 50,589.54 ಅನ್ನು ಪ್ರತಿ ಲೀಟರ್ ಗೆ 76 ಪೈಸೆಯಂತೆ ನೀಡುವುದೆಂದು ಸಭೆಯಲ್ಲಿ ಅಧ್ಯಕ್ಷೆ ಎಮ್ ವನಜಾಕ್ಷಿ ಘೋಷಿಸಿದರು.
ಸಂಘದ ಅಧ್ಯಕ್ಷೆ ಯಂ ವನಜಾಕ್ಷಿ ಮಾತನಾಡಿ ಸಂಘದ ಅಭಿವೃದ್ಧಿಯ ಬಗ್ಗೆ ಮಾತನಾಡಿದರು. ಒಕ್ಕೂಟದ ವಿಸ್ತರಣಾಧಿಕಾರಿ ಶ್ರೀದೇವಿ ಮಾತನಾಡಿ ಸಂಘವು ಉತ್ತಮ ರೀತಿಯಲ್ಲಿ ನಡೆಯುತ್ತಿದ್ದು ಈ ಭಾಗದ ಹೈನುಗಾರಿಕೆಯಿಂದ ಸಂಘಕ್ಕೆ ಹೆಚ್ಚಿನ ಹಾಲು ಪೂರೈಕೆ ಮಾಡಬೇಕು. ದನಗಳಿಗೆ ಪಶು ಆಹಾರದ ಜೊತೆಗೆ ಹಸಿರು ಹುಲ್ಲು, A H ಹುಲ್ಲು ಬಳಸಿ ದನಗಳಿಗೆ ನೀಡಬೇಕು, ಹಸಿರು ಹುಲ್ಲನ್ನು ಹೆಚ್ಚು ಬೆಳೆಸಿ ಹಾಕುವುದರಿಂದ ಅದರಲ್ಲಿ ಹೆಚ್ಚು ಪೋಷಕಾಂಶ ಇರುತ್ತದೆ ಎಂದರು.
ದ.ಕ ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಡಾ. ಅನುದೀಪ್ ಮಾತನಾಡಿ ಜಾನುವಾರಗಳಿಗೆ ವಿಮೆ ನೀಡುವುದನ್ನು ತಿಳಿಸಿದರು. ಗರ್ಭ ಧರಿಸಿದ ಜಾನುವಾರುಗಳಿಗೆ ಯಾವ ರೀತಿ ಆರೈಕೆ ಮಾಡಬೇಕು. ಯಾವ ರೀತಿ ಆಹಾರ ನೀಡಬೇಕು ಎಂದು ತಿಳಿಸಿದರು. ಹೆಣ್ಣು ಕರುವಿಗೆ ಒಕ್ಕೂಟದಿಂದ ಸಿಗುವ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಹಾಲು ಒಕ್ಕೂಟದ ಪುತ್ತೂರು ವಲಯದ ನಿವೃತ್ತ ಸಹಾಯಕ ವ್ಯವಸ್ಥಾಪಕ ನಾಗೇಶ್ ಕೆ ಅವರನ್ನು ಸನ್ಮಾನಿಸಲಾಯಿತು.
ಕಳೆದ ಸಾಲಿನಲ್ಲಿ 2023-24 ಮಾರ್ಚ್ ವರೆಗೆ ಸಂಘಕ್ಕೆ ಹಾಲು ಹಾಕಿದ 55 ಸದಸ್ಯರಿಗೆ ಬಹುಮಾನ ನೀಡಲಾಯಿತು. ವೇದಿಕೆಯಲ್ಲಿ ಉಪಾಧ್ಯಕ್ಷೆ ಜ್ಯೋತಿ ನಾಯಕ್, ನಿರ್ದೇಶಕರಾದ ವಿಜಯ ಹೇಮಾವತಿ, ಸುಜಾತ, ಶಶಿಕಲಾ, ಯಂ ಸುಂದರಿ, ಲತಾ.ಪಿ, ಜಯಂತಿ, ಲಲಿತಾ ಉಪಸ್ಥಿತರಿದ್ದರು.
ಕಾರ್ಯದರ್ಶಿ ದಿವ್ಯ ವಾರ್ಷಿಕ ವರದಿ ವಾಚಿಸಿದರು. ಹೇಮಾವತಿ ಇಂದಿರಾ ಎಚ್ ಮತ್ತು ರೇಣುಕ ಪ್ರಾರ್ಥಿಸಿದರು.ನಿರ್ದೇಶಕಿ ಇಂದಿರಾ ಎಚ್ ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷೆ ಜ್ಯೋತಿ ನಾಯಕ್ ನಿರೂಪಣೆ ಮಾಡಿದರು.ಲತಾ ಪಿ ವಂದಿಸಿದರು. ಹಾಲು ಪರೀಕ್ಷಕ ರೇಣುಕಾ ಸಹಕರಿಸಿದರು.