ಪುತ್ತೂರು:ಮೂರನೇ ಬಾರಿ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭ ಮಂಗಳೂರು ಬೋಳಿಯಾರ್‌ನಲ್ಲಿ ಬಿಜೆಪಿ ವಿಜಯೋತ್ಸವ ವೇಳೆ ನಡೆದ ಅಹಿತಕರ ಘಟನೆಗೆ ಸಂಬಂಧಿಸಿ ನಾಲ್ವರು ಆರೋಪಿಗಳ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್‌ನ್ನು ಹೈಕೋರ್ಟ್ ರದ್ದುಗೊಳಿಸಿದೆ.
2024ರ ಜೂ.9ರಂದು ರಾತ್ರಿ ಬೊಳಿಯಾರು ಮುಹಿಯುದ್ದೀನ್ ಜುಮ್ಮಾ ಮಸೀದಿಯ ಎದುರುಗಡೆಯಿಂದ ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ ಮೆರವಣಿಗೆ ಹಾದು ಹೋಗುವ ಸಮಯ ಅವಾಚ್ಯ ಶಬ್ದಗಳಿಂದ ಬೈದು,ಪ್ರಚೋದನಾಕಾರಿ ಘೋಷಣೆ ಕೂಗಿ ಗಲಾಟೆ ಮಾಡುವ ಉದ್ದೇಶ ಹಾಗೂ ಕೋಮು ಪ್ರಚೋದನೆಗೆ ಪ್ರೇರೇಪಣೆ ಮಾಡಿದ್ದಾರೆ ಎಂದು ಆರೋಪಿಸಿ ಬೋಳಿಯಾರ್ ಜುಮ್ಮಾ ಮಸೀದಿ ಅಧ್ಯಕ್ಷ ಪಿ.ಕೆ.ಅಬ್ದುಲ್ಲ ಎಂಬವರು ನೀಡಿದ ದೂರಿನಂತೆ ಸ್ಥಳೀಯ ನಿವಾಸಿಗಳಾದ ಸುರೇಶ, ವಿನಯ ಕುಮಾರ್, ಸುಭಾಸ್, ರಂಜನ್ ಯಾನೆ ರಂಜಿತ್ ಮತ್ತು ಧನಂಜಯ ಎಂಬವರ ವಿರುದ್ಧ ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.ತಮ್ಮ ವಿರುದ್ಧ ದಾಖಲು ಮಾಡಿರುವ ಎಫ್ಐಆರ್ ರದ್ದುಪಡಿಸುವಂತೆ ಆರೋಪಿಗಳು ರಾಜ್ಯ ಹೈಕೋರ್ಟ್‌ನಲ್ಲಿ ಕ್ರಿಮಿನಲ್ ಪಿಟಿಷನ್ ದಾಖಲಿಸಿದ್ದರು.ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ಧ ಏಕಸದಸ್ಯ ಪೀಠ ಆರೋಪಿಗಳ ವಿರುದ್ಧದ ಎಫ್ಐಆರ್ ರದ್ದುಪಡಿಸಿ ಆದೇಶಿಸಿದೆ.ಆರೋಪಿಗಳ ಪರ ವಕೀಲರಾದ ಅರುಣ್‌ಶ್ಯಾಂ ಪುತ್ತೂರು, ಸುಯೋಗ್ ಹೇರಳೆ ವಾದಿಸಿದ್ದರು.