ಪುತ್ತೂರು,: ಕಲಿಯುಗ ಕಲೆ,ಕಾರಣಿಕ ಇತಿಹಾಸ ಪ್ರಸಿದ್ಧ ಕ್ಷೇತ್ರವಾಗಿರುವ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಮಜಲು ಸ್ವಾಮಿ ಕೊರಗಜ್ಜ,ಅಗ್ನಿ ಕಲ್ಲುರ್ಟಿ ದೇವಸ್ಥಾನದಲ್ಲಿ ಸೆ.29ರಂದು ಮಧ್ಯಾಹ್ನ ಗಂಟೆ 12ರಿಂದ ಸ್ವಾಮಿ ಕೊರಗಜ್ಜ ದೈವದ ಹಗಲು ಕೋಲ,ಅಗೇಲು ಸೇವೆ ನಡೆಯಿತು. ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.ನೂರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.
ಕ್ಷೇತ್ರದಲ್ಲಿ ಅನ್ನಛತ್ರ ಸಹಿತ ಜೀರ್ಣೋದ್ಧಾರ ಕೆಲಸಗಳು ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಹಗಲು ಕೋಲ,ಸಂಕ್ರಮಣ ಕೋಲದ ಬದಲು ಮಾನೆಚ್ಚಿಲ್,ಅಗೇಲು ಸೇವೆ ಮಾತ್ರ ನಡೆಯುತ್ತಿತ್ತು. ಸೆ.29ರಿಂದ ಹಗಲು ಕೋಲ,ಸಂಕ್ರಮಣ ಕೋಲ ಸಹಿತ ಇತರ ಸೇವೆಗಳು ಹಿಂದಿನಂತೆಯೇ ನಡೆಯಲಿದೆ ಎಂದು ಕ್ಷೇತ್ರದ ಧರ್ಮದರ್ಶಿ ಮಣಿಸ್ವಾಮಿ ತಿಳಿಸಿದ್ದಾರೆ.